Advertisement

ಬಿಲ್ಲವರ ಅಸೋಸಿಯೇಶನ್‌ ಭಿವಂಡಿ: ಅರಸಿನ ಕುಂಕುಮ

01:33 PM Jan 31, 2018 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಜ. 21 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮಿತಿಯ ಕಚೇರಿಯಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಪಾಲ್ಗೊಂಡು ಮಾತನಾಡಿ, ಅರಸಿನ ಕುಂಕುಮ ಕಾರ್ಯಕ್ರಮವು ಪ್ರಕೃತಿಯನ್ನು ಪೂಜಿಸುವ ಕಾರ್ಯಕ್ರಮವಾಗಿದ್ದು, ಹೆಣ್ಣನ್ನು ಪ್ರಕೃತಿಗೆ ಹೋಲಿಸುವ ದೃಷ್ಟಿಯಿಂದ ಈ ಕಾರ್ಯವನ್ನು ಆಚರಿಸುತ್ತಿದ್ದೇವೆ. ಸಂಜೆಯ ಸೂರ್ಯಸ್ಥ ಕೆಂಪು ಬಣ್ಣವನ್ನು ಹೊಂದುವಂತೆ ಕುಂಕುಮವೂ ಕೆಂಬಣ್ಣವನ್ನು ಹೊಂದಿದೆ. ಪರಿಸರದ ಮಹಿಳೆಯರಲ್ಲಿ ಒಗ್ಗಟ್ಟು ಪ್ರತಿಬಿಂಬಿಸುತ್ತಿದ್ದು,  ಇಲ್ಲಿ ಮಾದರಿ ಸ್ತಿÅàಯಾಗಿ ಬೆಳೆದಿದೆ ಎನ್ನುವುದು ನಿದರ್ಶನವಾಗಿದೆ. ಅದಕ್ಕಾಗಿ ಅವಕಾಶ, ಮಾರ್ಗದರ್ಶನದ ಅಶವ್ಯಕತೆಯಿದೆ. ಶ್ರೀಮಂತ, ಬಡತನ ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಒಂದೇ ದೃಷ್ಟಿಯಿಂದ ನೋಡುವ ಗುಣ ಮಹಿಳೆಯರಲ್ಲಿ ಇರಬೇಕು ಎಂದು ನುಡಿದು, ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಅವರು ಮಾತನಾಡಿ, ನಮ್ಮ ಮಕ್ಕಳು ತಾಯಿ, ಅತ್ತೆ ಎಂಬ ಭೇದಭಾವ ಮಾಡದೆ ಕೌಟುಂಬಿಕ ಸಹಭಾಗಿತ್ವ ಕಾಪಾಡಿಕೊಳ್ಳಬೇಕು. ಆಗ ನಾವು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮಹಿಳಾ ವಿಭಾಗದ ಉಪಾಧ್ಯಕ್ಷೆ ಪ್ರಭಾ ಬಂಗೇರ ಅವರು ಮಾತನಾಡಿ, ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ಮೌಲ್ಯಯುತವಾಗಿ ಬೆಳೆಸು ಜವಾಬ್ದಾರಿ ನಮ್ಮ ಮೇಲಿದೆ. ಕಳೆದ 30 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದೇನೆ. ಕೆಲವೊಂದು ಸಾಮಾಜಿಕ ಮಹಿಳಾ ಸಮಸ್ಯೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾವೆಲ್ಲರ ಕಾರ್ಯ ನಿರ್ವಹಿಸಬೇಕಾಗಿದೆ. ವಿಧವೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ನೀಡಿ, ಅವರಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಬೇಕು. ಇದಕ್ಕೆ ಹೊಸ ತಲೆಮಾರಿನ ಮಕ್ಕಳು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಎ. ಪೂಜಾರಿ ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಮನೀಶ್‌ ಮತ್ತು ಸಂತೋಷ್‌ ಪೂಜಾರಿ ಅವರ ಸೇವಾರ್ಥಕವಾಗಿ ಅನ್ನದಾನ ನಡೆಯಿತು. ಸಬಿತಾ ರತ್ನಾಕರ ಪೂಜಾರಿ ಮತ್ತು ಪರಿಸರದ ಹೆಚ್ಚಿನ ಮಹಿಳೆಯರು ಪುಷ್ಪಾಲಂಕೃತದಲ್ಲಿ ಸಹಕರಿಸಿದರು.

Advertisement

ಸಮಿತಿಯ ಗೌರವ ಕಾರ್ಯದರ್ಶಿ ಜಯಂತ್‌ ಸಾಲ್ಯಾನ್‌ ಅವರು ವಂದಿಸಿದರು. ಸಮಿತಿಯ ಪದಾಧಿಕಾರಿ ಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು, ಸಮಾಜದ ಮಹಿಳೆಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next