Advertisement

ಬೆಂಗಳೂರಿನಲ್ಲಿ ಜ.ಬಿಪಿನ್‌ ರಾವತ್‌ಗೆ ಶ್ರದ್ಧಾಂಜಲಿ

10:36 AM Dec 12, 2021 | Team Udayavani |

ಬೆಂಗಳೂರು: ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯಿಂದ ಶನಿವಾರ ನಗರದ ಟೌನ್‌ಹಾಲ್‌ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಡಿಎಸ್‌ ಜ.ಬಿಪಿನ್‌ ರಾವತ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಕಾರ್ಯಕಾರಿ ಸದಸ್ಯ ರಾಮ್‌ ಮಾಧವ್‌, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌, ವಿಭೂತಿಪುರ ಸ್ವಾಮೀಜಿ, ಬ್ರಿಗೇಡಿ ಯರ್‌ ರವಿ ಮುನಿಸ್ವಾಮಿ, ಕರ್ನಾಟಕ ಅಂಗವಿಕಲ ಕಿ.ದಾ ಸಂಘದ ಗೋಪಿನಾಥ್‌, ನಟ, ನಟಿಯರು ಸೇನೆಯ ಹಿರಿಯ ಅಧಿಕಾರಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ಚಿಂತಕರು ಭಾಗವ ಹಿಸಿ, ನುಡಿ ನಮನ ಸಲ್ಲಿಸಿದ್ದರು.

ಈ ವೇಳೆ ಮಾತನಾಡಿದ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌, ಜ.ಬಿಪಿನ್‌ ರಾವತ್‌ ಅವರ ಸಾವನ್ನು ಸಂಭ್ರಮಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಮಾತನಾಡಿ, ಜ.ರಾವತ್‌ ಅವರು ಮೂರೂ ಸೇನೆಗಳ ದಂಡನಾಯಕರಾಗಿ ರಕ್ಷಣೆಯ ಹೊಣೆ ಹೊತ್ತು ದೇಶವನ್ನು ಮುನ್ನಡೆಸಿದ್ದಾರೆ.

ಇದನ್ನೂ ಓದಿ;- ಮಕ್ಕಳಿಗೆ ಪೌಷ್ಟಿಕ ಆಹಾರ ಲಾಭ ತಲುಪಲಿ

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾವಿನ ಕುರಿತ ಅನೇಕ ವಿಕೃತಿಗಳನ್ನು ಮರೆದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ವಿಯಟ್ನಾಮ್‌ ವಿವೇಕಾನಂದ ಕೇಂದ್ರದ ನಿರ್ದೇಶಕರಾಗಿದ್ದ ಜಿ.ಬಿ.ಹರೀಶ್‌ ಮಾತನಾಡಿ, ಸೈನಿಕರ ತ್ಯಾಗ ಬಲಿದಾನಗಳಿಗೆ ಸಮಾಜ ಸಂವೆ ದನೆಯಿಂದ ಮಿಡಿಯಬೇಕು. ಕಲಾವಿದರು ಕವಿಗಳು ಸಿನಿಮಾ ತಂತ್ರಜ್ಞರು ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸೈನಿಕರ ಬಲಿದಾನವನ್ನು ಸ್ಮರಿಸಬೇಕು ಎಂದರು.

Advertisement

ನಟಿ ಮಾಳವಿಕಾ ಅವಿನಾಶ್‌ ಮಾತನಾಡಿ, ಜನರಲ್‌ ರಾವತ್‌ ಅವರು ದೇಶದ ಮೂರು ಸೇನಾ ವಿಭಾಗಗಳಿಗೆ ಮುಖ್ಯಸ್ಥರಾಗಿದ್ದು ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಅವರ ಸಾವನ್ನು ಸಂಭ್ರಮಿಸಿದ ವಿಕೃತಿಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಿರುವುದು ಸ್ವಾಗತಾರ್ಹ ಎಂದರು. ಕ್ಯಾಪ್ಟನ್‌ ನವೀನ್‌ ನಾಗಪ್ಪ, ಹಿರಿಯ ನಟಿ ತಾರಾ ಅನುರಾಧ, ಸಂತ ರಾದ ಅಭಿನವ ಹಾಲಶ್ರೀ ಸ್ವಾಮಿಜಿ, ಹಿರಿಯ ನಟ ಸೇತುರಾಮ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾದ ಸುನೀಲ್‌ ಪುರಾಣಿಕ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next