Advertisement

ಬಿಲ್ಲವರ ಅಸೋಸಿಯೇಶನ್‌ ಘಾಟ್‌ಕೋಪರ್‌ :ಉಚಿತ ಆರೋಗ್ಯ ತಪಾಸಣೆ

02:29 PM Mar 17, 2019 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಘಾಟ್‌ಕೋಪರ್‌ ಸ್ಥಳೀಯ ಸಮಿತಿಯ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವು ಮಾ. 7ರಂದು ಸ್ಥಳೀಯ ಕಚೇರಿಯಲ್ಲಿ ನಡೆಯಿತು.

Advertisement

ಶಿಬಿರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಆಯು ರ್ವೇದ ತಜ್ಞ ವೈದ್ಯ ಪಡುಬಿದ್ರೆ ಡಾ| ನಾರಾಯಣ ಟಿ. ಅಂಚನ್‌ ಅವರು ಮಾತನಾಡಿ, ಗಿಡಮೂಲಿಕೆಯ ಆಯುರ್ವೇದ ಔಷಧಿಗಳಿಂದ ಯಾವುದೇ ರೀತಿಯ ಅಡ್ಡ ಪರಿ
ಣಾಮ ಇಲ್ಲ. ಹಾಗೆ ಶರೀರದೊಳಗಿನ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಜಗತ್ತಿನಮುಂದುವರಿದ ರಾಷ್ಟÅಗಳೂ ಕೂಡಭಾರತದ ಆಯುರ್ವೇದ ಪದ್ಧತಿಯ ಔಷಧಿಯನ್ನು ಅನುಸರಿಸುತ್ತಿವೆ. ಪೂರ್ವಜರ ಕಾಲದಿಂದಲೂ ಬಳಕೆಯಲ್ಲಿರುವ ಆಯುರ್ವೇದಕ್ಕೆ ಮಹತ್ವ ನೀಡ ಬೇಕಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಡಾ| ನಾರಾಯಣ ಅಂಚನ್‌ ಅವರು ಪ್ರಾತ್ಯಕ್ಷಿಕೆಯ ಮೂಲಕ ವಿವಿಧ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಅದನ್ನು ನಿವಾರಿಸಲು ಸಲಹೆಗಳನ್ನು ನೀಡಿದರು. ಶಿಬಿರದಲ್ಲಿ ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶ್ರೀನಿವಾಸ ಆರ್‌. ಕರ್ಕೇರ ಅವರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್‌ ಘಾಟ್‌ಕೋಪರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಕೆ. ಪೂಜಾರಿ ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳ ಸದುಪ ಯೋಗವನ್ನು ಎಲ್ಲಾ ಸಮಾಜ ಬಾಂಧ ವರು ಪಡೆದುಕೊಳ್ಳಬೇಕು. ಬಡವರ ಬಗ್ಗೆ ಕಾಳಜಿಯುಳ್ಳ ಡಾ| ನಾರಾಯಣ ಅಂಚನ್‌ ಅವರು ಆಯುರ್ವೇದದಲ್ಲಿ ಬಹಳ ಅನುಭವಿ ವೈದ್ಯರಾಗಿದ್ದಾರೆ. ಅಂತಹ ವೈದ್ಯರ ಸಲಹೆ, ಮಾರ್ಗದರ್ಶನ ನಮಗೆ ತುಂಬಾ ಪ್ರಯೋಜನವಾಗಲಿದೆ ಎಂದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ಮಾತನಾಡಿ, ಮನುಷ್ಯ ಜೀವನದಲ್ಲಿ ದೊಡ್ಡ ಸಂಪತ್ತು ಎಂದರೆ ಅದು ಆರೋಗ್ಯ ಭಾಗ್ಯ. ನಮ್ಮ ಆರೋಗ್ಯ ಸರಿಯಾಗಿದ್ದರೆ ನಾವು ನೆಮ್ಮದಿಯ ಜೀವನ ನಡೆಸಬಹುದಾಗಿದೆ. ಆರೋಗ್ಯವನ್ನು ಕಾಪಾಡುವತ್ತ ಎಲ್ಲರೂ ಗಮನ ಹರಿಸಬೇಕು. ಬಿಲ್ಲವರ ಅಸೋಸಿಯೇಶನ್‌ ಸಮಾಜದ ಏಳ್ಗೆಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಸಮಾಜ ಬಾಂಧವರು ಇದರ ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

Advertisement

ಡಾ| ನಾರಾಯಣ ಅಂಚನ್‌ ಇವರನ್ನು ಚಂದ್ರಶೇಖರ ಎಸ್‌. ಪೂಜಾರಿ ಇವರು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಶಿಬಿರದ ಲಾಭವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಘಾಟ್‌ಕೋಪರ್‌ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಗಣೇಶ್‌ ಸಾಲ್ಯಾನ್‌, ಯೋಗೇಶ್‌ ಪೂಜಾರಿ, ಅಶೋಕ್‌ ಪೂಜಾರಿ, ಉದಯ್‌ ಪೂಜಾರಿ, ಕರುಣಾಕರ ಪೂಜಾರಿ, ಕೃಷ್ಣಪ್ಪ ಪೂಜಾರಿ, ರಮಾನಾಥ ಕೋಟ್ಯಾನ್‌, ವಿಮಲಾವತಿ ಬಂಗೇರ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು – ಸದಸ್ಯೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next