Advertisement

ಬಿಆರ್‌ಟಿಗೂ, ಅರಸರಿಗೂ ಅವಿನಾಭವ ಸಂಬಂಧ

03:53 PM Jan 30, 2023 | Team Udayavani |

ಯಳಂದೂರು: ಬಿಳಿಗಿರಿರಂಗನಬೆಟ್ಟಕ್ಕೂ ಮೈಸೂರು ಮಹಾರಾಜರಿಗೂ ಅನಾದಿ ಕಾಲದಿಂದಲೂಅವಿನಾಭಾವ ಸಂಬಂಧವಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ಭಾನುವಾರ ಸಮೀಪದ ಕೆ. ಗುಡಿಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ 2023ನೇ ಸಾಲಿನ ಪಕ್ಷಿ ಸಮೀಕ್ಷೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ನಮ್ಮ ಪೂರ್ವಜರು ಇಲ್ಲಿಗೆ ಅನೇಕ ಸಲ ಭೇಟಿ ನೀಡುತ್ತಿದ್ದರು. ನಾನು ಕೂಡ ಇಲ್ಲಿಗೆ ಭೇಟಿ ನೀಡಿದಾಗಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋಲುತ್ತೇನೆ. ಈಗ ನಡೆಯುತ್ತಿರುವ ಪಕ್ಷಿ ಸಮೀಕ್ಷೆ ವಿಶೇಷ ಕಾರ್ಯಕ್ರಮವಾಗಿದೆ. ಈಗಾಗಲೇ ಇಲ್ಲಿ ಕಾಣ ಸಿಕ್ಕಗ್ರೇಟ್‌ ಹಾರ್ನ್ಬಿಲ್‌ ಪಕ್ಷಿ ಪ್ರಭೇದ ಈ ಕಾಡಿಗೆ ಮತ್ತಷ್ಟು ಮೆರಗು ನೀಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಕೂಡ ಆಗಿದೆ.

ಕಳೆದ ಬಾರಿ ಬಂದಿದ್ದಕ್ಕಿಂತ ಈ ಬಾರಿ ಲಂಟಾನ ಕಡಿಮೆ ಕಾಣಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ಇದಕ್ಕೆ ಅರಣ್ಯ ಇಲಾಖೆಯ ಶ್ರಮಕ್ಕೆ ನಾನು ಅಭಿನಂದನೆಸಲ್ಲಿಸುತ್ತೇನೆ. ನಮ್ಮ ಪಶ್ಚಿಮ ಘಟ್ಟಗಳು ಅಮೆಜಾನ್‌ಕಾಡಿನ ನಂತರ ವಿಭಿನ್ನ ಪ್ರಾಣಿ, ಪಕ್ಷಿ ಪ್ರಭೇದಗಳನ್ನು ಹೊಂದಿರುವ ಕಾಡಾಗಿದ್ದು ಬಿಆರ್‌ಟಿ ಕೂಡ ಪಶ್ಚಿಮಹಾಗೂ ಪೂರ್ವ ಘಟ್ಟಗಳು ಸಂಧಿಸುವ ಕಾಡಾಗಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯಮಲ್ಲೇಶಪ್ಪ ಮಾತನಾಡಿ, ವಿಶ್ವದಲ್ಲಿ 8 ಸಾವಿರ ಪಕ್ಷಿಪ್ರಭೇದವಿದ್ದು ನಮ್ಮ ದೇಶದಲ್ಲಿ ಇದರ ಶೇ. 25 ರಷ್ಟುಇದೆ. ಬಿಆರ್‌ಟಿಯಲ್ಲಿ 1939 ರಲ್ಲಿ ಪಕ್ಷಿ ತಜ್ಞ ಸಲೀಂಆಲಿ ರವರು ಮೊದಲ ಬಾರಿಗೆ ಇಲ್ಲಿ ಪಕ್ಷಿ ಗಣತಿಯನ್ನುಮಾಡಿದ್ದರು. ಆಗ ಇಲ್ಲಿ 139 ಪ್ರಭೇದದ ಪಕ್ಷಿಗಳು ಕಾಣ ಸಿಕ್ಕವು ನಂತರ 2012 ರಲ್ಲಿ ಅರಣ್ಯ ಇಲಾಖೆಯವತಿಯಿಂದ ವೈಜ್ಞಾನಿಕವಾಗಿ ಮೊದಲ ಬಾರಿಗೆ ಪಕ್ಷಿ ಸಮೀಕ್ಷೆ ಮಾಡಲಾಗಿತ್ತು. ಆಗ 272 ಪ್ರಭೇದ ಇತ್ತು ಈಗಇದು ಇನ್ನಷ್ಟು ಹೆಚ್ಚಿರುವುದು ಸಂತಸ ಮೂಡಿಸಿದೆ ಎಂದರು.

Advertisement

ಮೈಸೂರು ಕಾರ್ಯಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್‌ ಮಾತನಾಡಿ, ಪಕ್ಷಿ ಸಮೀಕ್ಷೆಗೆ ಬಂದಿರುವ ಸ್ವಯಂ ಸೇವಕರು ನಿಜವಾದರಾಯಭಾರಿಗಳಾಗಿದ್ದಾರೆ. ಇವರು ಸಮೀಕ್ಷೆ ಮಾಡಿ, ಚಲನವಲನಗಳನ್ನು ಗಮನಿಸಿ, ಇದರ ಉಪಯೋಗ,ಇದರ ಸಂರಕ್ಷಣೆ ಬಗ್ಗೆ ಹೊರ ಜಗತ್ತಿಗೆ ಸಾರುವ ಕೆಲಸವನ್ನು ಮಾಡಬೇಕು ಎಂದರು.

ಪಕ್ಷಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಎಸಿಎಫ್ ಮಹದೇವಯ್ಯ, ಕೆ. ಸುರೇಶ್‌, ಆರ್‌ಎಫ್ಒ ವಿನೋದ್‌ಗೌಡ, ಲೋಕೇಶ್‌ ಮೂರ್ತಿ, ಎಸ್‌.ಪಿ ಮಂಜುನಾಥ್‌,ಸಲೀಂ, ಪ್ರಭುಸ್ವಾಮಿ ಸೇರಿದಂತೆ ರಾಜ್ಯದ ವಿವಿಧಭಾಗಗಳಿಂದ ಅಗಮಿಸಿದ್ದ ಸ್ವಯಂ ಸೇವಕರು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ಬಿಆರ್‌ಟಿಯಲ್ಲಿ 274 ಪಕ್ಷಿ ಪ್ರಭೇದ ಪತ್ತೆ: ದೀಪ್‌ : ಬಿಆರ್‌ಟಿ ಹುಲಿ ಯೋಜನೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕಿ ದೀಪ್‌ಜೆ. ಕಂಟ್ರಾಕ್ಟರ್‌ ಮಾತನಾಡಿ, ಬಿಆರ್‌ಟಿಯಲ್ಲಿ2012 ರಲ್ಲಿ ಪಕ್ಷಿ ಸಮೀಕ್ಷೆ ಮಾಡಿದಾಗ 272ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿತ್ತು. ಈ ಬಾರಿ ಇನ್ನೆರಡು ಪ್ರಭೇದಗಳು ಸೇರಿ ಒಟ್ಟು 274 ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ. ದಾಂಡೇಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿಕಂಡುಬರುವ ಗ್ರೇಟ್‌ ಹಾರ್ನ್ಬಿಲ್‌ ಹಾಗೂ

ನಾರ್ಥನ್‌ ಪಿನ್‌ ಟೇಲ್‌ ಎಂಬ ಪಕ್ಷಿಗಳು ಈಬಾರಿ ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಕಂಡು ಬಂದಿರುವುದು ಇಲ್ಲಿನ ವಿಶೇಷವಾಗಿದೆ. ಪಕ್ಷಿ ಸಮೀಕ್ಷೆಗೆ ಸ್ವಯಂ ಸೇವಕರು, ತೆಲಂಗಾಣದಅರಣ್ಯ ಶಿಕ್ಷಣದ ವಿದ್ಯಾರ್ಥಿಗಳು ಸೇರಿ 50 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇವರ 25 ತಂಡಗಳು ಅರಣ್ಯ ಸಿಬ್ಬಂದಿ ತಂಡದೊಂದಿಗೆ ಬಿಆರ್‌ಟಿ ವಲಯದ ಸುತ್ತ ಮೂರು ದಿನಗಳ ಸಮೀಕ್ಷೆ ಮಾಡಿದ್ದು ವೈಜ್ಞಾನಿಕವಾಗಿ ಪಕ್ಷಿ ಪ್ರಭೇದವನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next