Advertisement

4 ವರ್ಷ ಸ್ಥಗಿತವಾಗಿದ್ದ ತೇರು ನಡೆಯುತ್ತಾ?

03:06 PM Apr 11, 2021 | Team Udayavani |

ಯಳಂದೂರು: ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಬಿಳಿಗಿರಂಗನಾಥಸ್ವಾಮಿ ದೊಡ್ಡ ಜಾತ್ರೆ ಸ್ಥಗಿತಗೊಂಡು 4 ವರ್ಷ ಕಳೆದಿದ್ದು, ಈ ಬಾರಿಸರಳ, ಸಾಂಪ್ರದಾಯಿಕವಾಗಿ ದೊಡ್ಡ ಜಾತ್ರೆನಡೆಯುವ ಆಸೆ ಚಿಗುರೊಡೆದಿದ್ದು, ಇದಕ್ಕಾಗಿಚಾತಕ ಪಕ್ಷಿಗಳಂತೆ ಕಾದಿದ್ದ ಭಕ್ತರ ಸಂತಸ ಇಮ್ಮಡಿಗೊಂಡಿದೆ.

Advertisement

ಹಳೆಯ ರಥದ ಚಕ್ರಗಳೂ ಸೇರಿದಂತೆ ರಥದ ಮರಮುಟ್ಟುಗಳು ಶಿಥಿಲವಾಗಿತ್ತು. ಇದನ್ನು ಹೊಸದಾಗಿ ನಿರ್ಮಾಣಮಾಡಬೇಕೆಂಬುದು ಭಕ್ತರ ಬಯಕೆಯಾಗಿತ್ತು.ಹೀಗಾಗಿ ಇದನ್ನು ಹೊಸದಾಗಿ ನಿರ್ಮಿಸಲು ಲೋಕೋಪಯೋಗಿ ಇಲಾಖೆಚಾಮರಾಜನಗರ ವತಿಯಿಂದ 2019ಡಿಸೆಂಬರ್‌ನಲ್ಲಿ ಇದರ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. 2020 ರ ಜೂನ್‌ 2 ರಂದು ರಥದನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಅಧಿಕೃತವಾಗಿಚಾಲನೆ ಸಿಕ್ಕಿತ್ತು. ಈಗ ರಥವು ಬಹುತೇಕಪೂರ್ಣಗೊಂಡಿದ್ದು ಏ. 12 ಅಥವಾ 13ರಂದು ಬರುವ ನಿರೀಕ್ಷೆ ಇದೆ. ಇದೆ ತಿಂಗಳ 26ರಂದು ರಥೋತ್ಸವದ ದಿನ ನಿಗದಿಯಾಗಿದ್ದುಈ ಬಾರಿ ತೇರು ನಡೆಯುವ ಬಯಕೆ ಚಿಗುರೊಡೆದಿದೆ.

ಪ್ರತಿ ವರ್ಷ ಬಿಳಿಗಿರಿರಂಗನಬೆಟ್ಟದಲ್ಲಿ ಸಂಕ್ರಾಂತಿ ಮರುದಿನ ಚಿಕ್ಕ ರಥೋತ್ಸವಹಾಗೂ ಏಪ್ರಿಲ್‌ ಅಥವಾ ಮೇ ತಿಂಗಳ ಅವಧಿದೊಡ್ಡಜಾತ್ರೆ ನಡೆಯುತ್ತಿತ್ತು. ಅದರಂತೆ ಈ ಬಾರಿ ಏ.26ರಂದು ದೊಡ್ಡಜಾತ್ರೆಯು ನಡೆಯಲಿದೆ. ಜೀರ್ಣೋದ್ಧಾರಗೊಂಡ ದೇಗುಲಕ್ಕೆ ಈಗಾಗಲೇ ಮಹಾಸಂಪ್ರೋಕ್ಷಣೆ ಮುಗಿದಿದ್ದು, ಭಕ್ತರಿಗೆ ದೇಗುಲ ಮುಕ್ತವಾಗಿದೆ.

ಬಿಳಿಗಿರಿರಂಗಪ್ಪನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನಮಾಡುತ್ತಿದ್ದಾರೆ. ಇದರ ಜೊತೆಗೆ ರಥೋತ್ಸವದಿನ ಕೋವಿಡ್‌-19 ಹಿನ್ನೆಲೆಯಲ್ಲಿಸ್ಥಳೀಯರಿಗೆ ಮಾತ್ರ ಅವಕಾಶವನ್ನು ಕಲ್ಪಿಸಿಹೊರಗಿನವರಿಗೆ ನಿಷೇಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.

90ರಷ್ಟು ಪೂರ್ಣ: ಬಿಳಿಗಿರಂಗನಾಥಸ್ವಾಮಿದೊಡ್ಡ ರಥವನ್ನು ಲೋಕೋಪಯೋಗಿಇಲಾಖೆಯಿಂದ ಕೋಟಿ ವೆಚ್ಚದಲ್ಲಿ ರಥನಿರ್ಮಿಸಲು ಬಿ.ಎಸ್‌. ಬಡಿಗೇರ ಸನ್ಸ್‌ಟೆಂಡರ್‌ ಪಡೆದಿದ್ದಾರೆ. ಈಗಾಗಲೇ ಕಾಮಗಾರಿ ಆರಂಭವಾಗಿ ವರ್ಷ ಕಳೆದಿದೆ.

Advertisement

ಪ್ರಧಾನ ಶಿಲ್ಪಿ ಬಸವರಾಜ್‌ ಬಡಿಗೇರ ಹಾಗೂ15ಕ್ಕೂ ಹೆಚ್ಚು ಸಹ ಶಿಲ್ಪಿಗಳಿಂದ 16 ಅಡಿಎತ್ತರ, 14 ಅಡಿ ಉದ್ದದ ರಥದ ನಿರ್ಮಾಣದಕೆಲಸವನ್ನು 1 ವರ್ಷದಿಂದ ಬೆಂಗಳೂರಿನಕಾಮಾಕ್ಷಿಪಾಳ್ಯದಲ್ಲಿ ಪ್ರಾರಂಭಿಸಿ 90ರಷ್ಟುಕೆಲಸವು ಪೂರ್ಣಗೊಂಡಿದೆ. ಇದಕ್ಕೆ ಅಂತಿಮಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ.

ಕೋವಿಡ್‌ ಸಂಕಷ್ಟ: ಈ ನಡುವೆಮಹಸಂಪ್ರೋಕ್ಷಣೆಯಲ್ಲಿ ಭಾಗವಹಿಸಿದ್ದಜಿಲ್ಲಾಧಿಕಾರಿ, ಅರ್ಚಕರು, ದೇಗುಲದ ನೌಕರರು ಸೇರಿದಂತೆ ಅವರ ಕುಟುಂಬದಲ್ಲಿಒಟ್ಟು 17 ಮಂದಿಗೆ ಕೋವಿಡ್‌ ಸೋಂಕುತಗುಲಿದೆ. ಈ ಸಂಬಂಧ ಈಗಾಗಲೇದೇಗುಲದ ಬಾಗಿಲು ಬಂದ್‌ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದರೆ ದೊಡ್ಡತೇರು ನಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ.ಇವೆಲ್ಲ ಜಿಲ್ಲಾಧಿಕಾರಿಗಳ ನಿರ್ಧಾರದ ಮೇಲೆಇದ್ದು ತೇರು ನಡೆಯುವ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಮೂಡಿಲ್ಲ.

ರಥೋತ್ಸವ ನಡೆಸಲು ಇನ್ನೂ ತೀರ್ಮಾನಿಸಿಲ್ಲ :

ಬಿಳಿಗಿರಿರಂಗನಾಥಸ್ವಾಮಿ ದೊಡ್ಡ ರಥವು ಏ.12 ಅಥವಾ 13 ಕ್ಕೆ ಬೆಟ್ಟಕ್ಕೆ ಬರಬಹುದು ಎಂಬ ಮಾಹಿತಿ ಇದೆ. ಮೊದಲು ಏ.26ರ ದೊಡ್ಡ ರಥೊತ್ಸವ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ರಥೋತ್ಸವ ನಡೆಯುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ಪಾಲಿಸಿ ಕ್ರಮ ವಹಿಸಲಾಗುವುದು ಎಂದು ಬಿಳಿಗಿರಿರಂಗನಬೆಟ್ಟ ದೇಗುಲ ಇಒ ಮೋಹನ್‌ ಕುಮಾರ್‌ ಹೇಳಿದ್ದಾರೆ.

 

– ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next