Advertisement

ದೇಶದೆಲ್ಲೆಡೆ ಆತಂಕ ಮೂಡಿಸಿದ ಹಕ್ಕಿ ಜ್ವರ

12:57 AM Jan 07, 2021 | mahesh |

ಕೋವಿಡ್‌ ಸಾಕ್ರಾಮಿಕದ ಮಧ್ಯೆ ಈಗ ಹಕ್ಕಿ ಜ್ವರದ ಹೊಡೆತವು ಕಳವಳ ಉಂಟು ಮಾಡುತ್ತಿದೆ. ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಕೇರಳದಲ್ಲಿ ಈವರೆಗೆ 4.85 ಲಕ್ಷ ಪಕ್ಷಿಗಳು ಸಾವನ್ನಪ್ಪಿವೆ ಎಂಬ ಮಾಹಿತಿ ಇದೆ. ಈ ಪೈಕಿ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೇರಳದಲ್ಲಿ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂಬುದು ದೃಢಪಟ್ಟಿದೆ. ಕೇರಳದಲ್ಲಿ 2016 ರಲ್ಲಿಯೂ ಹಕ್ಕಿ ಜ್ವರ ಕಾಣಿಸಿ ಕೊಂಡು ಭಾರೀ ಆತಂಕ ಸೃಷ್ಟಿಸಿತ್ತು.

Advertisement

ಏವಿಯನ್‌ ಇನ್‌ಪ್ಲ್ಯೂಯೆನ್ಸ
ಹಕ್ಕಿ ಜ್ವರಕ್ಕೆ ಕಾರಣ ವಾಗುವ ಏವಿಯನ್‌ ಇನ್‌ಪ್ಲ್ಯೂಯೆನ್ಸ ಅಥವಾ ಏವಿಯನ್‌ ಪ್ಲ್ಯೂ ವೈರಸ್‌ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಇದು ಸತ್ತ ಅಥವಾ ಜೀವಂತ ಪಕ್ಷಿಗಳಿಂದ ಮನುಷ್ಯರಿಗೆ ಹರಡಬಹುದು. ಸೋಂಕಿತ ಪಕ್ಷಿಯನ್ನು ತಿನ್ನುವುದು ಅಥವಾ ಸೋಂಕಿತ ಪಕ್ಷಿ ಬಳಸಿದ ನೀರನ್ನು ಕುಡಿಯುವುದರಿಂದ ಹರಡುತ್ತದೆ.

ತಡೆಗಟ್ಟುವ ವಿಧಾನಗಳು
ಸೋಂಕಿತ ಪಕ್ಷಿಗಳಿಂದ ದೂರವಿರಿ. ಸತ್ತ ಪಕ್ಷಿಗಳ ಹತ್ತಿರ ಹೋಗಬೇಡಿ. ಮಾಂಸಾಹಾರ ಸೇವನೆಯ ಸಂದರ್ಭ ಆದಷ್ಟು ನೈಮರ್ಲಕ್ಕೆ ಆದ್ಯತೆ ನೀಡಿ. ಪಕ್ಷಿಗಳು ತಿಂದುಳಿದ ಹಣ್ಣುಗಳು, ಉದಾ ಹರಣೆಗೆ ಪೇರಳೆ, ಜಂಬು ನೇರಳೆ, ಚಿಕ್ಕು ಮೊದಲಾದ ಹಣ್ಣುಗಳನ್ನು ಸೇವಿಸದಿರು ವುದು ಒಳಿತು. ಆದಷ್ಟು ತರಕಾರಿಗಳನ್ನು ಬೇಯಿಸಿ ತಿನ್ನುವುದೇ ಸೂಕ್ತ. ಮಾಂಸಗಳನ್ನು 73.9 ಡಿ. ಸೆ.ಗಳಿ ಗಿಂತ ಅಧಿಕ ಉಷ್ಣತೆಯಲ್ಲಿ ಬೇಯಿಸಿದಾಗ ಈ ಮಾಂಸ ಸುರಕ್ಷಿತ ಎಂದು ಪರಿಗಣಿಸಲ್ಪಡುತ್ತದೆ.

ಮಾನವನಿಗೂ ಅಪಾಯಕಾರಿ
ಪಕ್ಷಿ ಜ್ವರದ ವೈರಸ್‌ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಮಾನವರಲ್ಲಿ ಹರಡುತ್ತದೆ. ಈ ವೈರಸ್‌ ತುಂಬಾ ಅಪಾಯಕಾರಿಯಾಗಿದೆ. ಇದು ಮಾನವರಲ್ಲಿ ನ್ಯುಮೋನಿಯಾ ವನ್ನು ಉಂಟುಮಾಡಿದರೆ ಅತೀ ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಹೊಸ ಕಾಯಿಲೆ ಅಲ್ಲ
ಹಕ್ಕಿ ಜ್ವರ ಹೊಸದಾಗಿ ಹುಟ್ಟಿಕೊಂಡ ಕಾಯಿಲೆಯಲ್ಲ. ನೂರಾರು ವರ್ಷಗಳ ಹಿಂದೆಯೇ ಇಟಲಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದಕ್ಕೆ ಪುರಾವೆಗಳಿವೆ. 1997ಕ್ಕೂ ಮುನ್ನವೇ ಈ ಕಾಯಿಲೆ ಅಲ್ಲಲ್ಲಿ ಪಿಡುಗಾಗಿ ಹರಡಿದೆ. 2003ರಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ಹರಡಿದ್ದ ಮಹಾಪಿಡುಗಿನಲ್ಲಿ ಕಾಯಿಲೆ ನಿಯಂತ್ರಿ ಸಲು ಒಂದೂವರೆ ಕೋಟಿ ಕೋಳಿಗಳನ್ನು ಕೊಲ್ಲಲಾಗಿತ್ತು. 2004ರಲ್ಲೂ ಮತ್ತೂಮ್ಮೆ ಸಣ್ಣ ಪ್ರಮಾಣದಲ್ಲಿ ಈ ಪಿಡುಗು ಕಾಣಿಸಿಕೊಂಡಿತ್ತು.

Advertisement

ಹಕ್ಕಿ ಜ್ವರ ರೋಗ ಲಕ್ಷಣಗಳು
ಹಕ್ಕಿ ಜ್ವರವು ಹಲವು ರೋಗಲಕ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾಗಿ ಕಫ‌, ಅತಿಸಾರ, ಜ್ವರ, ಉಸಿರಾಟದ ತೊಂದರೆಗಳು, ತಲೆನೋವು, ಸ್ನಾಯು ನೋವು, ಗಂಟಲು ನೋವು, ಹೊಟ್ಟೆಯ ಕೆಳಭಾಗ ನೋವು, ಸ್ರವಿಸುವ ಮೂಗು ಮತ್ತು ಚಡಪಡಿಕೆ ಸಂಭವಿಸಬಹುದು. ಇವುಗಳಲ್ಲಿ ಯಾವುದಾದ ರೊಂದು ಲಕ್ಷಣ ಕಾಣಿಸಿ ಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಏನೆಲ್ಲ ಅಪಾಯಕಾರಿ
ಸೋಂಕಿತ‌ ಹಕ್ಕಿಯ ಮಲ, ಮೂತ್ರ ಮತ್ತು ಉಸಿರು ರೋಗಾಣುಗಳಿಂದ (ವೈರಸ್‌) ತುಂಬಿರುತ್ತದೆ. ಪಕ್ಷಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ.. ಎಲ್ಲವೂ ವೈರಸ್‌ನಿಂದ ಕೂಡಿರುತ್ತದೆ. ಇವುಗಳ ಸಂಪರ್ಕಕ್ಕೆ ಬರುವ ಎಲ್ಲ ಪಕ್ಷಿಗಳಿಗೂ ಸೋಂಕು ತಗಲುತ್ತದೆ. ಕೋಳಿ ಫಾರಂನಲ್ಲಿ ಒಂದು ಕೋಳಿಗೆ ಸೋಂಕು ತಗಲಿದರೆ ಎಲ್ಲ ಕೋಳಿಗಳಿಗೂ ಪಸರಿಸುತ್ತದೆ.

ಯಾವ ರಾಜ್ಯಗಳಲ್ಲಿ ಹೆಚ್ಚು
ವಲಸೆ ಪಕ್ಷಿಗಳು, ಸಮುದ್ರ ಪಕ್ಷಿ, ಹಕ್ಕಿಯ ಉತ್ಪನ್ನಗಳು ವಿಶ್ವವ್ಯಾಪಿ ಹಕ್ಕಿ ಜ್ವರ ಹರಡಲು ಕಾರಣವಾಗು ತ್ತವೆ. ಸದ್ಯ ದೇಶದಲ್ಲಿ ಕೇರಳ, ಹರಿಯಾಣ, ಹಿಮಾಚಲ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಭಾದಿಸಿರುವುದು ದೃಢಪಟ್ಟಿದೆ.

ಎಚ್ಚರಿಕೆ ಇರಲಿ
ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಒಳಗಾಗುವ ಸಾಧ್ಯತೆ ಇದೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರಾಟ ಮಾಡುವರಿಗೂ, ಕತ್ತರಿಸುವವರಿಗೂ, ಪಕ್ಷಿಗಳ ಮಾಂಸದ ಅಡುಗೆ ಮಾಡುವ ವರಿಗೂ ಹಕ್ಕಿ ಜ್ವರದ ವೈರಸ್‌ ತಗಲುವ ಸಂಭವ ಇರುತ್ತದೆ.

ಎಚ್ಚರಿಕೆ ಇರಲಿ
ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಒಳಗಾಗುವ ಸಾಧ್ಯತೆ ಇದೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರಾಟ ಮಾಡುವರಿಗೂ, ಕತ್ತರಿಸುವವರಿಗೂ, ಪಕ್ಷಿಗಳ ಮಾಂಸದ ಅಡುಗೆ ಮಾಡುವ ವರಿಗೂ ಹಕ್ಕಿ ಜ್ವರದ ವೈರಸ್‌ ತಗಲುವ ಸಂಭವ ಇರುತ್ತದೆ.

ಮೊದಲ ಪ್ರಯೋಗ!
ದೇಶದಲ್ಲಿ ಮೊದಲ ಬಾರಿಗೆ ಐವರು ವಿಜ್ಞಾನಿಗಳ ತಂಡವು ಭೋಪಾಲ್‌ನ ಆನಂದ್‌ನಗರದ ಹೈ ಸೆಕ್ಯುರಿಟಿ ಅನಿಮಲ್‌ ಡಿಸೀಸ್‌ ಲ್ಯಾಬೊರೇಟರಿಯಲ್ಲಿ ಪಕ್ಷಿಗಳ ಮಾದರಿಗಳನ್ನು ಪರೀಕ್ಷಿ ಸುವಲ್ಲಿ ನಿರತರಾಗಿದ್ದಾರೆ.ಕೋವಿಡ್‌ ಮಾದರಿಗಳನ್ನು ಸಹ ಇಲ್ಲಿ ಪರಿಶೀಲಿಸಲಾಗುತ್ತಿದೆ.ಮಾನವರು ಮತ್ತು ಪಕ್ಷಿಗಳ ಮಾದರಿ ಗಳನ್ನು ಏಕಕಾಲದಲ್ಲಿ ಪರೀಕ್ಷಿಸುತ್ತಿರುವುದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next