ನವದೆಹಲಿ: ಪ್ರೇಯಸಿಯ ಸಹೋದರನನ್ನು ಹತ್ಯೆಗೈದ ಆರೋಪದಲ್ಲಿ, ಯೂಟ್ಯೂಬ್ ನಲ್ಲಿ 9 ಲಕ್ಷಕ್ಕಿಂತ ಹೆಚ್ಚಿನ ಸಬ್ ಸ್ಕ್ರೈಬರ್ಸ್ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ನೊಯ್ಡಾದ ನಿಜಾಮುಲ್ ಖಾನ್ (26) ಎಂಬಾತ ಬಂಧಿತ ಆರೋಪಿ. ಈತ ಬೈಕ್ ಸ್ಟಂಟರ್ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದು ಪ್ರಸಿದ್ದಿಯಾಗಿದ್ದ. ಅದರ ಜೊತೆಗೆ ಸುಮಾರು 9 ಲಕ್ಷಕ್ಕಿಂತ ಹೆಚ್ಚಿನ ಸಬ್ ಸ್ಕ್ರೈಬರ್ಸ್ ಹೊಂದಿದ್ದ.
ಈತ ಕಮಲ್ ಶರ್ಮಾ ಎಂಬಾತನ ಸಹೋದರಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದಕ್ಕೆ ಕಮಲ್ ವಿರೋಧ ವ್ಯಕ್ತಪಡಿಸಿದ್ದ. ಮಾತ್ರವಲ್ಲದೆ ನಿಜಾಮುಲ್ ಖಾನ್ ಗೆ ಥಳಿಸಿ, ತಂಗಿಯ ಮೊಬೈಲ್ ಫೋನನ್ನು ಕೂಡ ಕಿತ್ತುಕೊಂಡಿದ್ದ. ಅಕ್ಟೋಬರ್ 28 ರಂದು ತನ್ನ ಸ್ನೇಹಿತರೊಡಗೂಡಿ ಬಂದ ನಿಜಾಮುಲ್, ಕಮಲ್ ಶರ್ಮಾನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಸಿಎಂ ನಕಲಿ ಖಾತೆ ಸೃಷ್ಟಿಸಿ ಮಾಹೆ ಕುಲಸಚಿವರಿಗೆ ಮೇಲ್! ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಈ ಕುರಿತು ಕಮಲ್ ಶರ್ಮಾನ ಸಹೋದರ ನರೇಶ್ ಶರ್ಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ತನಿಖೆಯ ವೇಳೆ ನಿಜಾಮುಲ್, ಯೂಟ್ಯೂಬ್ ನಿಂದ ಬಂದ ಆದಾಯಯದಲ್ಲಿ ತನ್ನಿಬ್ಬರು ಸ್ನೇಹಿತರಾದ ಸುಮೀತ್ ಮತ್ತು ಅಮೀತ್ ಅವರಿಗೂ ಪಾಲು ನೀಡಿ, ಕೊಲೆ ಕೃತ್ಯದಲ್ಲಿ ಭಾಗಿಯಾಗಿಸಿದ್ದೆ ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಹಿರಿಯ ಸಾಹಿತಿ ಜಾವೇದ್ ಅಖ್ತರ್