Advertisement

ಪ್ರವಚನ ಆಲಿಸುತ್ತಿದ್ದ ಗುಬ್ಬಿಗಳು!

08:31 PM Aug 02, 2019 | mahesh |

ತುಮಕೂರು ಜಿಲ್ಲೆಯ ತಾಲೂಕು ಕೇಂದ್ರ ಗುಬ್ಬಿಗೆ, ಮೊದಲು ಇದ್ದ ಹೆಸರು “ಅಮರಗೊಂಡ’. ವೀರಶೈವಾಚಾರ್ಯರಲ್ಲಿ ಪ್ರಮುಖ ಕವಿಯೆಂದು ಕರೆಯಲ್ಪಟ್ಟ ಮಲ್ಲಣಾರ್ಯನಿಂದ ಈ ಊರಿನ ಹೆಸರು “ಗುಬ್ಬಿ’ ಆಯಿತು ಎಂಬುದು ಪ್ರತೀತಿ. ಇಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲ್ಲಣಾರ್ಯನು ಪ್ರವಚನ ನೀಡುತ್ತಿದ್ದಾನೆಂದರೆ, ಅದನ್ನು ಕೇಳಲು ಭಕ್ತಾದಿಗಳು ಮುಗಿಬೀಳುತ್ತಿದ್ದರಂತೆ. ಜನರಲ್ಲದೆ, ಅದೇ ದೇಗುಲದ ಒಳಭಾಗದಲ್ಲಿ ಎರಡು ಗುಬ್ಬಿ ಮರಿಗಳು ನಿತ್ಯವೂ ಮಲ್ಲಣಾರ್ಯನ ಉಪದೇಶವನ್ನು ಆಲಿಸುತ್ತಿದ್ದವಂತೆ. ಒಮ್ಮೆ ಮಲ್ಲಣಾರ್ಯ ಪುರಾಣದ ಕತೆಯೊಂದನ್ನು ಹೇಳಿ ಮುಗಿಸುವಾಗ, ಎರಡು ಗುಬ್ಬಿಗಳು ಅಲ್ಲಿಯೇ ಸದ್ಗತಿ ಹೊಂದಿದವಂತೆ. ಕವಿ ಮಲ್ಲಣಾರ್ಯ, ಅವುಗಳ ಪೂರ್ವಜನ್ಮ ವೃತ್ತಾಂತವನ್ನು ತಿಳಿದಿದ್ದರಿಂದ, ಗುಬ್ಬಿಗಳ ಮೃತದೇಹವನ್ನು ಅಲ್ಲಿಯೇ ಸಮಾಧಿ ಮಾಡಿದ, ಎಂಬುದು ಕತೆ. ಈ ಘಟನೆಯ ನಂತರ “ಅಮರಗೊಂಡ’ವು, “ಗುಬ್ಬಿ’ ಆಗಿ ಬದಲಾಯಿತಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next