Advertisement
ಅಂದರೆ ಮೊದಲಿನ ವಿಡಿಯೋ ಮತ್ತು ಈಗಿನ ವಿಡಿಯೋ ಎರಡು ಒಂದೇ ಆಗಿದ್ದು ವಿಡಿಯೋ ಸೆರೆ ಹಿಡಿದ ಸ್ಥಳ ಮಾತ್ರ ಕೊಂಚ ಆಚೆ ಈಚೆ ಆಗಿರುವ ಕಾರಣ ಹಕ್ಕಿಯೇ ಬಂದು ರಾಷ್ಟ್ರ ಧ್ವಜವನ್ನು ಸರಿಪಡಿಸಿದ ರೀತಿಯಲ್ಲಿ ಕಂಡುಬಂದಿತ್ತು ಆದರೆ ಇದೀಗ ಇದರ ಹೊಸ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತೆರೆಯಲು ಸ್ವಲ್ಪ ಹೊತ್ತು ತೆಗೆದುಕೊಂಡಿದೆ ಈ ನಡುವೆ ಹಕ್ಕಿಯೊಂದು ಹಾರಿ ಬಂದು ಅಲ್ಲೇ ಇರುವ ತೆಂಗಿನ ಮರದ ಮೇಲೆ ಕೂರುತ್ತದೆ ಅದೇ ಹೊತ್ತಿಗೆ ರಾಷ್ಟ್ರಧ್ವಜ ಓಪನ್ ಆಗಿ ಅದರೊಳಗಿದ್ದ ಹೂಗಳು ಹೊರಬೀಳುತ್ತಿದ್ದಂತೆ ಮರದಲ್ಲಿರುವ ಹಕ್ಕಿ ಹಾರಿ ಹೋಗುತ್ತೆ ಇದು ಇನ್ನೋರ್ವರು ತೆಗೆದ ವಿಡಿಯೋದಲ್ಲಿ ಸೆರೆಯಾಗಿದೆ ಹಾಗಾಗಿ ಮೊದಲು ವೈರಲ್ ಆಗಿದ್ದ ವಿಡಿಯೋ ನೋಡಿ ಹಕ್ಕಿಯೇ ರಾಷ್ಟ್ರಧ್ವಜವನ್ನು ಬಿಡಿಸಿ ಹಾರಿ ಹೋಗಿದೆ ಎನ್ನಲಾಗಿತ್ತು ಆದರೆ ಇದು ಸುಳ್ಳು ಅಸಲಿಗೆ ಹಕ್ಕಿ ದೂರದಲ್ಲಿ ಕುಳಿತ್ತಿತ್ತು ಎನ್ನುವುದು ಸತ್ಯ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎರಡೂ ವಿಡಿಯೋ ಹರಿದಾಡುತ್ತಿದ್ದು ಜನರೇ ಗೊಂದಲವಾಗುವಂತಾಗಿದೆ.
Related Articles
Advertisement