Advertisement

ಬಿಲ್ಲವರ ಅಸೋಸಿಯೇಶನ್‌ ಸೇವಾ ಭಾವನೆಯ ದೇವಾಲಯ: ಹರೀಶ್‌ ಜಿ. ಅಮೀನ್‌

12:07 PM Sep 28, 2021 | Team Udayavani |

ಮುಂಬಯಿ: ನೊಂದವರ ಧ್ವನಿಯಾಗಿ, ಅಶಕ್ತರಿಗೆ ಅಧಾರವಾಗಿ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಧ್ಯೇಯ ಸ್ಥಳೀಯ ಸಮಿತಿಗಳದ್ದಾಗಿರಲಿ. ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ದೂರಗಾಮಿ ಚಿಂತನೆಯೊಂದಿಗೆ ನಾವೆಲ್ಲ ಮುನ್ನೆಡೆಯುವ. ಶೈಕ್ಷಣಿಕ, ಕ್ರೀಡೆ, ಆರ್ಥಿಕ, ರಾಜಕೀಯ ಕ್ಷೇತ್ರಗಳಿಗೆ ನೀಡಿದ ಕೊಡುಗೆಯಿಂದ ಇಂದು ಬಿಲ್ಲವರು ವಿಶ್ವಮಟ್ಟದಲ್ಲಿ  ಗುರುತಿಸಿಕೊಂಡಿದ್ದಾರೆ. ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಸಂಸಾರದ ಸಮಸ್ಯೆಗಳನ್ನು ಬದಿಗಿರಿಸಿ ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ತ್ಯಾಗದ ಪ್ರತೀಕವಾಗಿದ್ದು, ಸೇವಾ ಭಾವನೆಯ ದೇವಾಲಯವಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನೂತನ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ತಿಳಿಸಿದರು.

Advertisement

ಸೆ. 26ರಂದು ಮೀರಾರೋಡ್‌ ಪೂರ್ವದ ಭಾರತಿ ಪಾರ್ಕ್‌ನ ಶ್ರೀ ಬಾಲಾಜಿ ಇಂಟರ್‌ನ್ಯಾಷನಲ್‌ ಹೊಟೇಲ್‌ ಸಭಾಗೃಹದಲ್ಲಿ ಆಯೋಜಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ನೂತನ ಕಾರ್ಯಕಾರಿ ಸಮಿತಿ ರಚನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಡುಬೆಳ್ಳೆಯ ವಿದ್ಯಾ ಸಂಕುಲ ವಿಸ್ತರಣೆ, ನವಿಮುಂಬಯಿಯ ಗುರು ಮಂದಿರ ಮತ್ತು ಸಮುದಾಯ ಭವನ, ಕೆಲವು ಸ್ಥಳೀಯ ಸಮಿತಿಗಳಿಗೆ ಸ್ವಂತ ಕಟ್ಟಡ ಮೊದಲಾದ ಹಲವು ಯೋಜನೆಗಳು ಕಾರ್ಯಗತಗೊಳ್ಳಲು ಸರ್ವರ ಸಹಕಾರ ಅನಿವಾರ್ಯವಾಗಿದೆ. ಪ್ರೀತಿ, ವಿಶ್ವಾಸ, ವಿವೇಕದಿಂದ ಜನಮಾನಸಕ್ಕೆ ಹತ್ತಿರವಾಗಿ ಸಮಾನ ಮನಸ್ಕರಾಗಿ ದುಡಿಯೋಣ ಎಂದು ತಿಳಿಸಿ, ನೂತನ ಕಾರ್ಯಕಾರಿ ಸಮಿತಿಗೆ ಹೂಗುತ್ಛ ನೀಡಿ ಅಭಿನಂದಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಮಾತನಾಡಿ, ಸಮಾಜ ಸೇವಾ ವಲಯದಲ್ಲಿ ಉತ್ತಮ ಸೇವಾ ಮನೋಭಾವದವರು ಅಗ್ರಸ್ಥಾನದಲ್ಲಿರಬೇಕು. ಪ್ರತಿಫಲ ಬಯಸದೆ ಮಾಡುವ ಕೆಲಸ ಕಾರ್ಯಗಳು ನಿಜವಾದ ಸಮಾಜ ಸೇವೆಯಾಗಿವೆ. ಒಗ್ಗಟ್ಟು ಹಾಗೂ ಒಮ್ಮತದಿಂದ ನಾವೆಲ್ಲರು ಸೇರಿ ಸಮಾಜವನ್ನು ಬಲಿಷ್ಠಗೊಳಿಸೋಣ. ಅಸೋಸಿಯೇಶನ್‌ನ ಅಭಿವೃದ್ಧಿಗೆ ಸಮಾಜ ಬಾಂಧವರ ಸಹಾಯ, ಸಹಕಾರ ಸದಾಯಿರಲಿ ಎಂದರು.

ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷ ಸುಭಾಶ್ಚಂದ್ರ ಎಂ. ಕರ್ಕೇರ ಮಾತನಾಡಿ, ಸಮುದಾಯದ ಬೆಳವಣಿಗೆ ನಮ್ಮ ಸಾಧನೆಯಾಗಲಿ. ಸಮಾಜದ ಋಣ ತೀರಿಸಿ ಹಿರಿಯರ ಕನಸನ್ನು ಸಾಕಾರಗೊಳಿಸೋಣ. ಸ್ಥಳೀಯ ಕಚೇರಿಯ ಎಲ್ಲ  ಕಾರ್ಯಕ್ರಮಗಳಲ್ಲಿ  ಪರಿಸರದ ಸಮಾಜ ಬಾಂಧವರು ಪಾಲ್ಗೊಂಡು ಸಹಕರಿಸಬೇಕು. ಮೀರಾರೋಡ್‌ ಸ್ಥಳೀಯ ಕಚೇರಿಯು ಕಳೆದ ಹಲವಾರು ವರ್ಷಗಳಿಂದ ಅಸೋಸಿಯೇಶನ್‌ನ ಸಮಾಜಪರ ಯೋಜನೆಗಳನ್ನು ಸಮಾಜದ ಮನೆ-ಮನಗಳಿಗೆ ಮುಟ್ಟಿಸುವಲ್ಲಿ  ಯಶಸ್ವಿಯಾಗಿದೆ. ಇದಕ್ಕಾಗಿ ನಾವು ಕಚೇರಿಯ ಪದಾಧಿಕಾರಿಗಳು, ಸದಸ್ಯರನ್ನು ಅಭಿನಂದಿಸುತ್ತಿದ್ದೇನೆ ಎಂದರು.

ನೂತನ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಯಾದಿಯನ್ನು ಪ್ರಕಟಿಸಿದರು. ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ವರದಿ ವಾಚಿಸಿದರು. ಜಿ. ಕೆ. ಕೆಂಚನೆಕೆರೆ ವಂದಿಸಿದರು.

Advertisement

ಉಪಾಧ್ಯಕ್ಷರಾದ ಶಂಕರ ಡಿ. ಪೂಜಾರಿ, ಜಯಂತಿ ಉಳ್ಳಾಲ್, ಜತೆ ಕಾರ್ಯದರ್ಶಿಗಳಾದ ಕೇಶವ ಕೆ. ಕೋಟ್ಯಾನ್‌, ಅಶೋಕ್‌ ಕೆ. ಕುಕ್ಯಾನ್‌ ಸಸಿಹಿತ್ಲು, ವಿಶ್ವನಾಥ್‌ ಆರ್‌. ತೋನ್ಸೆ ಮತ್ತು ಜಯ ವಿ. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಜತೆ ಕೋಶಾಧಿಕಾರಿಗಳಾಗಿ ಶಿವರಾಮ ಎಸ್‌. ಪೂಜಾರಿ, ಮೋಹನ್‌ ಡಿ. ಪೂಜಾರಿ ಮತ್ತು ಹರೀಶ್ಚಂದ್ರ ಜಿ. ಕುಂದರ್‌, ಜಿ. ಒ. ಸಿ. ಗಣೇಶ್‌ ಕೆ. ಪೂಜಾರಿ, ಯುವಾಭ್ಯುದಯ ಉಪಸಮಿತಿಯ ಕಾರ್ಯದರ್ಶಿ ನೀಲೇಶ್‌ ಪೂಜಾರಿ ಪಲಿಮಾರು, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ರವಿ ಸನಿಲ…, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯದರ್ಶಿ ನವೀನ್‌ ಪಡು ಇನ್ನ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಜ್ಞಾ  ವಿಧಿ:

2021-2024ರ ಕಾಲಾವಧಿಗೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸುಭಾಶ್ಚಂದ್ರ ಎಂ. ಕರ್ಕೇರ, ಎನ್‌. ಪಿ. ಕೋಟ್ಯಾನ್‌, ದಿನೇಶ್‌ ಎಸ್‌. ಸುವರ್ಣ, ಗೋಪಾಲ್‌ ಕೃಷ್ಣ ಸಾಲ್ಯಾನ್‌ , ಜಯಲಕ್ಷ್ಮೀ ಸಾಲ್ಯಾನ್‌, ಶೋಭಾ ಎಚ್‌. ಪೂಜಾರಿ, ಗಣೇಶ್‌ ಎಚ್‌. ಬಂಗೇರ, ದಯಾನಂದ ಆರ್‌. ಅಮೀನ್‌, ಲೀಲಾಧರ ಕೆ. ಸನಿಲ…, ಜಗಜೀವನ್‌ ಡಿ. ಅಮೀನ್‌, ಶಂಕರ ಕೆ. ಪೂಜಾರಿ, ಜಿತೇಂದ್ರ ಎ. ಸನಿಲ…, ಸುಂದರಿ ಆರ್‌. ಕೋಟ್ಯಾನ್‌, ಸುಲೋಚನಾ ವಿ. ಮಾಬೀಯಾನ್‌, ಭಾರತಿ ಅಂಚನ್‌ ಅವರಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.

-ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next