Advertisement

ಉಡುಪಿ ಜಿಲ್ಲಾ ಬಿಲ್ಲವರ ಮಹಾ ಸಮಾವೇಶ

12:40 AM Feb 03, 2019 | Team Udayavani |

ಉಡುಪಿ: ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ. 3ರ ಅಪರಾಹ್ನ 2 ಗಂಟೆಯಿಂದ 5.30ರ ತನಕ “ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ’ ಜರಗಲಿದೆ.

Advertisement

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಾರ್ಕಳ ಬೊಲೊÂಟ್ಟು ಶ್ರೀ ಗುರುದೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವ ಚನ ನೀಡುವರು. ಸಮಾವೇಶದ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸುವರು.

ವಿಶೇಷ ಆಮಂತ್ರಿತರಾಗಿ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌,ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವೆ ಡಾ| ಜಯಮಾಲಾ ಭಾಗವಹಿಸಲಿದ್ದಾರೆ. ಮುಂಬಯಿ ಸಾಹಿತಿ ಬಾಬು ಶಿವ ಪೂಜಾರಿ ದಿಕ್ಸೂಚಿ ಭಾಷಣಗೈಯ್ಯುವರು. ಮುಖ್ಯ ಅತಿಥಿಗಳಾಗಿ ಶಾಸಕ ರಾದ ವಿ. ಸುನಿಲ್‌ ಕುಮಾರ್‌, ಕುಮಾರ ಬಂಗಾರಪ್ಪ, ಉಮಾನಾಥ ಕೋಟ್ಯಾನ್‌, ಸುನಿಲ್‌ ನಾಯ್ಕ, ಹರತಾಳು ಹಾಲಪ್ಪ, ಹರೀಶ್‌ ಕುಮಾರ್‌ ಬೆಳ್ತಂಗಡಿ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಗಣ್ಯರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಭಾಗ ವಹಿಸುವರು ಎಂದು ಸಮಿತಿಯ ಪ್ರಧಾನ ಸಂಚಾಲಕ ಅಚ್ಯುತ ಅಮೀನ್‌ ಕಲ್ಮಾಡಿ, ಕಾರ್ಯಾಧ್ಯಕ್ಷ ಪ್ರವೀಣ್‌ ಎಂ. ಪೂಜಾರಿ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next