Advertisement
ತ್ರಯಾಯುಧಂ|
Related Articles
Advertisement
ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೇ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ. ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು ಇಂತಿವೆ.
1. ಸತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ. ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಅಂದರೆ, ಈ ಮೂರೂ ಅವಸ್ಥೆಗಳ ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು. ಬಿಲ್ವದ ಎಲೆಗಳು ಶಿವತಣ್ತೀದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತಣ್ತೀದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ. ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು, ಅವರ ಪ್ರಕೃತಿಗೆ ಹೊಂದುವಂತಹ ಮತ್ತು ಅವರ ಅಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತಣ್ತೀದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತುನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)•