Advertisement

Marriage: ಮದುವೆ ನೋಂದಣಿಗೆ ಬಯೋ ಮೆಟ್ರಿಕ್‌ ಕಡ್ಡಾಯ: ನವದಂಪತಿ, ಮೂವರು ಸಾಕ್ಷಿಗಳಿಗೆ ಅನ್ವಯ

08:33 PM Nov 16, 2023 | Pranav MS |

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನವದಂಪತಿ ತಮ್ಮ ವಿವಾಹ ನೋಂದಣಿಗೆ ಬಯೋಮೆಟ್ರಿಕ್‌ ವಿವರಗಳನ್ನು ನೀಡಬೇಕಾಗಿದೆ. ನ.1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬಂದಿರುವ ಈ ನಿಯಮದಲ್ಲಿ ಮೂವರು ಸಾಕ್ಷಿಗಳು ಕೂಡ ಕಡ್ಡಾಯವಾಗಿ ಬಯೋಮೆಟ್ರಿಕ್‌ ವಿವರಗಳನ್ನು ಕೊಡಬೇಕು.

Advertisement

ಕಳೆದ ವರ್ಷವೇ ಪಶ್ಚಿಮ ಬಂಗಾಳದಲ್ಲಿ ಈ ನಿಯಮ ಅಂಗೀಕರಿಸಲಾಗಿತ್ತು. ಆದರೆ, ಎಲ್ಲಾ ವಿವಾಹ ನೋಂದಣಾಧಿಕಾರಿಗಳ ಕಚೇರಿಗಳಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಒದಗಿಸುವಿಕೆ, ಅಧಿಕಾರಿಗಳಿಗೆ ತರಬೇತಿ ನೀಡುವಿಕೆಯಿಂದಾಗಿ ಅದರ ಅನುಷ್ಠಾನದಲ್ಲಿ ವಿಳಂಬ ಉಂಟಾಗಿತ್ತು.

ವಿವಾಹ ನೋಂದಣಿಗೆ ಅರ್ಜಿ ಹಾಕುವ ಸಂದರ್ಭದಲ್ಲಿಯೇ ವರ ಅಥವಾ ತಮ್ಮ ಬಯೋಮೆಟ್ರಿಕ್‌ ವಿವರಗಳನ್ನು ನೀಡಬೇಕಾಗುತ್ತದೆ. ನೋಂದಣಿ ಮಾಡುವ ವೇಳೆ ಮೂವರು ಸಾಕ್ಷಿಗಳು, ವಧು ಮತ್ತು ವರನ ಬೆರಳಿನ ಅಚ್ಚುಗಳನ್ನು ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2,700 ಮದುವೆ ನೋಂದಣಿ:
ಹಾಲಿ ತಿಂಗಳ 1ರಿಂದ ಬುಧವಾರದ ವರೆಗೆ ಪಶ್ಚಿಮ ಬಂಗಾಳದಲ್ಲಿ ವಿವಾಹ ನೋಂದಣಿಗಾಗಿ ಬಯೋಮೆಟ್ರಿಕ್‌ ವಿವರಗಳ ಸಹಿತ 5,768 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಸುಮಾರು 2,700 ಮದುವೆಗಳನ್ನು ಹೊಸ ವ್ಯವಸ್ಥೆಯಡಿ ನೋಂದಣಿ ಮಾಡಲಾಗಿದೆ. ವಿವಾಹ ನೋಂದಣಾಧಿಕಾರಿಗಳು ಲ್ಯಾಪ್‌ಟಾಪ್‌, ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಸಹಿತ ಕಚೇರಿಯಲ್ಲಿ ಲಭ್ಯರಿರಲಿದ್ದಾರೆ.

30 ನಿಮಿಷ:
ಒಂದು ಬಾರಿ ಲಾಗ್‌ ಇನ್‌ ಆದರೆ, 30 ನಿಮಿಷಗಳ ಅವಧಿ ಇರುತ್ತದೆ. ಆ ಅವಧಿಯಲ್ಲಿ ಫಿಂಗರ್‌ ಪ್ರಿಂಟ್‌ ವಿವರಗಳನ್ನು ಸ್ಕ್ಯಾನ್‌ ಮಾಡಿ ಅಪ್‌ ಲೋಡ್‌ ಮಾಡಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next