ಪುಣೆ: ಮನುಷ್ಯ ಜನ್ಮವೇ ದೊಡ್ಡದು. ನಾವು ಮೊದಲಾಗಿ ಜನ್ಮಕ್ಕೆ ಬರುವುದು ಮಾನವ ಜಾತಿಯಾಗಿ. ಆದ್ದರಿಂದ ಅದುವೇ ಶ್ರೇಷ್ಠ. ನಂತರ ನಾವು ಮಾಡುವ ಕರ್ಮ ಕಾರ್ಯ, ನಡತೆಗಳಿಂದ ಸಮಾಜ ನಮ್ಮನ್ನು ಗುರುತಿಸುತ್ತದೆ. ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವು ಇದುವೇ ಆಗಿದೆ. ಗುರುಗಳ ವಿಚಾರಧಾರೆಗಳನ್ನೂ ನಮ್ಮ ಜೀವವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಗುಡಿ, ಗೋಪುರ ಕಟ್ಟಿದರೆ ಸಾಲದು. ನಮ್ಮ ದೇಶವನ್ನು, ಸಮಾಜವನ್ನು ಕಟ್ಟುವ ಮೂಲಕ ನಮ್ಮ ಶ್ರೇಷ್ಠತೆಯನ್ನು ತೋರಿಸಿಕೊಳ್ಳಬೇಕಾಗಿದೆ. ದೇಶ ಮುನ್ನಡೆಸುವ ಯುವ ಶಕ್ತಿಯನ್ನು ಕಟ್ಟಬೇಕು. ಅದಕ್ಕಾಗಿ ಜಾತೀಯ ಭಾವದಿಂದ ಹೊರಬಂದು ನಾವೆÇÉಾ ತುಳು ಕನ್ನಡಿಗರು. ಭಾರತೀಯರು ಎಂಬ ದೇಶ ಪ್ರೇಮವನ್ನು ಸಾಕಾರಗೊಲಿಸಬೇಕು. ದೇವರು ಸೃಷ್ಟಿ ಮಾಡಿದ ಮನುಷ್ಯ ಜಾತಿಗೆ ಒಗ್ಗೂಡುವ ಕೆಲಸ ನಮ್ಮ ಎಲ್ಲಾ ಸಮಾಜ ಬಾಂಧವರಿಂದ ನಡೆಯಬೇಕು. ಚರಿತ್ರೆ ಇತಿಹಾಸವನ್ನು ಅಧ್ಯಯನ ಮಾಡಿ ಯಾರು ಸಂಘ ಸಂಘಟನೆಯನ್ನು ಕಟ್ಟುತ್ತಾರೋ ಅ ಸಂಘಟನೆ ನೂರಕ್ಕೆ ನೂರರಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯ. ಸಂಘಟನೆಗಳು ಸಮಾಜ ಮುಖೀಯಾಗಿ ಸೇವೆಗೈದಾಗ ಜನಮಾನಸದಲ್ಲಿ ಪ್ರೀತಿ ಹುಟ್ಟುತ್ತದೆ. ಇದೆ ಸಿ¨ªಾಂತದಲ್ಲಿ ಈ ಪುಣೆ ಬಿಲ್ಲವ ಸಂಘ ಬೆಳೆದು ನಿಂತಿದೆ ಹಾಗು ನಾರಾಯಣ ಗುರುಗಳ ಚಿಂತನೆಗೆ ಹೊಸ ರೂಪವನ್ನು ಕೊಟ್ಟಂತ್ತಾಗಿದೆ ಎಂದು ಮಂಗಳೂರು ಗೋಕರ್ನಾಥೇಶ್ವರ ದೇವಸ್ಥಾನದ ವಕ್ತಾರ ವಾಗ್ಮಿ ಹರಿಕೃಷ್ಣ ಬಂಟ್ವಾಳ ನುಡಿದರು.
ಫೆ. 4 ರಂದು ಕರ್ವೆ ನಗರದ ಕಮಿನ್ಸ್ ಕಾಲೇಜು ಸಮೀಪದ ದುಧಾನೆ ಲಾನ್ಸ್‌ನಲ್ಲಿ ಸಂಜೆ ನಡೆದ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದು¤ ಮಾತನಾಡಿದ ಇವರು, ಪ್ರತಿಭೆಗೆ ಜಾತಿ ಎಂಬುವುದಿಲ್ಲ. ನಮ್ಮ ಸಾಮಾಜಿಕ ಜೀವನದಲ್ಲಿ ಎಲ್ಲರನ್ನು ನಮ್ಮೆಡೆಗೆ ಅಕರ್ಷಿಸುವಂತಹ ವ್ಯಕ್ತಿತ್ವದ ಪ್ರತಿಭೆ ಇದ್ದರೆ ಬೆಳೆಯಬಹುದು. ಸಮಾಜವನ್ನು ಬಿಟ್ಟು ಯಾವ ವ್ಯಕ್ತಿಯು ಬೆಳೆಯುವಂತಿಲ್ಲ. ವ್ಯಕ್ತಿಯನ್ನು ಬಿಟ್ಟು ಸಮಾಜವು ಬೆಳೆಯುವಂತಿಲ್ಲ. ಅದ್ದರಿಂದ ಸೃಜನ ಶೀಲತೆ ಎಂಬ ವ್ಯಕ್ತಿತ್ವದ ಅಂಶಗಳು ಬೇಕಾಗಿದೆ. ಇದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುವ ಮನ ಮನಸ್ಸು ಬೇಕಾಗಿದೆ. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಪ್ರಾಮುಖ್ಯಸ್ಥಾನವನ್ನು ನಿಡಿದ್ದೇವೆ. ಮಹಿಳೆಯರಿಂದ ಸಮಾಜವನ್ನು ಸುಧಾರಿಸುವ ಕೌಶಲ್ಯತೆ, ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವ ಮೌಲ್ಯಧಾರಿತ ಜೀವನ ಪದ್ಧತಿ ಇದೆ. ಅಮರ ವೀರರು ಕೋಟಿ ಚೆನ್ನಯರ ಸಿ¨ªಾಂತವಾದ ಕೃಷಿ ಸಂಸ್ಕೃತಿ ಮತ್ತು ಯೋಧ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸುವ ಕೆಲಸ ಇಂದಿನ ದಿನಗಳಲ್ಲಿ ಆಗಬೇಕಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಥಾಣೆ ಮಹಾನಗರ ಪಾಲಿಕೆಯ ಮೇಯರ್ ಮೀನಾಕ್ಷಿ ಶಿಂಧೆ ಅವರು ವಹಿಸಿ ಮಾತನಾಡಿ, ಕರಾವಳಿ ಭಾಗದ ಜನರು ಯಾವುದೇ ಪ್ರದೇಶಕ್ಕೂ ಹೋದರು ಅತಿ ಶಿಘ್ರವಾಗಿ ಅಲ್ಲಿಯ ಮಣ್ಣಿನ ಕಲೆಯೊಂದಿಗೆ, ಜನರೊಂದಿಗೆ ಬೆರೆತು ಸ್ವತಂತ್ರವಾಗಿ ಬೆಳೆದು ನಿಲ್ಲುತ್ತಾರೆ. ಇದಕ್ಕೊಂದು ನಿದರ್ಶನವೆ ಪುಣೆ ಬಿಲ್ಲವ ಸಂಘದ ಈ ಸಮಾರಂಭ. 25 ವರ್ಷಗಳಿಂದ ಎಲ್ಲರು ಜೊತೆಯಾಗಿ ಸಾಗಿಬಂದು ಈ ಸಮಾಜವನ್ನು ಕಟ್ಟಿದ್ದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ಕಂಡಾಗ ಸಮಾಜದ ಒಗ್ಗಟ್ಟು ಹೇಗಿದೆ ಎಂಬುದು ಕಂಡು ಬರುತ್ತಿದೆ. ಇದು ಪುಣೆ ಬಿಲ್ಲವರ ಇತಿಹಾಸದÇÉೇ ಒಂದು ದಾಖಲೆಯಾಗಿ ಇರಬಹುದು. ನಾವು ಎಲ್ಲಿದ್ದರು ಯಾವುದೇ ಕೆಲಸವನ್ನು ಮಾಡಲು ಸಮರ್ಥರು ಎಂಬುದನ್ನು ಪುಣೆಯ ಈ ಕಾರ್ಯಕ್ರಮದಲ್ಲಿ ತಾವು ತೋರಿಸಿಕೊಟ್ಟಿದ್ದಿರಿ. ಪುರುಷರ ಜೊತೆಯಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳಾ ವರ್ಗವು ಕೂಡ ಇಲ್ಲಿಯ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿರುವುದನ್ನು ಕಂಡಾಗ ಮಹಿಳೆಯರಿಗೆ ಮೊದಲ ಪ್ರಾದನ್ಯತೆ ಇದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ. ನನ್ನ ಹಿರಿಯರು ಕೂಡ ತುಳುನಾಡಿನವರು ಎಂಬ ಹೆಮ್ಮೆ ನನಗಿದೆ ಎಂದರು.
ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ದಕ್ಷಿಣ ಕನ್ನಡ ಜಿÇÉಾ ಕೋ-ಆಪರೇಟಿವ್ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್, ಲೋನವಾಲ ಮುನ್ಸಿಪಲ್ ಕೌನ್ಸಿಲ್‌ನ ಉಪಾಧ್ಯಕ್ಷ ಶ್ರೀಧರ ಎಸ್. ಪೂಜಾರಿ, ಸಂಘದ ಸಂಸ್ಥಾಪಕ ಅಧ್ಯಕ್ಷ ಸುಂದರ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಟಿ. ಪೂಜಾರಿ, ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ್ ಪಿ. ಪೂಜಾರಿ ಕಡ್ತಲ, ಸಂಘದ ನಿಕಟ ಪೂರ್ವ ಅಧ್ಯಕ್ಷ ಸದಾಶಿವ ಎಸ್. ಸಾಲ್ಯಾನ್, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಕರುಣಾಕರ ಶಾಂತಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ.ಬಂಗೇರ, ಬೆಳ್ಳಿ ಮಹೋತ್ಸವ ಸಮಿತಿಯ ಮಹಿಳಾ ಅಧ್ಯಕ್ಷೆ ರೇವತಿ ಪೂಜಾರಿ, ಮಾಜಿ ಅಧ್ಯಕ್ಷೆ ಪ್ರಿಯಾ ಯು. ಪಣಿಯಾಡಿ ಉಪಸ್ಥಿತರಿದ್ದರು.
ಅತಿಥಿ ಗಣ್ಯರು ದೀಪ ಬೆಳಗಿಸಿ ಬೆಳ್ಳಿ ಬೆಳಕು ರಜತ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ವಿಶ್ವನಾಥ್ ಪೂಜಾರಿ ಕಡ್ತಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಂಕರ್ ಪೂಜಾರಿ ಮತ್ತು ಬಳಗದವರು ಪ್ರಾರ್ಥನೆಗೈದರು. ರಜತ ಮಹೋತ್ಸವದ ವೇದಿಕೆಯಲ್ಲಿದ್ದ ಅತಿಥಿ-ಗಣ್ಯರನ್ನು ಪುಣೆ ಬಿಲ್ಲವ ಸಂಘದ ಪರವಾಗಿ ಪದಾಧಿಕಾರಿಗಳು ಪುಣೇರಿ ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು.
ಅಲ್ಲದೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳು, ಸಂಘದ ಅಧ್ಯಕ್ಷರು, ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷರು ಮಹಿಳಾ ವಿಭಾಗದ ಪ್ರಮುಖರನ್ನು ಅತಿಥಿ -ಗಣ್ಯರು ಸಮ್ಮಾನಿಸಿದರು. ಪುಣೆ ಬಿಲ್ಲವ ಸಂಘದ ಬೆಳ್ಳಿ ಮಹೋತ್ಸವದ ಸವಿನೆನಪಿಗಾಗಿ ಹೊರ ತಂದ ಸ್ಮರಣ ಸಂಚಿಕೆಯನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು
ಈ ಕಾರ್ಯಕ್ರಮದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಶೆಟ್ಟಿ, ಪುಣೆ ರೆಸ್ಟೋರೆಂಟ್ ಅÂಂಡ್ ಹೊಟೇಲಿಯರ್ ಅಸೋಸಿಯೇಶನ್‌ನ ಅಧ್ಯಕ್ಷ ಗಣೇಶ್ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಅಧ್ಯಕ್ಷ ನಾರಾಯಣ ಶೆಟ್ಟಿ, ತುಳು ಕೂಟ ಪುಣೆಯ ಅಧ್ಯಕ್ಷ ತಾರಾನಾಥ್ ರೈ, ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿ, ಬಂಟರ ಸಂಘದ ಉತ್ತರ ವಲಯ ಅಧ್ಯಕ್ಷ ದಿನೇಶ್ ಶೆಟ್ಟಿ, ದಕ್ಷಿಣ ವಲಯದ ಅಧ್ಯಕ್ಷ ವಸಂತ್ ಶೆಟ್ಟಿ, ಬಿಲ್ಲವ ಸಂಘ ಪಿಂಪ್ರಿ ಅಧ್ಯಕ್ಷ ಸೋಮಪ್ಪ ಸಾಲ್ಯಾನ್, ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್, ದೇವಾಡಿಗ ಸಂಘದ ಅಧ್ಯಕ್ಷ ಸಚಿನ್ ದೇವಾಡಿಗ ಹಾಗು ಇತರೆ ಬೇರೆ ಬೇರೆ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯ ತುಳುವರು ಪಾಲ್ಗೊಂಡಿದ್ದರು. ಸಂಘ ಸಂಸ್ಥೆಗಳ ಪ್ರಮುಖರನ್ನು ಗೌರವಿಸಲಾಯಿತು.
ಸ್ಮರಣಿಕೆ ನೀಡಿ ಅಭಿನಂದನೆ
ಸಾಂಸðತಿಕ ಕಾರ್ಯಕ್ರಮದ ಅಂಗವಾಗಿ ಪುಣೆಯ ಬಿಲ್ಲವ ಸಮಾಜ ಭಾಂದವರಿಂದ ಮತ್ತು ವಿವಿಧ ನೃತ್ಯ ತಂಡಗಳಿಂದ ವೈವಿಧ್ಯಮಯ ನೃತ್ಯ ಹಾಗು ನೃತ್ಯ ರೂಪಕ, ರಂಗ ಸುದರ್ಶನ ತಂಡ ಸಸಿಹಿತ್ಲು ಮಂಗಳೂರು ಇವರಿಂದ ಕೋಟಿ-ಚೆನ್ನಯರ ತಾಯಿಯ ಕಥೆಯಾದರಿತ ದೇಯಿ ಗೀತ ನಾಟಕ ಪ್ರದರ್ಶನಗೊಂಡಿತು. ಮತ್ತು ಬಿ.ಸಿ. ರೋಡ್ ಅರುಣ್‌ಚಂದ್ರ ಮತ್ತು ತಂಡದವರಿಂದ ಎಂಕುಲು ತೆಲಿಪಾವ ನಿಕುಲು ತೆಲಿಪುಲೇ ಎಂಬ ಹಾಸ್ಯ ಲಹರಿ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪ್ರತಿಯೋರ್ವ ಸದಸ್ಯರಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಯಶಸ್ವಿಗೆ ಪುಣೆ ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಬೆಳ್ಳಿ ಮಹೋತ್ಸವ ಸಮಿತಿ ಸದಸ್ಯರುಗಳು, ಮಹಿಳಾ ವಿಬಾಗದ ಸದಸ್ಯೆಯರು, ಯುವ ವಿಭಾಗ ಮತ್ತು ಸಮಾಜ ಬಾಂಧವರು ಸಹಕರಿಸಿದರು. ಬೆಳಗ್ಗೆಯಿಂದ ರಾತ್ರಿಯವರೆಗೆ ಜರಗಿದ ಸಮಾರಂಭದಲ್ಲಿ ಚಾ ತಿಂಡಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪರಮಾನಂದ ಸಾಲ್ಯಾನ್ ಮಂಗಳೂರು ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ