Advertisement

ಬಿಲ್ಲವರ ಅಸೋಸಿಯೇಶನ್‌ ಗೋರೆಗಾಂವ್‌ : ಅರಸಿನ ಕುಂಕುಮ

03:22 PM Feb 23, 2019 | Team Udayavani |

ಮುಂಬಯಿ: ಮಹಿಳಾ ಸಂಘಟನೆ ಒಂದೇ ಛತ್ರದಡಿಯಲ್ಲಿ ಬೆಳೆದು ಸಮಾಜಕ್ಕೆ ಸ್ಪಂದಿಸುತ್ತಿರುವುದು ತಿಳಿದ ವಿಷಯವಾಗಿದೆ. ಅರಸಿನ ಕುಂಕುಮದಂತಹ ಮಹಿಳಾ ಕಾರ್ಯಕ್ರಮ ಗಳಿಂದಾಗಿ ಸಂಘಟನೆ ಮತ್ತಷ್ಟು ಬೆಳೆಯುತ್ತದೆ. ಮಹಿಳೆಯರು ಇಂತಹ ಕಾರ್ಯಕ್ರಮಗಳಿಗೆ ಮಾನಸಿಕವಾಗಿ ಬಲಾಡ್ಯಗೊಳ್ಳುತ್ತಿದ್ದು, ಜೀವನ ವಿಕಸನಗೊಳ್ಳುತ್ತಿದೆ. ಮುಖ್ಯವಾಗಿ ಇಂತಹ ಕಾರ್ಯಕ್ರಮಗಳಿಂದಾಗಿ ಮಹಿಳೆಯರ ಆಚಾರ, ವಿಚಾರಗಳಿಗೆ ಮಹತ್ವ ಲಭಿಸುತ್ತಿದೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ನುಡಿದರು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಗೋರೆಗಾಂವ್‌ ಸ್ಥಳೀಯ ಕಚೇರಿಯ  ಮಹಿಳಾ ವಿಭಾಗದ ವತಿಯಿಂದ ಗೋರೆಗಾಂವ್‌ ಲಲಿತ್‌ ಹೊಟೇಲ್‌ನ ಕ್ರಿಸ್ಟಲ್‌ ಸಭಾಗೃಹದಲ್ಲಿ ನಡೆದ ಅರಸಿನ ಕುಂಕುಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಸದಾಯಿದೆ ಎಂದು ನುಡಿದು ಶುಭಹಾರೈಸಿದರು.

ಗೋರೆಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮಿತ್ರಾ ಗುಜರನ್‌ ಅವರು ಮಾತನಾಡಿ, ಇಂದಿನ ಮಹಿಳೆಯರು ಆಡಂಬರದ ಜೀವನಕ್ಕೆ ಮಾರು ಹೋಗದೆ, ಉತ್ತಮ ಆಚಾರ, ಸಂಸ್ಕಾರಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಇಂದಿನ ಮಹಿಳೆಯರಿಗೆ ಯುವತಿಯರನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿಯಿದೆ. ಮರಾಠಿ ಮಣ್ಣಿನಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಮಾಡಿ ಮಹಿಳಾ ಸಂಘಟನೆಗಳು ಶಕ್ತಿಪಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸುಕೇಶಿನಿ ಯಶವಂತ್‌ ಪೂಜಾರಿ ಇವರು ಮಾತನಾಡಿ, ಮಹಿಳೆಯರು ಧರಿಸುವ ಹಾಗೂ ಹಚ್ಚುವ ಪ್ರತಿಯೊಂದು ವಸ್ತುವೂ ಅದರದೆ ಆದ ಮಹತ್ವವನ್ನು ಪಡೆದಿದೆ. ಕಾಲ ಬದಲಾಗುತ್ತಿದ್ದರೂ ಮಹಿಳೆಯರಾದ ನಾವು ಇದಕ್ಕೆಲ್ಲಾ ಮಹತ್ವ ನೀಡಿ ಸಂಸ್ಕಾರಯುತವಾಗಿ ಬಾಳಿ ಇಂದಿನ ಹಾಗೂ ಮುಂದಿನ ಯುವತಿಯವರಿಗೆ ಮಾರ್ಗದರ್ಶಕರಾಗಿ ಇರಬೇಕು. ಈಗಿನ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ಆರೋಗ್ಯದ ಕಾಳಜಿಯನ್ನು ವಹಿಸದೆ ಇರುವುದು ವಿಷಾಧನೀಯ. ಆದ್ದರಿಂದ ನಾವು ಸಮಾಜ ಸೇವೆಯೊಂದಿಗೆ ಆರೋಗ್ಯದತ್ತು ಗಮನ ಹರಿಸಬೇಕು ಎಂದು ಕರೆ ನೀಡಿದರು.

ಸಿಟಿ ಬ್ಯಾಂಕಿನ ಉಪಾಧ್ಯಕ್ಷೆ ಜಯಶ್ರೀ ಮೋಹನ್‌ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಹಿಂದು ಶಾಸ್ತ್ರ ಹೇಳುವಂತೆ ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಗೌರವಿಸಲಾಗುತ್ತದೆ. ಈ ಕುಂಕುಮವು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿವಾಹಿತ ಸ್ತಿÅàಯರು ಇದನ್ನು ಧರಿಸಿದರೆ ಅದೃಷ್ಟವನ್ನು ತರುತ್ತದೆ ಹಾಗೂ ಇದು ಕೇವಲ ಆಚಾರವಲ್ಲದೆ, ಅಲಂಕಾರಗೊಸ್ಕರ ಹಚ್ಚಿಕೊಳ್ಳುತ್ತಾರೆ ಎಂದು ನುಡಿದು ಶುಭಹಾರೈಸಿದರು.

Advertisement

ಬಿಲ್ಲವರ ಅಸೋಸಿಯೇಶನ್‌ ಕೇಂದ್ರ ಕಚೇರಿಯ ಸದಸ್ಯೆ ಸಬಿತಾ ಪೂಜಾರಿ, ಗೋರೆಗಾಂವ್‌ ಕೇಂದ್ರ ಕಚೇರಿಯ ಪ್ರತಿನಿಧಿಗಳಾದ ಪುಷ್ಪಾ ಅಮೀನ್‌, ಬಬಿತಾ ಜನಾರ್ಧನ್‌ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶಂಕರ ಬಿ. ಪೂಜಾರಿ, ಗೋರೆಗಾಂವ್‌ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಜೆ. ವಿ. ಕೋಟ್ಯಾನ್‌, ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೆ. ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಹೆಜ್ಮಾಡಿ ಉಪಸ್ಥಿತರಿದ್ದರು.

ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಪೂಜೆಯಲ್ಲಿ ಸಮಿತಿಯ ಕೋಶಾಧಿಕಾರಿ ಮೋಹನ್‌ ಬಿ. ಅಮೀನ್‌ ಮತ್ತು ನಯನಾ ಮೋಹನ್‌ ಅಮೀನ್‌ ಅವರು ಸಹಕರಿಸಿದರು. ಮಮತಾ, ವಿನೋದಾ, ಸುನೀತಾ ಅವರು ಪ್ರಾರ್ಥನೆಗೈದರು.  ಪದ್ಮಾವತಿ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ನೆರವೇರಿತು.

ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಸುಚಲತಾ ಸಚಿನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಜೆ. ವಿ. ಕೋಟ್ಯಾನ್‌ ಮತ್ತು ಸೂರ್ಯಕಾಂತ್‌ ಜೆ. ಸುವರ್ಣ ಅವರ ಸಹಕಾರದಿಂದ ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ಸಮಾಜದ ಮಹಿಳೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next