Advertisement

ಮಣಿಪಾಲ –ಮಾಹೆಯಲ್ಲಿ ಇಂದು ಬಯೋ ಇನ್‌ಕ್ಯುಬೇಟರ್‌ ಉದ್ಘಾಟನೆ

12:14 AM Oct 25, 2019 | Hari Prasad |

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ನಲ್ಲಿ (ಮಾಹೆ) ರಾಜ್ಯ ಸರಕಾರದ ಬಯೋಟೆಕ್ನಾಲಜಿ ಇಲಾಖೆಯ ವತಿಯಿಂದ ಕೆ-ಟೆಕ್‌ ಸಹಯೋಗದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಆವಿಷ್ಕಾರ, ಉದ್ಯಮ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುವ ಬಯೋ ಇನ್‌ಕ್ಯುಬೇಟರ್‌ ಸ್ಥಾಪಿಸಲಾಗಿದೆ.

Advertisement

ಅ. 25ರಂದು ಉಪಮುಖ್ಯಮಂತ್ರಿ, ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. ಈ ಬಯೋ ಇನ್‌ಕ್ಯುಬೇಟರ್‌ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬಯೋಫಾರ್ಮ, ಬಯೋಮೆಡಿಕಲ್‌ ಉಪಕರಣಗಳು, ದಂತ ವೈದ್ಯಕೀಯ ಆವಿಷ್ಕಾರ, ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಅದಕ್ಕೆ ಬೇಕಾದ ಪ್ರಯೋಗಾಲಯ, ಕಟ್ಟಡ- ಕಚೇರಿ ಇತ್ಯಾದಿ ಮೂಲಸೌಲಭ್ಯಗಳು ಇದರಲ್ಲೇ ಲಭ್ಯವಿರಲಿವೆ.

ಯಾವುದೇ ಕನಿಷ್ಠ ವಿದ್ಯಾರ್ಹತೆಯ ಮಿತಿ ಇಲ್ಲದೆ ಹೊಸತನ್ನು ಮಾಡುವ ಕಲ್ಪನೆ ಇರುವವರು ಕೂಡ ನೋಂದಾಯಿಸಿಕೊಂಡು ಈ ಬಯೋ ಇನ್‌ಕ್ಯುಬೇಟರ್‌ನಲ್ಲಿ ತಾಂತ್ರಿಕ, ಹಣಕಾಸು, ಮಾರುಕಟ್ಟೆಗಳ ಸಹಾಯ ಪಡೆಯಬಹುದು.

ಈಗಾಗಲೇ ಎಂಐಟಿಯಲ್ಲಿ ಮಣಿಪಾಲ ಯುನಿವರ್ಸಲ್‌ ಟೆಕ್ನಾಲಜಿ ಬ್ಯುಸಿನೆಸ್‌ ಇನ್‌ಕ್ಯುಬೇಟರ್‌ ಸ್ಥಾಪಿಸಲಾಗಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರ ಸರಕಾರದ
ಸ್ಟಾರ್ಟ್‌ಅಪ್‌ ಯೋಜನೆಗಳಿಗೆ ಸಹಾಯ ಮಾಡುತ್ತಿದೆ. ಇಲ್ಲಿ ಈಗಾಗಲೇ 30 ಮಂದಿ ತೊಡಗಿಸಿಕೊಂಡಿದ್ದು, ಓರ್ವರು ಯಶಸ್ವಿಯಾಗಿ ಬೆಂಗಳೂರಿನಲ್ಲಿ ಉದ್ಯಮ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next