Advertisement

Bill ;ಇನ್ನು 1 ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿ: ಬ್ಯಾಂಕ್‌ ಕಾನೂನಿಗೆ ತಿದ್ದುಪಡಿ

12:33 AM Aug 10, 2024 | Team Udayavani |

ಹೊಸದಿಲ್ಲಿ: ಒಂದು ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿಗಳನ್ನು ಹೆಸರಿಸುವ ಬ್ಯಾಂಕಿಂಗ್‌ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು. ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಮಸೂದೆಯನ್ನು ಸದನದ ಎದುರಿಟ್ಟರು.

Advertisement

ಈ ತಿದ್ದುಪಡಿಯಿಂದ ಬ್ಯಾಂಕ್‌ ಖಾತೆಗಳಿಗೆ ಏಕಕಾಲದಲ್ಲಿ ಗರಿಷ್ಠ ನಾಲ್ವರು ನಾಮಿನಿಗಳನ್ನು ಹೆಸರಿಸಬಹುದು. ಹಾಗೆಯೇ ಪ್ರತೀ ನಾಮಿನಿಗೂ 1ನೇ, 2ನೇ, 3ನೇ, 4ನೇ ಹೀಗೆ ಆದ್ಯತೆ ನೀಡಬಹುದು. ಲಾಭಾಂಶದ ಮೇಲೆ ಹಕ್ಕು ಮಂಡಿಸಲ್ಪಡದ ಹಣ, ಷೇರುಗಳು, ಬಡ್ಡಿ, ಬಾಂಡ್‌ಗಳನ್ನು ಐಇಪಿಎಫ್ಗೆ (ಹೂಡಿಕೆದಾರ ಶಿಕ್ಷಣ ಮತ್ತು ರಕ್ಷಣ ನಿಧಿ) ವರ್ಗಾಯಿಸಲು ಅವಕಾಶವಿದೆ. ಅಲ್ಲದೆ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಸೇವಾವಧಿ ವಿಸ್ತರಣೆಯ ಪ್ರಸ್ತಾವವೂ ಮಸೂದೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next