Advertisement

ತೆರೆ ಮೇಲೆ ಬರಲಿದೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್

09:00 PM Dec 14, 2020 | Suhan S |

ನವದೆಹಲಿ : ಸಾಧಕರ ಜೀವನ ಚರಿತ್ರೆ ಹಾಗೂ ಯಶಸ್ಸನ್ನು ತೆರೆ ಮೇಲೆ ತರುವ ಬಯೋಪಿಕ್ ಚಿತ್ರಗಳು ಬಾಲಿವುಡ್ ನಲ್ಲಿ ಬೇಕಾದ್ದಷ್ಟು ಬಂದಿವೆ. ಸದ್ಯ ಚೆಸ್ ಗ್ರ್ಯಾಂಡ್ ಮಾಸ್ಟರ್  ಭಾರತದ ವಿಶ್ವನಾಥನ್ ಆನಂದ್ ಅವರ ಜೀವನವನ್ನು ತೆರೆಮೇಲೆ ತರುವ ಸಿದ್ದತೆಯಲ್ಲಿದೆ ಬಾಲಿವುಡ್.

Advertisement

ಚೆಸ್ ನಲ್ಲಿ  5 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಗೆದ್ದಿರುವ ವಿಶ್ವನಾಥನ್ ಆನಂದ್ ಅವರ ಬದುಕಿನ ಕಥೆಯನ್ನು ದೊಡ್ಡ ಪರದೆಯಲ್ಲಿ ಪ್ರೇಕ್ಷಕರ ಮುಂದೆ ತರುವ ಬಯೋಪಿಕ್ ಅನೌನ್ಸ್ ಆಗಿದ್ದು, ಈ ಸುದ್ದಿಯನ್ನು ಬಾಲಿವುಡ್ ಸಿನಿಮಾ ವಿತರಕ ತರಣ್ ಆದರ್ಶ್ ಟ್ವೀಟರ್ ನಲ್ಲಿ ಖಚಿತಪಡಿಸಿದ್ದಾರೆ. ಚೆಸ್ ಗ್ರ್ಯಾಂಡ್ ಮಾಸ್ಟರ್ ಆನಂದ್ ಜೀವನಾಧಾರಿತ ಚಿತ್ರವನ್ನು ಮಾಡಲು ಬಾಲಿವುಡ್ ಸಜ್ಜಾಗಿದ್ದು, ಈ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರದ ಟೈಟಲ್ ಹಾಗೂ ಕಲಾವಿದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸಿನಿ ಪ್ರೇಕ್ಷಕರಲ್ಲಿ ಚಿತ್ರದ ನಾಯಕ ಯಾರು ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು, ಚರ್ಚೆಯಲ್ಲಿ ಅಭಿಷೇಕ್ ಬಚ್ಬನ್ ಹೆಸರು ಮುನ್ನಡೆಯಲ್ಲಿದೆ.ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯಿಲ್ಲ. ಸದ್ಯ ಆನಂದ್ ಎಲ್ ರೈ  ಅವರು ಅತ್ರಂಗಿ ರೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಚೆಸ್ ಮಾಂತ್ರಿಕ ವಿಶ್ಬನಾಥನ್ ಆನಂದ್ ಬಯೋಪಿಕ್ ಕೈಗೆತ್ತಿಕೊಳ್ಳುವ ಸಾದ್ಯತೆಯಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next