Advertisement

ಬಿಲ್ಲವರ ಅಸೋಸಿಯೇಶನ್‌ ಅಂಧೇರಿ ವಾರ್ಷಿಕ ಸಂಭ್ರಮಕ್ಕೆ ಚಾಲನೆ

10:52 AM Jan 15, 2019 | |

ಮುಂಬಯಿ: ಇಟ್ಟಿಗೆಯಿಂದ ಇಟ್ಟಿಗೆಯನ್ನಿರಿಸಿ, ಕೈಯಿಂದ ಜೋಡಿಸಿ ಜೊತೆ ಜೊತೆಯಾಗಿ ಕಾಯಕದಲ್ಲಿ ತೊಡಗಿಸಿ ಮುನ್ನಡೆದ ಫಲವೇ ಈ ಸಡಗರವಾಗಿದೆ. ಸಂಬಂಧಗಳ ಕಟ್ಟಡವನ್ನು ಕಟ್ಟಿದಾಗಲೇ ಸಮಾಜದ ಸುಧಾರಣೆ ಸಾಧ್ಯವಾಗುವುದು. ಇವೆಕ್ಕೆಲ್ಲಕ್ಕೂ ಮಿಗಿಲಾಗಿ ಪಾರದರ್ಶಕತ್ವದ ಸೇವೆಯೇ ಐಕ್ಯತೆಗೆ ಪ್ರಧಾನವಾದುದು. ಭವಿಷ್ಯದಲ್ಲೂ ತಾವೆಲ್ಲರೂ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿರಿ. ಅದೇ ಸಮಾಜದ ಸರ್ವೋನ್ನತಿಗೆ ಮೂಲವಾಗಬಲ್ಲದು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸುಶೀಕ್ಷಿತರಾಗಿಸಿ ಸಮಾಜ ಮುನ್ನಡೆಸಿ ಎಂದು ಉದ್ಯಮಿ ಕ್ಯಾಪ್ಟನ್‌ ವೇಣುಗೋಪಾಲ್‌ ಎಂ. ಸುವರ್ಣ ತಿಳಿಸಿದರು.

Advertisement

ಜ. 13 ರಂದು ಸಾಂತಾಕ್ರೂಜ್‌ ಪೂರ್ವದ ಗುರು ನಾರಾಯಣ ಮಾರ್ಗದ  ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ ಅಂಧೇರಿ ಸ್ಥಳೀಯ ಕಚೇರಿಯ ದಿ| ಲ| ಎಂ. ಎನ್‌. ಸುವರ್ಣ ದ್ವಾರ ಹಾಗೂ ಸ್ವರ್ಗೀಯ ಸೂರು ಸಿ. ಕರ್ಕೇರ ಸ್ಮಾರಣಾರ್ಥ ವೇದಿಕೆಯಲ್ಲಿ  ಪಂಚದಶಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.
ಶ್ರೀ ಭುವನೇಶ್ವರಿ ದೇವಸ್ಥಾನ ಫೋರ್ಟ್‌ ಇದರ ಆಡಳಿತ ಮೊಕ್ತೇಸರ ವಿದ್ವಾನ್‌ ರಾಜೇಶ್‌ ಭಟ್‌ ಫೋರ್ಟ್‌ ಆಶೀರ್ವಚನ ನೀಡಿ, ಬಿಲ್ಲವರು ಶ್ರಮಿಕರಾಗಿ, ಪರೋಪಕಾರಿಯಾಗಿ ಬೆಳೆದವರು. ಬಿಲ್ಲವರಿಗೆ ಜಯ ಸಿ. ಸುವರ್ಣರು ಸರ್ವಶಕ್ತಿ ಆಗಿದ್ದು, ಗುರುಶ್ರೀಗಳೇ ಅವರನ್ನು ನಮಗೆ ಒದಗಿಸಿದ್ದಾರೆ. ನಾವು ಎಲ್ಲೂ ಒಗ್ಗೂಡಿದಲ್ಲೂ ಅಭಿಲಾಷೆ, ಸ್ವಾರ್ಥ ಬಿಟ್ಟು ನಿಸ್ವಾರ್ಥರಾಗಿ ಸೇವೆಗೈದರೆ ಸಮುದಾಯದ ಒಟ್ಟು ಸರ್ವೋನ್ನತಿ ಸಾಧ್ಯ. ಇವೆಕ್ಕೆಲ್ಲಾ ಧ್ಯಾನಶಕ್ತಿಯನ್ನು ಮೈಗೂಡಿಸಿಕೊಂಡಾಗ ನಮ್ಮ ಯೋಜನೆಗಳು ಸಂಪನ್ನಗೊಂಡು ಎಲ್ಲವೂ ಮತ್ತು ಎಲ್ಲರಿಗೂ ಒಳಿತಾಗುವುದು. ಸದ್ಯ ನಮ್ಮಲ್ಲಿ ಎಲ್ಲವೂ ಇದೆ ಅಂತೆಯೇ ಮುಂಬಯಿಯಲ್ಲಿ ಗುರುನಾರಾಯಣರ ಮಠವೊಂದು ನಿರ್ಮಾಣವಾಗಬೇಕು ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರ  ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪುತ್ತೂರು ಇದರ ಆಡಳಿತ ಮೊಕ್ತೇಸರ ಶಿವಪ್ರಸಾದ್‌ ಪೂಜಾರಿ, ಅಂಧೇರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಬಾಬು ಕೆ. ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಸುರೇಶ್‌ ಬಿ. ಸುವರ್ಣ ಮತ್ತು ಜಗನ್ನಾಥ ಕರ್ಕೇರ, ಗೌರವ ಕೋಶಾಧಿಕಾರಿ ಸುಧಾಕರ ಎಂ. ಜತ್ತನ್‌ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಮಾಜ ಸೇವಕರಾದ ಎಂ. ವಿ. ಗುರುಚರಣ್‌ ಅಮೀನ್‌, ಜಯಂತಿ ವರದ ಉಳ್ಳಾಲ್‌, ಲಕ್ಷಿ¾à ಎನ್‌. ಕೋಟ್ಯಾನ್‌, ಮೂಲ್ಕಿ ಭೋಜ ಎಂ. ಪೂಜಾರಿ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಅಸೋಸಿಯೇಶನ್‌ನ ಎಲ್ಲಾ ಸ್ಥಳೀಯ ಸಮಿತಿಗಳ ಯುವ ವಿಭಾಗದ ಸದಸ್ಯರಿಗೆ ಡೆನ್ನ ಡೆನ್ನಾಣ-2019 ಜಾನಪದ ನೃತ್ಯ ಸ್ಪರ್ಧೆ ನಡೆಯಿತು.  ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್‌, ಕು| ಕಾಜಲ್‌ ಕುಂದರ್‌, ಕು| ಪ್ರಿಯಾಂಜಲಿ ರಾವ್‌ ತೀರ್ಪುಗಾರರಾಗಿ ಸಹಕರಿಸಿದರು. ಸಾಂಸ್ಕೃತಿಕ  ಮತ್ತು ಮನೋರಂ ಜನಾ ಕಾರ್ಯಕ್ರಮದ ಅಂಗವಾಗಿ ಅಂಧೇರಿ ಸ್ಥಳೀಯ ಕಚೇರಿಯ ಸದಸ್ಯರು ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು  ಡಾ| ಚಂದ್ರಶೇಖರ್‌ ಕಂಬಾರ ಕಥೆ ರಚಿತ ನಾರಾಯಣ್‌ ಶೆಟ್ಟಿ ನಂದಳಿಕೆ ಸಂಭಾಷಣೆಯ ಮತ್ತು ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶಿತ ಪ್ರಶಸ್ತಿ ವಿಜೇತ “ನಾಗ ಸಂಪಿಗೆ’ ಕಿರು ನಾಟಕ ಪ್ರದರ್ಶನಗೊಂಡಿತು.

ಚಂದ್ರಶೇಖರ್‌ ಪೂಜಾರಿ  ಪಾರಿತೋಷಕಗಳ ಅನಾವರಣಗೈದು ಭಾರತ್‌ ಬ್ಯಾಂಕಿನ ನಿರ್ದೇಶಕ ಪುರುಷೋತ್ತಮ ಎಸ್‌. ಕೋಟ್ಯಾನ್‌, ಮಾಜಿ ನಿರ್ದೇಶಕ ಎನ್‌. ನಿತ್ಯಾನಂದ್‌, ಉದ್ಯಮಿ ಪ್ರಕಾಶ್‌ಕುಮಾರ್‌ ಮೂಡಬಿದ್ರೆ ಅವರನ್ನು ಸತ್ಕರಿಸಿದರು. ಆದಿಯಲ್ಲಿ ರವೀಂದ್ರ ಶಾಂತಿ ಪೂಜಾಧಿಗಳನ್ನು ನೆರವೇರಿಸಿದರು. ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಕೋಟ್ಯಾನ್‌ ಸ್ವಾಗತಿಸಿದರು.
ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್‌. ಕೋಟ್ಯಾನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕು| ಶ್ರದ್ಧಾ ಬಂಗೇರ ಪ್ರಾರ್ಥನೆಗೈದರು. ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ನಿತೇಶ್‌ ಪೂಜಾರಿ ಮಾರ್ನಾಡ್‌ ಅತಿಥಿಗಳು ಮತ್ತು ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಕಚೇರಿ ಗೌರವ ಕಾರ್ಯದರ್ಶಿ ಹರೀಶ್‌ ಶಾಂತಿ ಹೆಜಮಾಡಿ ವಂದಿಸಿದರು. ಸಮಾಜ ಬಾಂಧವರು, ಸದಸ್ಯ ಬಾಂಧವರು ಉಪಸ್ಥಿತರಿದ್ದರು.

 ಕಳೆದ ಒಂದುವರೆ ದಶಕದಿಂದ ಈ ಸಂಸ್ಥೆ ಪ್ರಾಮಾಣಿಕವಾಗಿ ಸಮುದಾಯದ ಉನ್ನತಿಗಾಗಿ ಶ್ರಮಿಸುತ್ತಿರುವ ಸೇವೆ ಶ್ಲಾಘನೀಯ. ನಮ್ಮಲ್ಲಿನ ಏಕತೆ ಬಿಲ್ಲವರಲ್ಲಿನ ಅಸ್ಮಿತೆ, ಸಾಂಘಿಕತೆಯನ್ನು ಬಲಿಷ್ಠ ಪಡಿಸುತ್ತಿದ್ದು, ಇದನ್ನು ಮತ್ತಷ್ಟು ಸಾಮರ್ಥ್ಯ ಯುತವಾಗಿಸಲು ನಮ್ಮ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿ ನಮ್ಮಲ್ಲಿನ ಯುವಜನತೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ.
      – ಎನ್‌. ಟಿ. ಪೂಜಾರಿ ,
ಕಾರ್ಯಾಧ್ಯಕ್ಷರು,ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅ

Advertisement

 ಜೀವನದ ಕ್ಷಣಕ್ಷಣವೂ ಬಹಳ ಮುಖ್ಯವಾಗಿದ್ದು, ಆದ್ದರಿಂದ ಸಮಯಪ್ರಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಯಪ್ರಜ್ಞೆ ಸಾಧನೆಗೆ ಪೂರಕವಾದುದು. ಪದಾಧಿಕಾರಿಗಳು, ಅತಿಥಿಗಳು ಸರಿಯಾದ ರೀತಿಯಲ್ಲಿ ಸಮಯ ಪಾಲಿಸಿದರೆ ಸಭಿಕರೂ ಅದಕ್ಕೆ ಬದ್ಧರಾದಲ್ಲಿ ಕಾರ್ಯಕ್ರಗಳು ಸುಗಮವಾಗಿ ಸಾಗಿ ಯಶಸ್ವಿಗೊಳ್ಳುವುದರಲ್ಲಿ ಸಂಶಯವಿಲ್ಲ.
       – ಶಿವಪ್ರಸಾದ್‌ ಪೂಜಾರಿ, 
ಆಡಳಿತ ಮೊಕ್ತೇಸರ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪುತ್ತೂರು

 ಪ್ರಕೃತಿ,  ಸಂಸ್ಕೃತಿಯ  ಬಗ್ಗೆ ತಿಳಿದಾಗ ಮಾನವ ನೆಮ್ಮದಿಯಾಗಿ ಬದುಕಲು ಸಾಧ್ಯ. ಇದಕ್ಕೆಲ್ಲಾ ಸಂಘ-ಜೀವಿಯಾಗುವ ಅಗತ್ಯವಿದೆ. ಸಂಂಸ್ಥೆಗಳ ಜತೆಗೂಡಿದಾಗ ಸಮಾಜದ ಜವಾಬ್ದಾರಿ ತಿಳಿಯಲು ಸಾಧ್ಯ. ಇದೇ ನಮ್ಮ ಉದ್ದೇಶವಾಗಿದೆ. ಇಂತಹ ಒಗ್ಗಟ್ಟಿಗೆ ಅಂಧೇರಿ ಸ್ಥಳೀಯ ಕಚೇರಿ ಕೊಡುಗೆ ಅವಿಸ್ಮರಣೀಯ. ನಮ್ಮ ನಡೆ ಇತರರಿಗೆ ಅನುಕರಣೀಯವಾದಾಗಲೇ ನಮ್ಮ ಜೀವನವೂ ಸಾರ್ಥಕವಾಗುವುದು.
       – ಚಂದ್ರಶೇಖರ್‌ ಪೂಜಾರಿ, 
ಅಧ್ಯಕ್ಷರು,ಬಿಲ್ಲವರ ಅಸೋ. ಮುಂಬಯಿ 

ಚಿತ್ರ -ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next