Advertisement
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರಮೇಶ್ ಕೋಟಿ, ಗೌರವ ಅತಿಥಿಗಳಾಗಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್ ಮತ್ತು ಸಮಾಜ ಸೇವಕಿ ನ್ಯಾ| ಕವಿತಾ ಆರ್.ಕೋಟಿ ಉಪಸ್ಥಿತರಿದ್ದು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
Related Articles
Advertisement
ಜಯ ಸಿ.ಸುವರ್ಣ ಮಾತನಾಡಿ, ಅಂದು 10 ಸಾವಿರ ಕೊಡುತ್ತಿದ್ದ ಅಸೋಸಿಯೇಶನ್ ಇಂದು ಕೋಟ್ಯಾಂತರ ಮೊತ್ತ ನೀಡಿ ಪ್ರೋತ್ಸಾಹಿಸುತ್ತಿದೆ. ಬಿಲ್ಲವರಲ್ಲಿ ಸಾಕ್ಷರತಾ ಸಂಖ್ಯೆ ಕಡಿಮೆಯಾಗಿರುವುದು ಖೇದಕರ. ಮನುಷ್ಯನಿಗೆ ಜ್ಞಾನದ ಅವಶ್ಯವಿದ್ದು ಇದಕ್ಕಾಗಿ ವಿದ್ಯಾರ್ಜನೆಯಿಂದ ಸ್ವತಂತ್ರÂರಾಗುವ ಅವಶ್ಯಕತೆ ಯಿದ್ದು, ಬಿಲ್ಲವರ ಅಸೋಸಿಯೇಶನ್ ಅದನ್ನು ಪರಿಣಾಮಕಾರಿಯಾಗಿ ರೂಢಿಸಿದೆ ಎಂದು ತಿಳಿಸಿದರು.
ನಿತ್ಯಾನಂದ ಡಿ.ಕೋಟ್ಯಾನ ಅಧ್ಯಕ್ಷೀಯ ಭಾಷಣಗೈದು ಆರೋಗ್ಯವಿದ್ದರೆ ಶಿಕ್ಷಣ. ಸುಶಿಕ್ಷಿತರಾದರೆ ಸ್ವಾಸ್ಥ್ಯತೆ. ಇದಕ್ಕೆ ಪೂರಕವಾಗಿ ಬಿಲ್ಲವರ ಅಸೋಸಿಯೇಶನ್ ಶ್ರಮಿಸುತ್ತಿದೆ. ಶಿಕ್ಷಣದ ಜೊತೆ ಸಮುದಾಯದ ಒಲವು ಕೂಡಾ ಸಹಜವಾಗಿ ಮಾಡಬೇಕು. ಆ ಮೂಲಕ ಸಮುದಾಯವನ್ನು ಮುನ್ನಡೆಸಲು ನಾಯಕತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾ ಉಪ ಸಮಿತಿ ಸದಸ್ಯರಾದ ರವೀಂದ್ರ ಎ.ಅಮೀನ್, ಪ್ರೇಮಾ ಆರ್.ಕೋಟ್ಯಾನ್, ರವಿರಾಜ್ ಕಲ್ಯಾಣRರ್, ಸದಾನಂದ ಅಮೀನ್, ಧನಂಜಯ ಎಸ್.ಕೋಟ್ಯಾನ್, ಎಂ.ಆನಂದ್ ಪೂಜಾರಿ, ಮೋಹನ್ ಡಿ.ಪೂಜಾರಿ, ಗಣೇಶ್ ಎಚ್. ಬಂಗೇರ, ದಿನೇಶ್ ಅಮೀನ್, ಗೋಪಾಲ್ ಪಾಲನ್ ಇನ್ನಿತರರು ಉಪಸ್ಥಿತರಿದ್ದು,ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಹಿಸಿಸಿದರು. ಡಾ| ನಿತೇಶ್ ಕರ್ನಿರೆ ಪುರಸ್ಕೃತರ ಪರವಾಗಿ ವಂದಿಸಿದರು.
ಈ ಸಂದರ್ಭದಲ್ಲಿ ಇತ್ತೀಚಿಗೆ ಗೊಂಚಲು ಕೃತಿ ಪ್ರಕಟಿಸಿದ ಪ್ರಭಾ ಎನ್.ಪಿ ಸುವರ್ಣ ಅವರಿಗೆ ಜಯ ಸಿ.ಸುವರ್ಣ ಅವರು ಪುಷ್ಪ ಗೌರವನ್ನಿತ್ತು ಗೌರವಿಸಿದರು.
ವಿಭೂತಿ ಆರ್.ಕಲ್ಯಾಣ್‌ಪುರ್ ಪ್ರಾರ್ಥನೆ ಹಾಡಿದರು. ವಿದ್ಯಾಉಪ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ವಿ.ಬಂಗೇರ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಅತಿಥಿಗಳನ್ನು ಪರಿಚಯಿಸಿ, ಕಾರ್ಯ ಕ್ರಮ ನಿರೂಪಿಸಿದರು.
ಜೊತೆ ಕೋಶಾಧಿಕಾರಿ ಧನಂಜಯ ಎಸ್.ಕೋಟ್ಯಾನ್ ಅವರು ದತ್ತು ಸ್ವೀಕೃತ, ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ವಿದ್ಯಾ ಉಪ ಸಮಿತಿ ಕಾರ್ಯದರ್ಶಿ ವಿಶ್ವನಾಥ ತೋನ್ಸೆ ವಂದಿಸಿದರು. ಚಿತ್ರ-ವರದಿ: ರೋನ್ಸ್ ಬಂಟ್ವಾಳ್