ಹೊಸದಿಲ್ಲಿ: ಹಕ್ಕಿ ಜ್ವರದ ಭೀತಿಯ ಹಿನ್ನೆಲೆಯಲ್ಲಿ ಜಾರ್ಖಂಡ್ ನ ಬೊಕಾರೊದಲ್ಲಿ ಸಾವಿರಾರು ಕೋಳಿ ಮತ್ತು ಬಾತುಕೋಳಿಗಳ ಹತ್ಯೆ ಮಾಡಲಾಗುತ್ತಿದೆ.
ಎಚ್5ಎನ್1 ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ
ಲೋಹಂಚಲ್ ನ ಫಾರ್ಮ್ ನಲ್ಲಿ 800 ಪಕ್ಷಿಗಳು ಸಾವನ್ನಪ್ಪಿದೆ. ಫಾರ್ಮ್‌ನಲ್ಲಿ ಪ್ರೋಟೀನ್ ಭರಿತ ಕೋಳಿ ‘ಕಡಕ್‌ನಾಥ್’ ತಳಿಯಲ್ಲಿ H5N1 ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ವನಿತಾ ಟಿ20 ವಿಶ್ವಕಪ್: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಫೈನಲ್ ಕೌತುಕ
ಕೋಳಿಗಳು ಮತ್ತು ಬಾತುಕೋಳಿಗಳು ಸೇರಿದಂತೆ ಒಟ್ಟು 3,856 ಪಕ್ಷಿಗಳನ್ನು ಕೊಲ್ಲುವ ಪ್ರಕ್ರಿಯೆಯು ಪೀಡಿತ ಫಾರ್ಮ್ ನ ಒಂದು ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ ಶನಿವಾರ ಸಂಜೆ ಪ್ರಾರಂಭವಾಯಿತು ಎಂದು ಎಂದು ರಾಂಚಿಯ ಪ್ರಾಣಿ ಆರೋಗ್ಯ ಮತ್ತು ಉತ್ಪಾದನಾ ಸಂಸ್ಥೆ ನಿರ್ದೇಶಕ ಡಾ ಬಿಪಿನ್ ಬಿಹಾರಿ ಮಾತಾ ತಿಳಿಸಿದ್ದಾರೆ.
ಹಕ್ಕಿ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಚ್ಚರಿಕೆ ಘೋಷಿಸಲಾಗಿದೆ ಎಂದು ಜಾರ್ಖಂಡ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅರುಣ್ ಕುಮಾರ್ ಸಿಂಗ್ ಈ ಹಿಂದೆ ಹೇಳಿದ್ದಾರೆ.