ಕಾಸರಗೋಡು: ಕುಂಬಳೆ ಆರಿ ಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸನಿಹ ಇರುವ ಬೃಹತ್ ಹಾಲೆ ಮರದಲ್ಲಿ ಬಿಳಿ ಹೊಟ್ಟೆಯ ಮೀನು ಗಿಡುಗನ ಗೂಡು ಇರುವುದರಿಂದ ಮರ ಕಡಿದುರುಳಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕುಂಬಳೆ ಗ್ರಾಮ ಪಂಚಾಯತ್‌ಗೆ ನಿರ್ದೇಶ ನೀಡಿದ್ದಾರೆ.
ಈ ಬಗ್ಗೆ “ಉದಯವಾಣಿ’ ಯಲ್ಲಿ ಜ.20 ರಂದು ವರದಿ ಪ್ರಕಟಗೊಂಡಿತ್ತು. ಕಾಸರಗೋಡು ರೇಂಜ್ ಫಾರೆಸ್ಟ್ ಅಧಿಕಾರಿ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಈ ನಿರ್ದೇಶ ನೀಡಿದ್ದಾರೆ. ಆರಿಕ್ಕಾಡಿ ಪಿ.ಎಚ್. ಸಿ. ಸಮೀಪದಲ್ಲಿ ಈ ಮರ ಇರುವುದರಿಂದ ಆರೋಗ್ಯ ಇಲಾಖೆಗೂ ಮರ ಕಡಿ ಯದಂತೆ ನಿರ್ದೇಶ ನೀಡಿ ದ್ದಾರೆ. 2 ದಿನಗಳೊಳಗೆ ದಾಖಲೆಯೊಂದಿಗೆ ಆದೇಶ ನೀಡಲಾಗುವುದೆಂದು ಅನಿಲ್ ಕುಮಾರ್ ತಿಳಿಸಿದ್ದಾರೆ.
ಮರದ ಗೆಲ್ಲುಗಳು ಆರೋಗ್ಯ ಕೇಂದ್ರಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಎಂಬುದನ್ನು ಪಂಚಾಯತ್‌ಗೆ ತಿಳಿಸಿದ ಆರೋಗ್ಯ ಅಧಿಕೃತರು ಮರವನ್ನೇ ಕಡಿದುರುಳಿಸಲು ಅಲೋಚಿಸುತ್ತಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಕಾಸರಗೋಡು ಪಕ್ಷಿ ಪ್ರೇಮಿ ತಂಡ ಬೇಸರ ವ್ಯಕ್ತ ಪಡಿಸಿತ್ತು.
ಮರವನ್ನು ಹಾಗೂ ಹಕ್ಕಿ ಕುಟುಂಬ ವನ್ನು ಸಂರಕ್ಷಿಸಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕು. ಅಪಾಯದ ಕೊಂಬೆ ಗಳನ್ನು ಅಧಿಕೃತರ ಹಾಗೂ ಪಕ್ಷಿ ಪ್ರೇಮಿಗಳ ಸಮ್ಮುಖದಲ್ಲಿ ಕಡಿದು ತೆಗೆಯಲು ಯಾವುದೇ ಅಭ್ಯಂತರವಿಲ್ಲ ವೆಂದು ಕಾಸರಗೋಡು ಪಕ್ಷಿ ಪ್ರೇಮಿ ತಂಡದ ರಾಜು ಕಿದೂರು ಮನವಿ ಮಾಡಿದ್ದರು.
1972ರ ಭಾರತೀಯ ಅರಣ್ಯ ಕಾಯಿದೆ ಸೆಕ್ಷನ್ 9ರಂತೆ ಗೂಡಿರುವ ಮರಗಳನ್ನು ಕಡಿಯುವಂತಿಲ್ಲ. ಅಲ್ಲದೆ ಬೇಸಿಗೆ ಕಾಲದಲ್ಲಿ ಮರಗಳು ಧರೆಗುರುಳುವ ಸಾಧ್ಯತೆಯೂ ಕಡಿಮೆ. ಆದ್ದರಿಂದ ಪಕ್ಷಿ ಕುಟುಂಬವನ್ನು ಸಂರಕ್ಷಿಸಬೇಕಾದ ತುರ್ತ ಅವಶ್ಯಕತೆಯಿದೆ. ಮರದ ಕೊಂಬೆಗಳಿಂದ ತೊಂದರೆಗಳಿದ್ದಲ್ಲಿ ಅವುಗಳನ್ನು ಕಡಿದು ಮರವನ್ನು ಕಾಪಾಡ ಬೇಕೆಂದು ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಮ್ಯಾಕ್ಸಿಂ ಕೊಲ್ಲಂಗಾನ ಅವರೂ ಮನವಿ ಮಾಡಿದ್ದರು.