Advertisement
ಹೊರರಾಜ್ಯಗಳಿಂದ ಕೋಳಿತುಂಬಿ ಕೊಂಡು ಬರುವ ವಾಹನಗಳನ್ನು ತಪಾಸಣೆ ಹಾಗೂ ಹಕ್ಕಿ ಮೇಲೆ ನಿಯಂತ್ರಣ ಕೈಗೊಳ್ಳಲು ಪಶು ಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಬಿರುಸಿನ ತಪಾಸಣೆ ಆರಂಭಿಸಿದ್ದಾರೆ. ಈ ಕುರಿತು ಜಿಪಂ ಸಿಇಒ ಆದೇಶದ ಮೆರೆಗೆ ಪಶು ಸಂಗೋಪನಾ ಇಲಾಖೆಯು ಈಗಾಗಲೇ ಫೆ. 25ರಿಂದ ತಾಲೂಕಿನ ಖಜೂರಿ ಗಡಿ ಮತ್ತು ಹಿರೋಳಿ ಗಡಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಕೋಳಿ ಸಾಗಾಣೆಕೆ ವಾಹನ ತಪಾಸಣೆ ಕೋಳಿಗಳ ಆರೋಗ್ಯದ ಬಗ್ಗೆ ವೈದ್ಯರ ದೃಢೀಕರಣ ಪ್ರಮಾಣ ಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
Related Articles
Advertisement
ಚೆಕ್‌ಪೋಸ್ಟ್‌ಗೆ ನಿಯೋಜನೆ
ಖಜೂರಿ ಚೆಕ್ ಪೋಸ್ಟ್‌ನಲ್ಲಿ ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಯ ಡಾ| ಸಚಿನ್ ಪಾತಾಳೆ, ಡಾ| ಮಂಜುನಾಥ ಬಿರಾದಾರ, ಸಿಬ್ಬಂದಿ ಮಹಿಬೂಬಸಾಬ್, ಮಹೇಶ, ಜಯಾನಂದ ಜಮಾದಾರ, ರಾಜಕುಮಾರ, ಶಿವಲಿಂಗಪ್ಪ ಸಾವಳಗಿ, ವಿಜಯಕುಮಾರ ಕುಂಬಾರ, ಬಾಬುರಾವ್ ಚವಾಳೆ, ಶ್ರೀಪಾದ, ಜಗನಾಥ ಕುಂಬಾರ, ನಾಗರಾಜ, ನೀಲಕಂಠ ಕೋಟೆ, ಶ್ರೀಕಾಂತ ಕಾಪ್ಸೆ, ಅಬ್ದುಲ್ ಗಫರ್, ಶರಣಯ್ಯ ಸ್ವಾಮಿ ಅವರ ನಿಯೋಜಿಸಲಾಗಿದೆ.
ಹಿರೋಳಿ ಚೆಕ್‌ಪೋಸ್ಟ್‌ನಲ್ಲಿ ನೋಡಲ್ ಅಧಿಕಾರಿ ಡಾ| ಮಹಾಂತೇಶ ಪಾಟೀಲ, ಡಾ| ಉದಯಕುಮಾರ, ಸಿಬ್ಬಂದಿ ಆದಿಲ್ ಅನ್ಸಾರಿ, ದಯಾನಂದ, ವಿಠ್ಠಲ ರೆಡ್ಡಿ, ಮಹಾಂತಪ್ಪ ಕಂಬಾರ, ಷಣ್ಮುಯ್ಯ, ಕಾಶಿನಾಥ, ರಮೇಶ ಹಾರಕೂಡೆ, ರಾಜು, ರವೀಂದ್ರ ಹೂಗಾರ, ಶಿವಾನಂದ, ಶಾಂತಕುಮಾರ ಹಿರೇಮಠ, ಗಂಗಾಧರ ಹಿರೇಮಠ, ಚಂದ್ರಕಾಂತ ಕುಲಕರ್ಣಿ ಮತ್ತಿತರು ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿದೆ.
ಮುಂಜಾಗ್ರತ ಕ್ರಮ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಹಿರೋಳ್ಳಿ ಮತ್ತು ಖಜೂರಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಕೋಳಿಗಳ ಆರೋಗ್ಯವನ್ನು ತಪಾಸಣೆ ಕೈಗೊಳ್ಳಲಾಗುತ್ತಿದೆ. ಆದರೆ ಸಾಗಾಣೆಗೆ ಸಂಪೂರ್ಣವಾಗಿ ತಡೆಯೋಡ್ಡುತ್ತಿಲ್ಲ. ಕೋಳಿಗಳ ಪರೀಕ್ಷೆ ಮಾದರಿ ಪಡೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ನಮ್ಮಲ್ಲಿ ಹಕ್ಕಿಜ್ವರ ಬರುವುದು ತೀರಾ ಕಡಿಮೆ ಇದೆ. ಕೋಳಿ ಫಾರಂಗಳಿಲ್ಲ. ಮಹಾರಾಷ್ಟ್ರದಲ್ಲೇ ಹೆಚ್ಚಿನ ಕೋಳಿ ಫಾರಂ ಇರುವುದರಿಂದ ಅಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯೋಗಾಲಯಕ್ಕೆ ನಿರಂತರವಾಗಿ ಶಾಂಪಲ್‌ಗಳು ರವಾನಿಸಿ ಮುಂಜಾಗ್ರತೆ ಕ್ರಮ ವಹಿಸಲಾಗುತ್ತಿದೆ. -ಡಾ| ಸಂಜಯ ರೆಡ್ಡಿ, ತಾಪಂ ಪ್ರಭಾರಿ ಇಒ ಮತ್ತು ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಆಳಂದ