ಉಡುಪಿ: ನಾರಾಯಣ ಗುರುಗಳ ಆದರ್ಶಗಳು ನಮಗೆ ಮಾದರಿ. ರಕ್ತಕ್ರಾಂತಿ ಇಲ್ಲದೆ ಅವರು ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತಂದರು. ಅವರ ಹೆಸರಿನಲ್ಲಿ ಇಂದು ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇವರ ತತ್ವ್ತಾ ಆದರ್ಶಗಳನ್ನು ಮುಂದಿನ ತಲೆಮಾರಿಗೆ ತಿಳಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಪ್ರಯುಕ್ತ ರವಿವಾರ ಶ್ರೀ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿದ ಗುರು ಸಂದೇಶ ಸಾಮರಸ್ಯ ಜಾಥಾ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಾರಾಯಣ ಗುರುಗಳ ಸಿದ್ಧಾಂತಗ ಳನ್ನು ರಾಜಕಾರಣದಲ್ಲೂ ಪಾಲಿಸುತ್ತಿದ್ದೇನೆ. ಮಹಾತ್ಮಾ ಗಾಂಧೀಜಿಗೂ ನಾರಾಯಣ ಗುರುಗಳು ಪ್ರೇರಣೆ ಯಾಗಿದ್ದರು. ಕರಾವಳಿಯ ಬಿಲ್ಲವರು ಮತ್ತಷ್ಟು ಅವರ ತತ್ವಗಳನ್ನು ಪಾಲಿಸಬೇಕು ಎಂದರು.
ಸರಕಾರದಿಂದ ಪ್ರೋತ್ಸಾಹ ಸಿಗಲಿ
ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಪ್ರಸ್ತಾವನೆಗೈದು, ನಾರಾಯಣ ಗುರುಗಳ ಸಂದೇಶಗಳು ಶಾಲಾ-ಮಕ್ಕಳಿಗೆ ತಲುಪಬೇಕು. ಮುಂದಿನ ವರ್ಷ ನಾರಾಯಣ ಗುರು ಜಯಂತಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಅನುಷ್ಠಾನವಾಗಬೇಕು. ನಾರಾಯಣ ಗುರುಗಳ ಪುತ್ಥಳಿ ವಿಧಾನಸೌಧದ ಎದುರು ಸ್ಥಾಪಿಸಬೇಕು. ನಿಗಮಕ್ಕೆ ಬಜೆಟ್‌ನಲ್ಲಿ 500 ಕೋ.ರೂ. ಒದಗಿಸಬೇಕು. ಗರೋಡಿಯ ಪೂಜಾ ರಿಗಳಿಗೆ ಮಾಸಾಶನ ನೀಡಬೇಕು. ಗರೋಡಿಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾ ಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಯುವ ವೇದಿಕೆ ಗೌರವಾಧ್ಯಕ್ಷ ದಿವಾಕರ್ ಸನಿಲ್, ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ.ಸುವರ್ಣ, ಹೈಟೆಕ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ| ವಿನೋದ್ ಕುಮಾರ್, ಸೂರತ್‌ನ ಓಪುಲ ಸಾಫ್ಟ್ವೇರ್‌ನ ಸಿಇಒ ಸುಭಾಸ್ ಸಾಲ್ಯಾನ್, ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಮಣಿಪಾಲದ ಆಡಳಿತಾಧಿಕಾರಿ ಶಿನೋದ್ ಟಿ.ಆರ್., ತೋನ್ಸೆ ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್
ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಸಂತೆಕಟ್ಟೆ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಜತ್ತನ್, ಶ್ರೀ ನಾರಾಯಣ ಗುರು ಯುವ ವೇದಿಕೆ ಕಟ್ಟೆಗುಡ್ಡೆಯ ಗೌರವಾಧ್ಯಕ್ಷ ಸದಾಶಿವ ಅಮೀನ್, ಉದ್ಯಮಿ ಜಯಪ್ರಕಾಶ್ ಹೂಡೆ, ಕಾಪು ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಬಾಳಿಗ ಉಡುಪಿಯ ಜನರಲ್ ಮ್ಯಾನೇಜರ್ ಚಂದ್ರಶೇಖರ್ ವಿ.ಸುವರ್ಣ ಉಪಸ್ಥಿತರಿದ್ದರು. ಯುವ ವೇದಿಕೆ ಉಪಾಧ್ಯಕ್ಷ ಮಹೇಶ್ ಸ್ವಾಗತಿಸಿ, ದಯಾನಂದ ಉಗ್ಗೆಲ್‌ಬೆಟ್ಟು ನಿರೂಪಿಸಿದರು.