ಗಂಗಾವತಿ: ನಗರದ ಇಸ್ಲಾಂಪುರ ರಸ್ತೆಯಲ್ಲಿರುವ ವೃತ್ತವೊಂದಕ್ಕೆ ಇತ್ತೀಚೆಗೆ ನಿಧನರಾದ ಭಾರತೀಯ ಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಹೆಸರನ್ನು ನಾಮಕರಣ ಮಾಡಿ ವೃತ್ತ ಉದ್ಘಾಟನೆ ಮಾಡಲಾಗಿದೆ.
ಇದೀಗ ವೃತ್ತಕ್ಕೆ ನಾಮಕರಣ ಮಾಡಿದ ಬಗ್ಗೆ ವಿವಾದ ಉಂಟಾಗಿದ್ದು ಇಸ್ಲಾಂಪುರದ ಸ್ಥಳೀಯರು ನಾಮಫಲಕವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.ಇದರಿಂದ ಇಸ್ಲಾಂಪುರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಸ್ಥಳಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ತಾಲೂಕಾ ಆಡಳಿತದ ಅಧಿಕಾರಿಗಳು ನಗರಸಭೆ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ .
ದೇಶಕ್ಕಾಗಿ ತಮ್ಮ ಜೀವನವನ್ನು ಹುತಾತ್ಮ ಗೊಳಿಸಿಕೊಂಡ ಬಿಪಿನ್ ರಾವತ್ ಅವರ ಹೆಸರಿನಲ್ಲಿ ಇಸ್ಲಾಂಪುರದ ರಸ್ತೆಯ ವೃತ್ತದಲ್ಲಿ ನಾಮಫಲಕ ಅಳವಡಿಸಿ ವೃತ್ತ ಎಂದು ಉದ್ಘಾಟಿಸಲಾಗಿದೆ.ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಬಿಪಿನ್ ರಾವತ್ ದೇಶಭಕ್ತರಾಗಿದ್ದು ಅವರನ್ನು ಸರ್ವಜನರು ಸ್ಮರಿಸಬೇಕು ಆದ್ದರಿಂದ ಯುವಜನರಿಗೆ ಸ್ಫೂರ್ತಿ ಆಗಲೆಂದು ವೃತ್ತ ನಾಮಕರಣ ಮಾಡಲಾಗಿದೆ ಆದ್ದರಿಂದ ಇದನ್ನು ತೆರವುಗೊಳಿಸುವ ಪ್ರಶ್ನೆನೇ ಇಲ್ಲ ಈ ಹಿಂದೆ ಆಡಳಿತ ನಡೆಸಿದವರು ನಗರದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ವೃತ್ತಗಳ ನಿರ್ಮಾಣ ಮಾಡಿದ್ದಾರೆ ಇದೀಗ ಯಾಕೆಬಖ್ಯಾತೆ ತೆಗೆದಿದ್ದಾರೆ . ಈ ದೇಶದಲ್ಲಿರುವ ಪ್ರತಿಯೊಬ್ಬರೂ ಸೇನೆಯನ್ನ ಜನರನ್ನ ಪ್ರೀತಿ ಮಾಡಬೇಕು ರಾಜಕೀಯ ಕಾರಣಕ್ಕಾಗಿ ಯಾರನ್ನೂ ಟೀಕಿಸಬಾರದು.ಚುನಾಯಿತ ಜನಪ್ರತಿನಿಧಿ ಅಲ್ಲದವರ ಜೊತೆ ವಕ್ಫ್ ಇಲಾಖೆಯ ವಾಣಿಜ್ಯ ಮಳಿಗೆಗಳನ್ನು ಉದ್ಘಾಟನೆ ಮಾಡಿಸುವ ಮುಖಂಡರು ದೇಶಭಕ್ತ ಬಿಪಿನ್ ರಾವತ್ ವೃತ್ತ ನಾಮಫಲಕ ಉದ್ಘಾಟನೆಗೆ ಯಾಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ಪೊಲೀಸರು ಇಂಥ ಸಂಘರ್ಷ ಮತ್ತು ಗೊಂದಲ ಉಂಟು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಾಂತಿ ಕಾಪಾಡುವಂತೆ ಶಾಸಕ ಪರಣ್ಣ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ವೃತ್ತ ನಾಮಫಲಕ ತೆರವಿಗೆ ಆಗ್ರಹ : ಈ ಹಿಂದೆ ಸ್ಥಳೀಯರು 2015ರಲ್ಲಿ ನಗರಸಭೆಯಲ್ಲಿ ಇಸ್ಲಾಂಪುರ್ ರಸ್ತೆಯಲ್ಲಿರುವ ವೃತ್ತಕ್ಕೆ ಇಸ್ಲಾಂಪುರ ವೃತ್ತ ಎಂದು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದರೂ ಆಗ ನಗರಸಭೆ ಪರವಾನಗಿ ನೀಡಿದೆ ಈಗ ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಬಿಪಿನ್ ರಾವತ್ ಅವರ ಹೆಸರನ್ನು ಇಲ್ಲಿ ನಾಮಕರಣ ಮಾಡಿ ಗೊಂದಲ ಮೂಡಿಸುತ್ತಿದ್ದಾರೆ ಇದು ಸರಿಯಲ್ಲ ಬಿಪಿನ್ ರಾವತ್ ಹೆಸರಿನಲ್ಲಿ ಬೃಹತ್ ವೃತ್ತ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡುತ್ತೇವೆ ಈಗ ಹಾಕಿರುವ ನಾವು ನಾಮಫಲಕವನ್ನು ತೆರವುಗೊಳಿಸುವಂತೆ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಒತ್ತಾಯಿಸಿದ್ದಾರೆ .
ನಿಷೇಧಾಜ್ಞೆ ಜಾರಿ : ಬಿಪಿನ್ ರಾವತ್ ವೃತ್ತ ನಿರ್ಮಾಣ ನಾಮಫಲಕ ಅಳವಡಿಕೆ ಮಾಡಿರುವ ಕುರಿತು ಇಸ್ಲಾಂಪುರದಲ್ಲಿ ವಿವಾದ ಉಂಟಾಗಿದ್ದು ಶಾಂತಿಯನ್ನು ಕಾಪಾಡಲು ತಾಲೂಕು ಆಡಳಿತ ಇಸ್ಲಾಂಪುರಕ್ಕೆ ಸೀಮಿತಗೊಳಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ 4 ಜನರಿಗೂ ಹೆಚ್ಚು ಜನ ಸೇರಿ ಗುಂಪುಗೂಡಿ ತಿರುಗಾಡಬಾರದು ಯಾವುದೇ ಕಾರ್ಯಕ್ರಮಗಳನ್ನ ಪ್ರತಿಭಟನೆಯನ್ನು ಮಾಡದಂತೆ ಸೂಚನೆ ನೀಡಲಾಗಿದೆ .ಇಲ್ಲಿಯ ಪ್ರತಿಯೊಂದು ಘಟನೆಗಳನ್ನು ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದು ತಹಸೀಲ್ದಾರ್ ಯು .ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ .