Advertisement

ಟಿಒಪಿ ಮುಖ್ಯಸ್ಥ ಸ್ಥಾನಕ್ಕೆ ಬಿಂದ್ರಾ ರಾಜೀನಾಮೆ

06:20 AM Dec 24, 2017 | Team Udayavani |

ಹೊಸದಿಲ್ಲಿ: ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಖ್ಯಾತ ಶೋಟರ್‌ ಅಭಿನವ್‌ ಬಿಂದ್ರಾ ಕೇಂದ್ರ ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆ ಟಿಒಪಿ (ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವಹಿತಾಸಕ್ತಿ ವಿವಾದಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Advertisement

ಬಿಂದ್ರಾ ಶನಿವಾರ ಟ್ವಿಟರ್‌ನಲ್ಲಿ ತಮ್ಮ ರಾಜೀನಾಮೆ ವಿಷಯವನ್ನು ಪ್ರಕಟಿಸಿದರು. ಸದ್ಯ ಅಭಿನವ್‌ ಬಿಂದ್ರಾ ತಮ್ಮದೇ ಕೆಲವು ಖಾಸಗಿ ಯೋಜನೆಗಳು ಹಾಗೂ ಅಭಿನವ್‌ ಬಿಂದ್ರಾ ಟಾರ್ಗೆಟ್‌ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವತ್ತ ಗಮನ ಹರಿಸಿದ್ದಾರೆ. ಹೀಗಾಗಿ ತಾನು ಸರಕಾರಿ ಹುದ್ದೆಯನ್ನು ಬಿಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಟಿಒಪಿ ಅಡಿಯಲ್ಲಿ ಸರಕಾರ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಕಾಮನ್ವೆಲ್ತ್‌, ಏಶ್ಯಾಡ್‌, ಒಲಿಂಪಿಕ್ಸ್‌ ಕೂಟಗಳಿಗೆ ಸಿದ್ಧ ಮಾಡುತ್ತದೆ. ಇದಕ್ಕಾಗಿ ಕೇಂದ್ರ ಸರಕಾರ ಕೋಟ್ಯಂತರ ರೂ. ಹಣವನ್ನು ವಿನಿಯೋಗಿಸಿದೆ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next