Advertisement

ಟೆಕ್ಕಿ ನೆಲದಲ್ಲಿ ಹಕ್ಕಿ ಲೋಕ!

02:31 PM Jun 09, 2018 | |

ಮನುಷ್ಯನ ನೆರಳು ಕಂಡರೂ, ಪುರ್ರನೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಸಾಹಸದ ಕೆಲಸ. ಅಂಥೊಬ್ಬ ಸಾಹಸಿಯ ಕ್ಯಾಮೆರಾಗೆ ಸೆರೆ ಸಿಕ್ಕ ಹಕ್ಕಿಗಳು ಈಗ ಸಬ್‌ಲೈಮ್‌ ಗಲೇರಿಯದಲ್ಲಿ ಬಂದು ಕುಳಿತಿವೆ. ಖ್ಯಾತ ಛಾಯಾಗ್ರಾಹಕ ಎಂ.ಎನ್‌.ಜಯಕುಮಾರ್‌ರ ಹಕ್ಕಿ ಚಿತ್ರಗಳ, “ಬರ್ಡ್ಸ್‌ ಆ್ಯಸ್‌ ಆರ್ಟ್‌’ ಪ್ರದರ್ಶನ ಜುಲೈ 3 ರವರೆಗೆ ನಡೆಯಲಿದೆ. 

Advertisement

ವನ್ಯಜೀವಿಗಳ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯನ್ನೇ ಪ್ರವೃತ್ತಿಯಾಗಿಸಿಕೊಂಡಿರುವ ಎಂ.ಎನ್‌. ಜಯಕುಮಾರ್‌, ಭಾರತದ ಅತ್ಯುತ್ತಮ ಪ್ರಕೃತಿ ಛಾಯಾಗ್ರಾಹಕರಲ್ಲಿ ಒಬ್ಬರು. ಇವರು ವೃತ್ತಿಯಲ್ಲಿ ಅರಣ್ಯ ಅಧಿಕಾರಿಯಾಗಿರುವುದು ಮತ್ತೂಂದು ವಿಶೇಷ. 

“ಬರ್ಡ್ಸ್‌ ಆ್ಯಸ್‌ ಆರ್ಟ್‌’
ಜಯಕುಮಾರ್‌ ಅವರನ್ನು ಹಕ್ಕಿಗಳು ಸದಾ ಆಕರ್ಷಿಸುತ್ತವೆ. ಲೆಕ್ಕವಿಲ್ಲದಷ್ಟು ಸಮಯವನ್ನು ಅವರು ಹಕ್ಕಿಯ ಚಲನವಲನ, ಸಂತಾನೋತ್ಪತ್ತಿ, ಗೂಡು ಕಟ್ಟುವಿಕೆ, ಆಹಾರ ಒದಗಿಸುವಿಕೆ, ಮರಿಗಳನ್ನು ರಕ್ಷಿಸುವ ಹಾಗೂ ಸುದೀರ್ಘ‌ ಹಾರಾಟಗಳ ವೀಕ್ಷಣೆಯಲ್ಲಿ ಕಳೆದಿದ್ದಾರೆ. 2018ನ್ನು “ಹಕ್ಕಿಗಳ ವರ್ಷ’ವೆಂದು ಘೋಷಿಸಿರುವುದರಿಂದ, ಈವರೆಗೆ ಸೆರೆ ಹಿಡಿದಿರುವ ಪಕ್ಷಿಗಳ ಕಲಾತ್ಮಕ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಭಾವನೆಗಳನ್ನು ಪ್ರಚೋದಿಸುವ, ಬಣ್ಣಗಳನ್ನು ಹೊರಸೂಸುವ, ಪಕ್ಷಿಲೋಕದ ಹೊಸ ನೋಟವನ್ನು ಅನಾವರಣಗೊಳಿಸುವ ಹಕ್ಕಿಚಿತ್ರಗಳು ಇಲ್ಲಿವೆ. 

ಎಲ್ಲಿ?: ಸಬ್‌ಲೈಮ್‌ ಗಲೇರಿಯ, ಯುಬಿ ಸಿಟಿ
ಯಾವಾಗ?: ಜುಲೈ 3ರವರೆಗೆ, ಸೋಮ- ಶನಿವಾರ, ಬೆಳಿಗ್ಗೆ 11- ರಾತ್ರಿ 8

Advertisement
Advertisement

Udayavani is now on Telegram. Click here to join our channel and stay updated with the latest news.

Next