Advertisement

ಪರಿಸರ ನಿರ್ಲಕ್ಷಿಸಿದ್ರೆ ಪ್ರಾಕೃತಿಕ ವಿಕೋಪ ನಿಶ್ಚಿತ: ಶಿಮುಶ

12:42 PM Aug 20, 2020 | sudhir |

ಚಿತ್ರದುರ್ಗ: ಪರಿಸರವನ್ನು ಯಾರೂ ನಿರ್ಲಕ್ಷಿಸಬಾರದು. ಅಂತಹ ದೇಶದಲ್ಲಿ ಪ್ರಾಕೃತಿಕ ವೈಪರೀತ್ಯಗಳು ಉಂಟಾಗುತ್ತವೆ. ಮರಗಳಿದ್ದರೆ ಮಾನವ. ಮರ ಮಾನವ ಬದುಕಿಗೆ ವರ. ವರವಾಗಿರುವ ಮರಗಳನ್ನು ಬೆಳೆಸಬೇಕು. ಸ್ವಾರ್ಥದ ಕಾರಣದಿಂದ ಫಲ ಕೊಡುವ ಮರಗಳನ್ನು ಬೆಳೆಸುತ್ತಾರೆ. ಅದರ ಜೊತೆ ನೆರಳು ಕೊಡುವ ಆಮ್ಲಜನಕ ನೀಡುವ, ಪ್ರಾಣಿ ಪಕ್ಷಿಗಳಿಗೆ ಆಹಾರ ಕೊಡುವ ಮರಗಳನ್ನೂ ಬೆಳೆಸಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

Advertisement

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಎಸ್‌.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷತಾ ಕೇಂದ್ರ, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಮತ್ತು ಸ್ಪೀಚ್‌ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಜೈವಿಕ ಇಂಧನ ದಿನಾಚರಣೆಯಲ್ಲಿ ವಾಹನಕ್ಕೆ ಇಂಧನ ಹಾಕಿ ಶರಣರು ಮಾತನಾಡಿದರು. ಜೈವಿಕ ಇಂಧನಕ್ಕೆ ಸಂಬಂಧಿಸಿದ ಮರಗಳು ಬೇಕಿವೆ. ಬರಿದಾಗುವ ಇಂಧನಕ್ಕೆ ಪರ್ಯಾಯವಾಗಿ ಬದಲಿ ಇಂಧನವನ್ನು ಮಾಡಿಕೊಳ್ಳಬೇಕಿದೆ. ದುಬೈ, ಮಸ್ಕತ್‌ ಮೊದಲಾದ ಇಂಧನವಿರುವ ರಾಷ್ಟ್ರಗಳು ನಮ್ಮದು ಮುಗಿದುಹೋಗುವ ಸಂಪನ್ಮೂಲಗಳೆಂದು ಅರಿತು ಮರ ಗಿಡ, ಕೃತಕ ಬೆಟ್ಟಗಳನ್ನು ಪರ್ಯಾಯ ಇಂಧನಕ್ಕಾಗಿ ಬೆಳೆಸುತ್ತಿದ್ದಾರೆ. ಅವರು ಸಂಪನ್ಮೂಲದ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದಾರೆ. ಅವರಂತೆ ನಾವು ಕೂಡ ಬದಲಿ ಇಂಧನದ ಬಗ್ಗೆ ಜಾಗರೂಕರಾಗಬೇಕಿದೆ ಎಂದರು. ಸ್ಪೀಚ್‌ ಸಂಸ್ಥೆಯ ವ್ಯವಸ್ಥಾಪಕ ಸಂತೋಷ್‌, ಎಚ್‌. ಶೇಷಪ್ಪ ಮಾತನಾಡಿದರು.

ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ, ಪ್ರಾತ್ಯಕ್ಷತಾ ಕೇಂದ್ರದ ಸಂಯೋಜಕ ಡಾ| ಪಿ.ಬಿ. ಭರತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಪ್ಪ ಇದ್ದರು. ವಿಜಯಲಕ್ಷ್ಮೀ ಹಿರೇಮಠ ಪ್ರಾರ್ಥಿಸಿದರು. ಡಾ| ಬಿ.ಸಿ. ಶಾಂತಪ್ಪ ಸ್ವಾಗತಿಸಿದರು. ಸುನೀಲ್‌ಕುಮಾರ್‌ ಬಿ.ಕೆ. ನಿರೂಪಿಸಿದರು. ಜೆ. ಸತೀಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next