Advertisement

ಬಿಳಿಗಿರಿ ಮಲ್ಕಿ ಬೆಟ್ಟಕ್ಕೆ ಬೆಂಕಿ: ನೂರಾರು ಎಕರೆ ಅರಣ್ಯ ನಾಶ

10:20 AM Apr 01, 2017 | |

ಸಂತೆಮರಹಳ್ಳಿ (ಚಾಮರಾಜನಗರ): ಸಮೀಪದ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ಬಳಿ ಇರುವ ಮಲ್ಕಿ ಬೆಟ್ಟಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಕಾಡ್ಗಿಚ್ಚಿಗೆ ನೂರಾರು ಎಕರೆ ಸಮೃದ್ಧ ಅರಣ್ಯ ಭಸ್ಮವಾಗಿದೆ.

Advertisement

ಬಿಳಿಗಿರಿರಂಗನ ಬೆಟ್ಟದಿಂದ ಚಾಮರಾಜನಗರಕ್ಕೆ ತೆರಳುವ ರಸ್ತೆಯ ಬಳಿಯ ಮುತ್ತುಗದ ಗದ್ದೆ ಪೋಡಿನ ಮೇಲ್ಭಾಗದಲ್ಲಿರುವ ಮಲ್ಕಿ ಬೆಟ್ಟದಲ್ಲಿ ಮೊದಲಿಗೆ ಬೆಂಕಿಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಸೋಲಿಗರ ನೆರವಿನಿಂದ ಬೆಂಕಿ ನಂದಿಸಲು ಮುಂದಾದರು. ಆದರೆ ಈ ವೇಳೆ ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿಯ ಕೆನ್ನಾಲಿಗೆ ಬೆಟ್ಟದ ಒಂದು ಬದಿಯಿಂದ ರಸ್ತೆಯ ಮತ್ತೂಂದು ಬದಿಗೆ ಬಂದಿತು. ಬೆಂಕಿ ನಂದಿಸಲು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬಳಿಯಿದ್ದುದು ಕಾಡುಸೊಪ್ಪಿನ ಕಡ್ಡಿಗಳು ಮಾತ್ರ. ಹೀಗಾಗಿ ಸಂಜೆಯಾದರೂ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.

ಈ ಭಾಗದಲ್ಲಿ ಲಂಗೂರ್‌ ಮಾದರಿಯ ಕೋತಿಗಳು ಹೆಚ್ಚಾಗಿ ಕಾಣಬರುತ್ತಿದ್ದು, ಅವುಗಳು ಕಾಡುಹಂದಿ, ಚಿಗರೆಗಳ ಜತೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಪ್ರದೇಶಕ್ಕೆ ಓಡುತ್ತಿದ್ದುದು ಕಂಡುಬರುತ್ತಿತ್ತು. ಬಿಆರ್‌ಟಿ ಅರಣ್ಯಧಾಮವು ಹುಲಿ ರಕ್ಷಿತ ಪ್ರದೇಶವಾಗಿ ಘೋಷಣೆಯಾದ ಮೇಲೆ ಬೆಟ್ಟದಲ್ಲಿ ಅರಣ್ಯ ಸಿಬ್ಬಂದಿಯ ಸರ್ಪಗಾವಲಿನ ನಡುವೆಯೂ ಕಿಡಿಗೇಡಿಗಳ ಬೆಂಕಿಗೆ ನೂರಾರು ಎಕರೆ ಅಮೂಲ್ಯ ವನ್ಯ ಸಂಪತ್ತು ನಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next