Advertisement

ಅರುಣಾಚಲದ ಮುಂಚೂಣಿ ನೆಲೆಗೆಳಿಗೆ ಭೇಟಿ ನೀಡಿದ ರಾವತ್ : ಸೇನಾ ಸಿದ್ಧತೆ ಪರಿಶೀಲನೆ

09:58 PM Jan 03, 2021 | Team Udayavani |

ನವದೆಹಲಿ: ಅರುಣಾಚಲ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸೇನಾ ಪೋಸ್ಟ್‌ಗಳಿಗೆ 2 ದಿನಗಳ ಭೇಟಿ ನೀಡಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಭಾರತೀಯ ಪಡೆಗಳ ಸಿದ್ಧತೆಯನ್ನು ಹೊಗಳಿದ್ದಾರೆ.

Advertisement

“”ಸಶಸ್ತ್ರ ಪಡೆಗಳ ಸಿಬ್ಬಂದಿಯಲ್ಲಿ ಹೆಚ್ಚಿನ ಮನೋಸ್ಥೈರ್ಯ ಹಾಗೂ ಪ್ರೇರಣೆ ಕಂಡುಬರುತ್ತಿದ್ದು ಒಂದು ವೇಳೆ ಶತ್ರುಪಡೆಗಳಿಂದ ಯಾವುದೇ ಸವಾಲು ಎದುರಾದರೂ , ನಮ್ಮವರು ವಿಜಯವನ್ನು ಖಾತ್ರಿ ಪಡಿಸಲಿದ್ದಾರೆ” ಎಂದಿದ್ದಾರೆ.

ಚೀನಾ ಮತ್ತು ಭಾರತದ ನಡುವೆ ಕಳೆದ ಎಂಟು ತಿಂಗಳಿಂದ ಬಿಕ್ಕಟ್ಟು ಮುಂದುವರಿದಿದ್ದು, ಈ ಸಮಯದಲ್ಲೇ ಎರಡು ಪ್ರಮುಖ ಆಯಕಟ್ಟಿನ ಪ್ರದೇಶಗಳಿಗೆ ರಾವತ್‌ ಭೇಟಿ ನೀಡಿರುವುದು ಮಹತ್ವ ಪಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈನಿಕರು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವನ್ನು ಬಳಸಿಕೊಂಡು ನವೀನ ಕಣ್ಗಾವಲು ಕ್ರಮಗಳನ್ನು ಪಾಲಿಸುತ್ತಿರುವುದನ್ನು ಶ್ಲಾಘಿಸಿದ್ದಾರೆ. ಶನಿವಾರ ಮತ್ತು ಭಾನುವಾರ ರಾವತ್‌ ದಿಂಬಾಂಗ್‌ ಕಣಿವೆ, ಸುಬಾನ್ಸ್ರಿ ಕಣಿವೆಯ ಸೇನಾ ಚೆಕ್‌ ಪೋಸ್ಟ್ ಗಳಿಗೆ ಭೇಟಿ ನೀಡಿದ್ದಷ್ಟೇ ಅಲ್ಲದೇ, ಇಂಡೋ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಸಿಬ್ಬಂದಿಯ ಜತೆಗೂ ಮಾತುಕತೆಯಾಡಿದ್ದಾರೆ.

ಇದನ್ನೂ ಓದಿ:ಅಮಿತ್ ಶಾ ಮತ್ತು ಹಿಂದೂ ದೇವತೆಗಳ ಅಪಹಾಸ್ಯ ಮಾಡಿದ ಕಾಮಿಡಿಯನ್ ಮುನಾವರ್ ಫಾರೂಕಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next