ಮುಂಬಯಿ: ಬಿಪಿನ್ ಫುಟ್ಬಾಲ್ ಅಕಾಡೆಮಿ ಇದರ ವಾರ್ಷಿಕ ಇಂಟರ್ ಸೆಂಟರ್ ಫುಟ್ಬಾಲ್ ಪಂದ್ಯಾಟ ದಲ್ಲಿ ಬಿಪಿನ್ ಬಿಎಂಸಿ ಕ್ಯಾಂಪ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಡಿ. 31 ರಂದು ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಜರಗಿದ ಫೈನಲ್ ಪಂದ್ಯದಲ್ಲಿ ಬಿಪಿನ್ ಉಲ್ಲಾಸ್ ನಗರ-ಅಂಬರ್‌ನಾಥ್ ಕ್ಯಾಂಪ್ ತಂಡವನ್ನು ಬಿಎಂಸಿ ಕ್ಯಾಂಪ್ ತಂಡವು 2-0 ಅಂತರಗಳಿಂದ ಸೋಲಿಸಿ ಪ್ರಶಸ್ತಿಯನ್ನು ಜಯಿಸಿತು.
ಬಿಪಿನ್ ಬಿಎಂಸಿ ಕ್ಯಾಂಪ್ ತಂಡದ ಪರವಾಗಿ ಕುಮಾರ್ ರಾಥೋಡ್ ಅವರು ಎರಡು ಗೋಲುಗಳನ್ನು ಹೊಡೆದು ಪ್ರಶಸ್ತಿ ಜಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ರಾಥೋಡ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಂಬಯಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್, ಮಹಾರಾಷ್ಟ್ರ ಫುಟ್ಬಾಲ್ ತಂಡದ ಮಾಜಿ ಆಟಗಾರ ಪ್ರಮೋದ್ ಸೈಲ್, ಎಂಡಿಎಫ್‌ಎ ಇದರ ಗೌರವ ಪ್ರಧಾನ ಕಾರ್ಯದರ್ಶಿ ಯು. ಬ್ಯಾನರ್ಜಿ ಹಾಗೂ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಇದರ ಜತೆ ಕಾರ್ಯದರ್ಶಿ, ಶಿವಛತ್ರಪತಿ ಪುರಸ್ಕೃತ ಜಯ ಶೆಟ್ಟಿ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.
ಬೆಳಗ್ಗೆ ಕಾಂದಿವಲಿ ಕ್ಯಾಂಪ್ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿದ್ದ ಬಿಎಂಸಿ ಕ್ಯಾಂಪ್ ತಂಡವು ಬಳಿಕ ಚರ್ಚ್‌ಗೇಟ್ ವಿರುದ್ಧ ಸೆಮಿಫೈನಲ್‌ನಲ್ಲಿ ಟ್ರೈಬ್ರೇಕರ್‌ನಲ್ಲಿ ಪಂದ್ಯವನ್ನು ಜಯಿಸಿತ್ತು.
ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಿಎಂಸಿ ಕ್ಯಾಂಪ್‌ನ ಕುಮಾರ್ ರಾಥೋಡ್ ಪಡೆದರೆ, ಉತ್ತಮ ಆಟಗಾರ ಪ್ರಶಸ್ತಿಯನ್ನು ಚರ್ಚ್ ಗೇಟ್ ಕ್ಯಾಂಪ್‌ನ ಕಾಸಾ ಪ್ರಜಾಪತಿ, ಕೊಲಬಾ ಕ್ಯಾಂಪ್‌ನ ರಾಜು ಚೌಹಾಣ್, ಉಲ್ಲಾಸ್‌ನಗರ-ಅಂಬರ್‌ನಾಥ್ ಕ್ಯಾಂಪ್‌ನ ಯಶ್ ತಾಕ್, ಕಾಂದಿವಲಿ ಕ್ಯಾಂಪ್‌ನ ಶುಭಂ ಶಿಂಧೆ, ವಿರಾರ್ ಕ್ಯಾಂಪ್‌ನ ಪ್ರೀತ್, ಅಂಧೇರಿ ಕ್ಯಾಂಪ್‌ನ ಯಶ್ ಮಿಸ್ಟಿÅ ಅವರು ಪಡೆದರು.
ವಿನ್ನರ್ ಪ್ರಶಸ್ತಿಯನ್ನು ಮುಂಬಯಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್, ಮಹಾರಾಷ್ಟ್ರ ಫುಟ್ಬಾಲ್ ತಂಡದ ಮಾಜಿ ಆಟಗಾರ ಪ್ರಮೋದ್ ಸೈಲ್, ಎಂಡಿಎಫ್‌ಎ ಇದರ ಗೌರವ ಪ್ರಧಾನ ಕಾರ್ಯದರ್ಶಿ ಯು. ಬ್ಯಾನರ್ಜಿ, ಬಿಪಿನ್ ಫುಟ್ಬಾಲ್ ಅಕಾಡೆಮಿಯ ಅಧ್ಯಕ್ಷ ಸತೀಶ್ ಉಚ್ಚಿಲ್, ಜಯ ಶೆಟ್ಟಿ ಅವರು ಪ್ರದಾನಿಸಿದರು. ರನ್ನರ್ ಅಪ್ ಪ್ರಶಸ್ತಿಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಅಧ್ಯಕ್ಷ ಕೆ. ಎಲ್. ಬಂಗೇರ, ಎಂಡಿಎಫ್‌ಎ ಪ್ರಧಾನ ಕಾರ್ಯದರ್ವಿ ಯು. ಬ್ಯಾನರ್ಜಿ, ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಜತೆ ಕಾರ್ಯದರ್ಶಿ ಜಯ ಎ. ಶೆಟ್ಟಿ ಅವರು ಪ್ರದಾನಿಸಿದರು.