Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಗಳ ನಿಗೂಢ ಸಾವು ನಾಗರಿಕರಲ್ಲಿ ಹಕ್ಕಿಜ್ವರದ ಭೀತಿ?

07:35 PM Jan 07, 2021 | Team Udayavani |

ಚಿಕ್ಕಬಳ್ಳಾಪುರ : ನೆರೆಯ ಕೇರಳ ಮತ್ತಿತರ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ ಈ ಮದ್ಯೆ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಗೋಲಾಪಕೃಷ್ಣ ಕೆರೆಯಲ್ಲಿ ಎರಡು ಹಕ್ಕಿಗಳು ನಿಗೂಢವಾಗಿ ಮೃತಪಟ್ಟು ಮತ್ತೆರಡು ಹಕ್ಕಿಗಳು ತೀವ್ರ ಅಸ್ವಸ್ಥಗೊಂಡಿದ್ದರಿಂದ ನಾಗರಿಕರಲ್ಲಿ ಹಕ್ಕಿಜ್ವರದ ಭೀತಿ ಆವರಿಸಿದೆ.

Advertisement

ಸಾಮಾನ್ಯವಾಗಿ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಹಕ್ಕಿಗಳು ವಲಸೆ ಬಂದು ಹೋಗುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ ಆದರೆ ಗುರುವಾರದಂದು ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹೆಸರಿನ ಎರಡು ಹಕ್ಕಿಗಳು ನಿಗೂಢವಾಗಿ ಮೃತಪಟ್ಟಿವೆ ಜೊತೆಗೆ ರೆಡ್ ವಾಟ್ಲೆಡ್ ಲ್ಯಾಪ್‍ವಿಂಗ್ ಮತ್ತು ಗ್ರೀನ್ ವಿಂಗ್ಡ್ ಟೀಲ್ ಹೆಸರಿನ ಹಕ್ಕಿಗಳು ತೀವ್ರ ಅಸ್ವಸ್ಥಗೊಂಡಿದೆ ಹಕ್ಕಿಗಳು ನಿಗೂಢವಾಗಿ ಮೃತಪಟ್ಟಿರುವ ಮಾಹಿತಿಯನ್ನು ಅರಿತು ಅರಣ್ಯ ಇಲಾಖೆಯ ಎಸಿಎಫ್ ಚಂದ್ರಶೇಖರ್, ತನ್ವೀರ್ ಅಹಮದ್, ಆರ್‍ಎಫ್‍ಒ ಶ್ರೀಲಕ್ಷ್ಮೀ, ಅವಿನಾಶ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಾಥರೆಡ್ಡಿ ಮತ್ತಿತರರು ಭೇಟಿ ನೀಡಿ ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕವೇ ಪಕ್ಷಿಗಳು ಯಾವ ಕಾರಣಕ್ಕೆ ಮೃತಪಟ್ಟಿವೆ ಎಂಬುದು ಖಾತ್ರಿಯಾಗಲಿದೆ.

ಪಕ್ಷಿಗಳ ಕಲರವ: ಜಿಲ್ಲೆಯ ಗೋಪಾಲಕೃಷ್ಣಕೆರೆ ವಲಸೆ ಬರುವ ಹಕ್ಕಿಗಳ ಪಾಲಿಗೆ ಒಂದು ರೀತಿಯ ಸ್ವರ್ಗವಾಗಿದೆ. ವಲಸೆ ಬರುವ ಹಕ್ಕಿಗಳು ಇಲ್ಲಿ ಸಂತತೆಯನನು ಬೆಳಸಿಕೊಂಡು ತಮ್ಮ ಪ್ರದೇಶಗಳಿಗೆ ತೆರಳುತ್ತವೆ. ಪ್ರಸ್ತುತ ಈ ಕೆರೆಯ ಅಂಗಳದಲ್ಲಿ ಗ್ರೀನ್ ಸ್ಯಾಂಡ್‍ಪೈಪರ್, ವುಡ್‍ಸ್ಯಾಂಡ್‍ಪೈಪರ್, ಪೇಟೆಂಡ್ ಸ್ಟೋರ್ಕ್, ಕಾಮನ್ ಸ್ಯಾಂಡ್‍ಪೈಪರ್, ರಿವರ್ ಟರ್ಮ್, ಕ್ರಸ್ಟರ್ಡ್ ಲಾರ್ಕ್, ಕೆಂಟಿಸ್ಟ್ ಪ್ಲವರ್, ಬ್ಲಾಕ್ ಹೆಡೆಡ್ ಎಲ್ಬೀಸ್, ಸ್ಮಾಲ್ ಪ್ರಾಟಿನ್ ಕೋಲ್ ಎಂಬ ಹೆಸರಿನ ಪಕ್ಷಿಗಳು ಈ ಕೆರೆಗೆ ವಲಸೆ ಬಂದು ನೆಲೆಸಿವೆ.

ಈಗಾಗಲೇ ಬೇರೆ ಬೇರೆ ದೇಶದಲ್ಲಿ ಹಕ್ಕಿ ಜ್ವರ ವೇಗವಾಗಿ ಹಬ್ಬುತಿದ್ದು ನಮ್ಮ ದೇಶಕ್ಕು ಸಹ ಕಾಲಿಟ್ಟಿದೆ ಕೇರಳದ ಆಲಪ್ಪುಳ್ಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತು ಕೋಳಿಗಳಲ್ಲಿ ಹಕ್ಕಿ ಜ್ವರ ಸೋಂಕು ಕೂಡ ದೃಢ ಪಟ್ಟಿದೆ ರಾಜ್ಯದಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ ಇನ್ನು ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಗೋಪಾಲಕೃಷ್ಣ ಅಮಾನಿ ಕೆರೆಯಲ್ಲಿ ಪಕ್ಷಿಗಳು ಸಾಯುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ,
ಆತಂಕಬೇಡ: ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆಯ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಎರಡು ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. 25 ದಿನಗಳ ಹಿಂದೆ ಇದೇ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ ಎರಡು ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ ಎರಡು ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿರುವುದಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ, ಜಿಲ್ಲೆಯ ನಾಗರಿಕರು ಹಕ್ಕಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ. ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next