Advertisement

ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಸಮಿತಿ:  ಶೈಕ್ಷಣಿಕ ನೆರವು ವಿತರಣೆ

04:05 PM Jul 27, 2018 | Team Udayavani |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕಳೆದ ಹಲವು ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು, ಈ ವರ್ಷ ಕೂಡ ಆರ್ಥಿಕ ಸಹಾಯವನ್ನು ಸ್ಥಳೀಯ ಕಚೇರಿಯ ಸಭಾಗೃಹದಲ್ಲಿ ಜು.  22 ರಂದು ನಡೆಯಿತು.

Advertisement

ಪ್ರಾರಂಭದಲ್ಲಿ ಪುರೋಹಿತ ಐತಪ್ಪ ಸುವರ್ಣರು ಗುರುಪೂಜೆಗೈದರು.  ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದಿ|  ಸಂಜೀವ ಪಾಲನ್‌ ಅವರ ಧರ್ಮಪತ್ನಿ  ಗಿರಿಜಾ ಎಸ್‌. ಪಾಲನ್‌, ಗೌರವ ಅತಿಥಿಗಳಾಗಿ ಭಾರತ್‌ ಬ್ಯಾಂಕ್‌ ಅಂಬರ್‌ನಾಥ್‌ ಶಾಖೆಯ ಮ್ಯಾನೇಜರ್‌ ದಿನೇಶ್‌  ಕರ್ಕೇರ, ಹಾಗೂ ಪ್ರಧಾನ ಕಾರ್ಯಾಲಯದಿಂದ ಶಾಲಾ ಉಪ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ತೋನ್ಸೆ, ಹಾಗೂ ಗೌರವ ಕಾರ್ಯದರ್ಶಿ ಹರೀಶ್‌ ಸಾಲ್ಯಾನ್‌, ಸ್ಥಳೀಯ ಸಮಿತಿಯ ಉಪಾಧ್ಯಕ್ಷರುಗಳಾದ ಚಂದ್ರಹಾಸ್‌ ಪಾಲನ್‌ ಮತ್ತು ಸಿ. ಎನ್‌. ಕರ್ಕೇರ, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ ಹಾಗೂ ಗೌರವ ಕೋಶಾಧಿಕಾರಿ ಲಲಿಶ್ಚಂದ್ರ ಸುವರ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರವಿ ಎಸ್‌. ಸನಿಲ್‌ ಅವರು ಬಿಲ್ಲವರ ಅಸೋಸಿಯೇಶನ್‌  ಚಂದ್ರಶೇಖರ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ ನೂತನ ಸಮಿತಿಗೆ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸ್ವಾಗತಿಸಿದರು.  ಮಾಜಿ ಕಾರ್ಯಾಧ್ಯಕ್ಷ  ರವಿ ಎಸ್‌. ಸನಿಲ್‌ ಅವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳ ಪರಿಚಯ ನೀಡಿದರು. ದೇವರಾಜ್‌ ಪೂಜಾರಿ ಅವರು ಹಾಗೂ ಪದಾಧಿಕಾರಿಗಳು ಅತಿಥಿಗಳಿಗೆ  ಪುಷ್ಪಗುತ್ಛವನ್ನಿತ್ತು ಸತ್ಕರಿಸಿದರು.

ರವಿ ಸನಿಲ್‌ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಬಿಲ್ಲವರ ಅಸೋಸಿಯೇಶನ್‌ ಕೈಗೊಂಡಿರುವ ಹಲವು ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ದತ್ತು ಸ್ವೀಕಾರ ಬಹಳ ಪ್ರಮುಖವಾಗಿದ್ದು,  ಇದಕ್ಕಾಗಿ ಒಂದು ಕೋಟ್ಯಾಂತರ ರೂ. ಗಳನ್ನು ವ್ಯಯಿಸುತ್ತಿದೆ. ಅಸೋಸಿಯೇಶನ್‌ ನೀಡುತಿರುವ ಆರ್ಥಿಕ ನೆರವು ಗುರು ಪ್ರಸಾದವೆಂದು ಪರಿಗಣಿಸಿ ಇದರ ಪ್ರಯೋಜನವನ್ನು ಪಡೆದು ಮಕ್ಕಳೆಲ್ಲ ಪ್ರತಿಭಾವಂತರಾಗಿ, ಕೀರ್ತಿವಂತ ರಾಗಿ ಜೀವನದಲ್ಲಿ ಯಶಸ್ವಿಯಾಗಿ ಉದ್ಯೋಗ ವಂತರಾಗಿ ಸುಸಂಸ್ಕೃತ  ಪ್ರಜೆಯಾಗಿ, ನಿಮ್ಮ ಪಾಲಕರ ಹಾಗೂ ಅಸೋಸಿಯೇಶನ್‌ ಗೌರವ ಹೆಚ್ಚಿಸಲು ಸಹಕಾರ ನೀಡುವಂತೆ ಕರೆ ನೀಡಿದರು.

ವಿಶ್ವನಾಥ್‌ ತೋನ್ಸೆ ಅವರು  ವಿದ್ಯಾರ್ಥಿ ಗಳಲ್ಲಿ ವಿಶೇಷ ಪ್ರಶ್ನೆಗಳನ್ನು ಕೇಳುತ್ತಾ, ಆರ್ಥಿಕ ಸಹಾಯದ ಪ್ರಯೋಜನವನ್ನು ಪಡೆದು, ಸಮಾಜಕ್ಕೆ ಕೀರ್ತಿ ತನ್ನಿ ಎಂದು ಹಾರೈಸಿದರು. ದಿನೇಶ್‌ ಕರ್ಕೇರ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಹಾಯ ಮಾಡಿದ ಸಂಸ್ಥೆಯನ್ನು ಮರೆಯದೆ ಸ್ಥಳೀಯ ಕಚೇರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ ನೀಡಿದರು. ದೇವರಾಜ್‌ ಪೂಜಾರಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸ್ಥಳೀಯ ಕಾರ್ಯಾಲಯದಲ್ಲಿ ಜರಗುತ್ತಿರುವ ಎಲ್ಲ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಸಹಕರಿಸುತ್ತಿರುವ ಎÇÉಾ ದಾನಿಗಳಿಗೆ ಕೃತಜ್ಞತೆ ನೀಡುತ್ತಾ, ಪಾಲಕರು ತಮ್ಮ ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ನೀಡಿ ಯೋಗ್ಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ವಿನಂತಿಸಿದರು. ಧನ ಸಹಾಯ ನೀಡಿದ ಗಣ್ಯರಿಗೆ ಪುಷ್ಪ ಗೌರವ ನೀಡಲಾಯಿತು. ವೇದಿಕೆಯಲ್ಲಿಯಿದ್ದ ಗಣ್ಯರ ಹಸ್ತದಿಂದ  ಆರ್ಥಿಕ ಸಹಾಯ ವಿತರಣೆ ಮಾಡಲಾಯಿತು.

Advertisement

ದಿ| ಜೆ. ಎ. ಬಂಗೇರ ಅವರ ಸ್ಮರಣಾರ್ಥ  ಶರದ್‌ ಜೆ. ಬಂಗೇರ ದಂಪತಿ, ವಿಮಲಾ ಕೆ. ಅಂಚನ್‌,  ಗಿರಿಜಾ ಎಸ್‌. ಪಾಲನ್‌, ಕುಶಾ ರವಿ ಸನಿಲ…,  ರವಿ ಎಸ್‌.  ಪೂಜಾರಿ,  ರಾಮಚಂದ್ರ ಜೆ. ಬಂಗೇರ, ಕೃಷ್ಣ ಎಲ…. ಪೂಜಾರಿ, ಹೇಮಾ ದೇವರಾಜ್‌, ಹರಿಣಾಕ್ಷಿ ಜಗನ್ನಾಥ್‌ ಸನಿಲ… ದಂಪತಿಗಳು ಹಾಗೂ ಕು| ದಿವ್ಯಾ ಜಗನ್ನಾಥ್‌ ಸನಿಲ…, ಜ್ಯೋತಿ ಯೋಗೇಶ್‌ ಪೂಜಾರಿ ,  ರವಿ ಸುವರ್ಣ ದಂಪತಿ, ಕುಮಾರಿ ರಿಕಿತಾ ರವಿ ಸನಿಲ…, ಪುರಂಧರ ಪೂಜಾರಿ ದಂಪತಿ, ನವಿಶ್‌ ಎಸ್‌. ಅಮೀನ್‌, ಯುವ ವಿಭಾಗ, ಬಿಲ್ಲವರ ಅಸೋಸಿಯೇಶನ್‌  ಡೊಂಬಿವಲಿ ಸಮಿತಿಯ ಸದಸ್ಯರು  ಹಾಗೂ ಹಲವಾರು ಗಣ್ಯರು ಧನ ಸಹಾಯ ನೀಡಿ ಸಹಕರಿಸಿದರು.  ಕಾರ್ಯದರ್ಶಿ ಪುರಂದರ ಪೂಜಾರಿ ವಂದಿಸಿದರು. 

ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದರು.  ರವಿ ಎಸ್‌. ಸನಿಲ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next