Advertisement

ಬಿಲ್ಲವರ ಅಸೋಸಿಯೇಶನ್‌ ಗೋರೆಗಾಂವ್‌: ಅರಸಿನ ಕುಂಕುಮ

05:24 PM Feb 25, 2017 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಗೋರೆಗಾಂವ್‌ ಸ್ಥಳೀಯ ಕಚೇರಿಯ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಲಲಿತ್‌ ಕ್ರಿಸ್ಟಲ್‌ ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ ಪೂಜೆಯನ್ನು ಆಯೋಜಿಸಲಾಗಿತ್ತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಅವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಮತಾ ಅಮೀನ್‌, ವಿನೋದಾ ಪೂಜಾರಿ ಅವರು ಪ್ರಾರ್ಥನೆಗೈದರು.

ದಿಶಾ ಕೋಟ್ಯಾನ್‌ ಮತ್ತು ಖುಷಿ ಅಮೀನ್‌ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವೇದಾ ಎಂ. ಸುವರ್ಣ, ರತ್ನಾ ಪೂಜಾರಿ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಜಗನ್ನಾಥ ವಿ. ಕೋಟ್ಯಾನ್‌, ಎಲ್‌. ಆರ್‌. ಅಂಚನ್‌, ಟಿ. ಎ. ಪೂಜಾರಿ, ವಿಟuಲ್‌ ಎಸ್‌. ಪೂಜಾರಿ,  ಸುರೇಶ್‌ ಪೂಜಾರಿ, ಶಿವರಾಮ ಕುಂದರ್‌ ಅವರು ಉಪಸ್ಥಿತರಿದ್ದರು.

ಸಮಿತಿಯ ಪದ್ಮಾವತಿ ಪೂಜಾರಿ, ಗಿರಿಜಾ ಪೂಜಾರಿ, ಮಹಿಳಾ ವಿಭಾಗದ ಪುಷ್ಪಾ ಸುವರ್ಣ, ಪುಷ್ಪಾ ಅಮೀನ್‌, ಕವಿತಾ ಪೂಜಾರಿ, ಸುಮಿತ್ರಾ ಕುಂದರ್‌ ನೈನಾ ಅಮೀನ್‌ ಅವರು ಸಹಕರಿಸಿದರು. ಶಕುಂತಳಾ ಕೆ. ಕೋಟ್ಯಾನ್‌ ಅವರು ಮಾತನಾಡಿ, ಮಹಿಳೆಯರೆಲ್ಲರೂ ಒಂದಾಗುವ ಒಳ್ಳೆಯ ಅವಕಾಶ ಇದಾಗಿದೆ. ಜೆ. ವಿ. ಕೋಟ್ಯಾನ್‌ ಅವರ ಆಶ್ರಯ ಗೋರೆಗಾಂವ್‌ ಸ್ಥಳೀಯ ಕಚೇರಿಗಿದೆ. ಹೀಗೆಯೆ ಭವಿಷ್ಯದಲ್ಲೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಮಿತಿಯು ಆಯೋಜಿಸುತ್ತಿರಲಿ ಎಂದು ನುಡಿದು ಶುಭ ಹಾರೈಸಿದರು.

ಅತಿಥಿ ವೇದಾ ಎಂ. ಸುವರ್ಣ ಅವರು ಅರಸಿನ ಕುಂಕುಮ ಮಹತ್ವದ ಬಗ್ಗೆ ವಿವರಿಸಿದರು. ಸುಗುಣಾ ಎಸ್‌. ಬಂಗೇರ ಸ್ವರಚಿತ ಕವನಗಳನ್ನು ವಾಚಿಸಿದರು. ಪದ್ಮಾವತಿ ಪೂಜಾರಿ ಅವರು ಮಕರ ಸಂಕ್ರಾಂತಿಯ ಹಾಡನ್ನು ಹಾಡಿದರು. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸುಚಲತಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸುಜಾತಾ ಕೋಟ್ಯಾನ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next