ಮುಂಬಯಿ: ಸಮಾಜ ಬಾಂಧವರು ಎಲ್ಲಾ ಕಾರ್ಯಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಾಗ ನಮಗೆ ಇನ್ನಷ್ಟು ಸಮಾಜಪರ ಸೇವೆ ಮಾಡಲು ಉತ್ತೇಜನ ಸಿಗುತ್ತದೆ. ನಮ್ಮ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಆ ಮೂಲಕ ಸಮಾಜ ಬಾಂಧವರ ಸೇವೆಯನ್ನು ಮಾಡಬೇಕು. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ನೂತನ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ ಅವರು ನುಡಿದರು.
ವಡಾಲ ಪಶ್ಚಿಮದ ಎನ್‌ಕೆಇಎಸ್ ಶಿಕ್ಷಣ ಸಂಕುಲದ ಸಭಾಗೃಹದಲ್ಲಿ ಜರಗಿದ ಬಿಲ್ಲವ ಸೇವಾ ಸಂಘ ಕುಂದಾಪುರ ಇದರ 30ನೇ ವಾರ್ಷಿ ಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಒಂದಾಗಿ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ಕರೆನೀಡಿದರು.
ಸಹಕಾರ ಸದಾಯಿದೆ
ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಉದ್ಯಮಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಇದರ ನಿರ್ದೇಶಕ ಭರತ್ ಎಸ್. ಪೂಜಾರಿ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ. ಸಮಾಜಪರ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ಸಂಘದ ಗೌರವಾಧ್ಯಕ್ಷ ಸುರೇಶ್ ಎಸ್. ಪೂಜಾರಿ ಇವರು ಮಾತನಾಡಿ, ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಹೊಸ ಸಮಿತಿಯು ಸಮಾಜದ ಜನರ ಒಳಿತಿಗಾಗಿ ಶ್ರಮಿಸಬೇಕು. ಒಳ್ಳೆಯ ಕಾರ್ಯಗಳಿಂದಾಗಿ ಸಂಘವು ಬಲ ಗೊಳ್ಳುತ್ತದೆ. ಸಮಾಜ ಬಾಂಧವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ| ಶೇಖರ್ ಹೆಮ್ಮಾಡಿ ಅವರನ್ನು ಅವರ ಸಮಾಜ ಸೇವೆಗಾಗಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಪರಮೇಶ್ವರ್ ಪೂಜಾರಿ, ಮಹೇಶ್ ಪೂಜಾರಿ, ಜಯ ಸೂರ್ಯ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಎಸ್. ಟಿ. ಪೂಜಾರಿ, ನ್ಯಾಯವಾದಿ ಆನಂದ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಬಿಲ್ಲವ, ಸಂಘದ ಎಸ್. ಕೆ. ಪೂಜಾರಿ, ಗೌರವ ಕಾರ್ಯದರ್ಶಿ ಶಂಕರ್ ಎಂ. ಪೂಜಾರಿ, ಉಪಾಧ್ಯಕ್ಷ ಎನ್. ಎಂ. ಬಿಲ್ಲವ, ಜತೆ ಕಾರ್ಯದರ್ಶಿಗಳಾದ ರಂಗ ಎಸ್. ಪೂಜಾರಿ, ಸುಶೀಲಾ ಆರ್. ಪೂಜಾರಿ, ಜತೆ ಕೋಶಾಧಿಕಾರಿಗಳಾದ ಶ್ರೀಧರ ವಿ. ಪೂಜಾರಿ, ರಮೇಶ್ ಜಿ. ಬಿಲ್ಲವ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಕಾರ್ಯದರ್ಶಿ ಯಶೋದಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಪೂಜಾರಿ ಕೊಡೇರಿ, ಕಾರ್ಯದರ್ಶಿ ಜಯಶ್ರೀ ಎ. ಕೋಡಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಎನ್. ಪೂಜಾರಿ, ಕಾರ್ಯದರ್ಶಿ ಅಶೋಕ್ ಎಂ. ಪೂಜಾರಿ, ಭಜನ ಮಂಡಳಿಯ ಸಂಚಾಲಕಿ ಸುಶೀಲಾ ಎಸ್. ಪೂಜಾರಿ, ಆಡಳಿತ ಮಂಡಳಿ, ಉಪಸಮಿತಿಗಳ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ