Advertisement
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ದಾನಿಗಳಾದ ವಾಮನ್ ಡಿ. ಪೂಜಾರಿ ಹಾಗೂ ಗೌರವ ಪ್ರಧಾನ ಕೋಶಾಧಿಕಾರಿ, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕ ಎನ್. ಎಂ. ಸನಿಲ್ ಅವರು ದೀಪಪ್ರಜ್ವಲಿಸಿ 24 ಗಂಟೆಗಳ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು, 85ನೇ ಮಹಾಸಭೆಯನ್ನು ಮುಗಿಸಿರುವ ಬಿಲ್ಲವರ ಅಸೋಸಿಯೇಶನ್ ಏಕಾಹ ಭಜನ ಕಾರ್ಯಕ್ರಮವನ್ನು ಜಾತಿ ಮೀರಿ ಎಲ್ಲಾ ಭಜನ ಮಂಡಳಿಗಳ ಸಹಕಾರದೊಂದಿಗೆ ಜರಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂದು ಬೆಳಗ್ಗೆ ಸುರಿದ ಭಾರಿ ಮಳೆಯ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು, ಗುರುಭಕ್ತರು ಪಾಲ್ಗೊಂಡಿರುವುದು ಹೆಮ್ಮೆಯ ಅನಿಸುತ್ತಿದೆ. ಪಾಲ್ಗೊಂಡ ಎಲ್ಲರಿಗೂ ದೇವರ ಆಶೀರ್ವಾದ ಸದಾಯಿರಲಿ ಎಂದು ಹಾರೈಸಿದರು.
ಯುತ್ತಿರಲಿ. ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಬಲಪಡಿಸೋಣ ಎಂದರು. ಇನ್ನೋರ್ವ ಉದ್ಘಾಟಕ ಎನ್. ಎಂ. ಸನಿಲ್ ಮಾತನಾಡಿ, ಅಸೋಸಿಯೇಶನ್ ಸಮಾ ಜದ ಹಿರಿಯರನ್ನು ಆಹ್ವಾನಿಸಿ ಅವರಿಂದ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ಹೆಮ್ಮೆ ಎನಿಸುತ್ತಿದೆ. ಹಿರಿಯರನ್ನು ಗುರುತಿಸಿ ಅವರನ್ನು ಗೌರವಿಸುವ ಗುಣ ನಿರಂತರವಾಗಿ ಮುಂದುವರಿಯಲಿ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಅಧಿಕವಾಗಿ ಪಾಲ್ಗೊಳ್ಳುವಂತೆ ಮಾಡೋಣ ಎಂದರು. ಭಾರತ್ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಎಸ್. ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಶಾಂತಿ, ಜತೆ ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್, ಇತರ ಪದಾಧಿಕಾರಿಗಳಾದ ಧನಂಜಯ್ ಶಾಂತಿ, ಬಿ. ರವೀಂದ್ರ ಅಮೀನ್, ನಿಲೇಶ್ ಪೂಜಾರಿ, ಬೇಬಿ ಕುಕ್ಯಾನ್, ಹರೀಶ್ ಶಾಂತಿ, ಮಹಿಳಾ ವಿಭಾಗದ ಸದಸ್ಯೆಯರು ಹಾಗೂ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಚೇರಿಯ ಸಿಬಂದಿಗಳು ಉಪಸ್ಥಿತರಿದ್ದರು. ನಿರಂತರವಾಗಿ ಜರಗಿದ ಭಜನ ಕಾರ್ಯಕ್ರಮದಲ್ಲಿ ಮುಂಬಯಿಯ 48 ಭಜನ ಮಂಡಳಿಗಳು ಭಾಗವಹಿಸಿದ್ದವು. ಪೂಜಾ ಸಮಿತಿಯ ವಾಸು ಪೂಜಾರಿ, ಸುಧಾಕರ ಪಾಲನ್, ಮೋಹನ್ ಪೂಜಾರಿ, ರತಿ, ಸುಶೀಲಾ, ಸುಮಾ, ಪ್ರೇಮಾ, ಉದಯ್ ಅಂಚನ್ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.