Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ 86ನೇ ವಾರ್ಷಿಕ ಮಹಾಸಭೆ 

04:44 PM Jul 10, 2018 | |

ಮುಂಬಯಿ: ಮಾನವೀಯ ಮೌಲ್ಯದೊಂದಿಗೆ ಪ್ರಾಮಾಣಿಕವಾಗಿ ಅಧಿಕಾರ ನಿಭಾಯಿಸಿದಾಗ ಬಲಾಡ್ಯ ಸಾಂಘಿಕ ಶಕ್ತಿ ಹೊರ ಹೊಮ್ಮಲು ಸಾಧ್ಯ ಎಂಬುವುದನ್ನು ಬಿಲ್ಲವರ ಅಸೋಸಿಯೇಶನ್‌ ಸಾಬೀತುಪಡಿಸಿದೆ. ರಚನಾತ್ಮಕ ಕೆಲಸದೊಂದಿಗೆ ಪಾರದರ್ಶಕತೆಯನ್ನು ಉಳಿಸಿಕೊಂಡು ಬಿಲ್ಲವರು ವಿಶ್ವಮಟ್ಟದಲ್ಲಿ ಕೇಂದ್ರೀಕೃತಗೊಂಡು ಬಲಿಷ್ಠ ಸಂಘಟನೆಗೆ ಮುಂದಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ, ಅಭಿವೃದ್ಧಿಗಳ ಹರಿಕಾರ, ದೂರದೃಷ್ಟಿತ್ವದ ಬಿಲ್ಲವರ ಸಮಾಜದ ಮುಖಂಡ ಜಯ ಸಿ. ಸುವರ್ಣ ಅವರ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ನುಡಿದರು.

Advertisement

ಜು. 8 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ 86 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶತಮಾನಗಳ ಹಿರಿಯರ ತ್ಯಾಗಮಯ ಜೀವನ ನಮ್ಮ ಬದುಕಿನ ಸುಧಾರಣೆಗೆ ನಾಂದಿಯಾಯಿತು. ಅವರ ಸೇವೆಗೆ ಗೌರವಕೊಟ್ಟು ಯುವ ಶಕ್ತಿ ಮುಂದುವರಿಯಬೇಕು. ಬಿಲ್ಲವರ ಅಸೋಸಿಯೇಶನ್‌ ಮತ್ತು ಬಿಲ್ಲವ ಜಾಗೃತಿ ಬಳಗ ವಿಲೀನಗೊಂಡು ಭಾವನಾತ್ಮಕ ಬೆಸುಗೆಯಲ್ಲಿ ಇಂದಿನ ಸಭೆ ನಡೆದಿದೆ. ಈವರೆಗೆ ಸಹಕರಿಸಿದ ಕಾರ್ಯಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗದವರಿಗೆ, ಸ್ಥಳೀಯ ಸಮಿತಿ, ಸೇವಾದಳ ಹಾಗೂ ಹಿತೈಷಿಗಳಿಗೆ ಅಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ, ಭವಿಷ್ಯದಲ್ಲೂ ಅಸೋಸಿಯೇಶನ್‌ನನ್ನು ನಾವೆಲ್ಲರು ಒಟ್ಟಾಗಿ, ಒಮ್ಮತದಿಂದ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ನುಡಿದು, ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಾರ್ಗದರ್ಶಕ, ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಇವರು, ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಿ, ಅಸೋಸಿಯೇಶನ್‌ನ  ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಶುಭಹಾರೈಸಿದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಅವರು ಗತ ಮಹಾಸಭೆಯ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ, ಉದ್ದಿಮೆ, ಸಮಾಜ ಸೇವೆಯಲ್ಲಿ ವಿಶಿಷ್ಟ ಸೇವೆಗೈದ ಅಕ್ಷಯ ಮಾಸಿಕದ ಮಾಜಿ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್‌, ಲೆಫ್ಟಿನೆಂಟ್‌ ಕರ್ನಲ್‌ ಲಕ್ಷಿ¾àಶ್‌ ಸುವರ್ಣ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಂಸ್ಥೆಯ ಪದಾಧಿಕಾರಿಗಳು ಸಮ್ಮಾನಿಸಿ ಅಭಿನಂದಿಸಿದರು.

ಅಕ್ಷಯ ಮಾಸಿಕದ ಉಪ ಸಂಪಾದಕ ಹರೀಶ್‌ ಹೆಜ್ಮಾಡಿ ಸಮ್ಮಾನಿತರನ್ನು ಪರಿಚಯಿಸಿದರು. ಮುಂದಿನ ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದ 30 ಮಂದಿ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರನ್ನು ಗೌರವ ಕಾರ್ಯದರ್ಶಿ ಧರ್ಮಪಾಲ್‌ ಜಿ. ಅಂಚನ್‌ ಪ್ರಕಟಿಸಿದರು.

Advertisement

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಡಾ| ಯು. ಧನಂಜಯ ಕುಮಾರ್‌, ಶಂಕರ್‌ ಡಿ. ಪೂಜಾರಿ, ರಾಜಾ ವಿ. ಸಾಲ್ಯಾನ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿಗಳಾದ ಧನಂಜಯ ಎಸ್‌. ಕೋಟ್ಯಾನ್‌, ಹರೀಶ್‌ ಜಿ. ಸಾಲ್ಯಾನ್‌, ಪ್ರೇಮನಾಥ ಪಿ. ಕೋಟ್ಯಾನ್‌, ಆಶಾಲತಾ ಎಸ್‌. ಕೋಟ್ಯಾನ್‌, ಕೇಶವ ಕೆ. ಕೋಟ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್‌ ಸಿ. ಪೂಜಾರಿ ಕಾರ್ಕಳ, ಜತೆ ಕೋಶಾಧಿಕಾರಿಗಳಾದ ರಾಜೇಶ್‌ ಜೆ. ಬಂಗೇರ, ಶಿವರಾಮ ಎಸ್‌. ಪೂಜಾರಿ, ಸದಾಶಿವ ಎ. ಕರ್ಕೇರ, ಮೋಹನ್‌ ಡಿ. ಪೂಜಾರಿ, ಸೇವಾದಳದ ದಳಪತಿ ಗಣೇಶ್‌ ಕೆ. ಪೂಜಾರಿ ಉಪಸ್ಥಿತರಿದ್ದರು.

ಸದಸ್ಯರುಗಳಾದ ಮೋಹನ್‌ದಾಸ್‌ ಜಿ. ಪೂಜಾರಿ, ಎಂ. ಆನಂದ ಪೂಜಾರಿ, ಬಿ. ರವೀಂದ್ರ ಅಮೀನ್‌, ರವೀಂದ್ರ ಎ. ಅಮೀನ್‌, ಶಕುಂತಳಾ ಕೆ. ಕೋಟ್ಯಾನ್‌, ಬೇಬಿ ಎಸ್‌. ಕುಕ್ಯಾನ್‌, ಶ್ರೀನಿವಾಸ ಆರ್‌. ಕರ್ಕೇರ, ದಯಾನಂದ ಆರ್‌. ಪೂಜಾರಿ, ಡಾ| ರಾಜಶೇಖರ್‌ ಕೋಟ್ಯಾನ್‌, ವಿಶ್ವನಾಥ ತೋನ್ಸೆ, ದಿನೇಶ್‌ ಅಮೀನ್‌, ಪದ್ಮನಾಭ ಎ. ಪೂಜಾರಿ, ಸುಮಿತ್ರಾ ಎಸ್‌. ಬಂಗೇರ, ನಿಲೇಶ್‌ ಬಿ. ಪೂಜಾರಿ, ನಾಗೇಶ್‌ ಎಂ. ಕೋಟ್ಯಾನ್‌, ಅಶೋಕ್‌ ಕೆ. ಕುಕ್ಯಾನ್‌ ಸಸಿಹಿತ್ಲು, ಉಮೇಶ್‌ ಎನ್‌. ಕೋಟ್ಯಾನ್‌, ಭಾಸ್ಕರ ಕರ್ನಿರೆ ಹಾಗೂ ಉಗರ, ಉಪನಗರಗಳ ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರು, ಆಂತರಿಕ ಲೆಕ್ಕ ಪರಿಶೋಧಕರು ಮೊದಲಾದವರು ಉಪಸ್ಥಿತರಿದ್ದರು. ಧರ್ಮಪಾಲ್‌ ಜಿ. ಅಂಚನ್‌ ವಂದಿಸಿದರು.

ಅಹಂ  ದೂರವಿಡಿ: ಎನ್‌. ಟಿ. ಪೂಜಾರಿ 
ಬಿಲ್ಲವ ಜಾಗೃತಿ ಬಳಗದ ಮಾಜಿ ಅಧ್ಯಕ್ಷ ಎನ್‌. ಟಿ. ಪೂಜಾರಿ ಅವರು ಮಾತನಾಡಿ, ಅಹಂ ಮತ್ತು ಬಿಗುಮಾನಗಳನ್ನು ದೂರವಿಟ್ಟು ಸಮುದಾಯಕ್ಕಾಗಿ ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದ ಅಭ್ಯುದಯ ಮತ್ತು ಏಕತೆಗೆ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ. ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರು, ಸ್ಥಳೀಯ ಕಚೇರಿ ಇಲ್ಲವೆ ವಿವಿಧ ಉಪಸಮಿತಿಗಳಲ್ಲಿ ಸೇರಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

 ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next