Advertisement
ಅಲ್ಲದೇ, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಇತ್ತೀಚೆಗೆ ನಡೆದ “ಐಕಾನ್ ವೀಕ್’ ಕಾರ್ಯಕ್ರಮದಲ್ಲಿ ಗ್ರಾಪಂ ಕೈಗೊಂಡ ಪರಿಣಾಮಕಾರಿ ಕ್ರಮಗಳ ವಿಡಿಯೋ ತುಣಕು ಪ್ರದರ್ಶಿಸಲಾಯಿತು.
Related Articles
Advertisement
ಸ್ಥಳಾವಕಾಶ ಇಲ್ಲದ 74 ಕುಟುಂಬಗಳಿಗೆ ಸಮುದಾಯ ಶೌಚಾಲಯ ನಿರ್ಮಿಸಿದ್ದು, ಸಮುದಾಯ ಶೌಚಾಲಯ, ಸರ್ಕಾರಿ ಶಾಲಾ ಶೌಚಾಲಯಗಳನ್ನು ಮತ್ತು ತೆರೆದ ಚರಂಡಿಗಳನ್ನೂ ವಾರಕ್ಕೊಮ್ಮೆ ಗ್ರಾಪಂ ಸಿಬ್ಬಂದಿ ಸ್ವತ್ಛತೆ ನಿರ್ವಹಿಸುತ್ತಿದ್ದಾರೆ.
ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ: ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಅಂಗಡಿವಾಡಿ ಕೇಂದ್ರಗಳಿದ್ದು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಮಗುವಿನಲ್ಲಿ ಅಪೌಷ್ಟಿಕತೆ ಕಂಡು ಬಂದಿಲ್ಲ. ಸರ್ಕಾರ ನಿಗದಿಪಡಿಸಿರುವಂತೆ ಮಕ್ಕಳ ಬೆಳವಣಿಗೆಯಿದೆ. ಗ್ರಾಪಂ ವ್ಯಾಪ್ತಿಯಲ್ಲಿ 326 ಜನರು ಬಿಪಿ ಮತ್ತು ಮದುಮೇಹದಿಂದ ಬಳಲುತ್ತಿದ್ದು, ಗ್ರಾಮದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಪ್ರತಿ ನಿತ್ಯ ಎರಡು ದಿನಕ್ಕೊಮ್ಮೆ ಆರೋಗ್ಯ ವಿಚಾರಿಸುತ್ತಾರೆ. ಅಗತ್ಯವುಳ್ಳವರಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಇಂತಹ ಸಣ್ಣಪುಟ್ಟ ಕೆಲಸ ಕಾರ್ಯಗಳಿಂದಲೇ ನಾಡಿನ “ಹೆಲ್ದಿ ವಿಲೇಜ್’ ಪಟ್ಟಿಯಲ್ಲಿ 2ನೇ ಸ್ಥಾನ ಪಡಿದೆ.
“ಐಕಾನ್ ವೀಕ್’
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯದಿಂದ ಏ.11 ರಿಂದ 17ರವರೆಗೆ ದೆಹಲಿಯಲ್ಲಿ ನಡೆದ “ಐಕಾನ್ ವೀಕ್’ ವಿವಿಧ ವಲಯಗಳಲ್ಲಿ ಗಣನೀಯ ಸಾಧನೆ ತೋರಿದ ಗ್ರಾಪಂಗಳ 3 ನಿಮಿಷಗಳ ವಿಡಿಯೋ ಪ್ರದರ್ಶಿಸಲಾಯಿತು. ಅದರಲ್ಲಿ ಬೆಳಗಾವಿ ಜಿಲ್ಲೆಯ ಶಿರಗುಪ್ಪಿ ಮತ್ತು ತಾಲೂಕಿನ ಬಿಂಕದಕಟ್ಟಿ ಗ್ರಾಪಂಗಳನ್ನು ಹೆಲ್ದಿ ವಿಲೇಜ್ ಎಂದು ಗುರುತಿಸಿ, ಗ್ರಾಪಂ ಕೈಗೊಂಡ ಕ್ರಮಗಳ ಯಶೋಗಾಥೆ ಬಿತ್ತರಿಸಲಾಯಿತು.
ಸರ್ಕಾರದ ಸೇವೆ ಮತ್ತು ಸೌಲಭ್ಯ ಸಮರ್ಪಕವಾಗಿ ಜನರಿಗೆ ತಲುಪಿಸಲು ಗ್ರಾಪಂ ಅಗತ್ಯ ಕ್ರಮ ಕೈಗೊಂಡಿದೆ. ಗ್ರಾಪಂ ಕೈಗೊಳ್ಳುವ ಸುಧಾರಣಾ ಕ್ರಮಗಳಿಗೆ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅವರ ಸಹಕಾರದಿಂದಲೇ ಇಂದು ಐಕಾನ್ ವೀಕ್ ಗೆ ಗ್ರಾಪಂ ಆಯ್ಕೆಯಾಗಿದೆ. ಆರೋಗ್ಯಕರ ಗ್ರಾಮ ಎಂದು ಕೇಂದ್ರ ಸರ್ಕಾರ ಮುದ್ರೆ ಒತ್ತಿರುವುದು ಹೆಮ್ಮೆಯಾಗಿದೆ. -ರಹಮತ್ ಬಾನು ಕಿರೇಸೂರ, ಗ್ರಾಪಂ ಪಿಡಿಒ
–ವೀರೇಂದ್ರ ನಾಗಲದಿನ್ನಿ