ಕೋಲಾರ: ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಬೈಕ್ ವ್ಹೀಲಿಂಗ್ ಯುವಕರ ಹಾವಳಿ ಯಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿ ಸುತ್ತಿರುವುದಲ್ಲದೆ ತಮ್ಮ ಪ್ರಾಣಕ್ಕೆ ಎಲ್ಲಿ ಸಂಚಕಾರ ಬರುತ್ತದೆ ಎಂಬ ಆತಂಕದಲ್ಲಿದ್ದಾರೆ.
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಐದಾರು ಬೈಕ್‌ಗಳಲ್ಲಿ ಯುವಕರ ಬೈಕ್ ವ್ಹೀಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀ ಸರು ಜಾಣ ಕುರುಡು ನೀತಿ ಅನುಸರಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಹೆದ್ದಾರಿಯಲ್ಲಿ ಸಾಗುವ ಇತರ ವಾಹನ ಸವಾರ ರಿಗೂ ಪ್ರಾಣಕ್ಕೆ ಕುತ್ತು ತರುತ್ತಿರುವ ಯುವಕರ ವ್ಹೀಲಿಂಗ್ ಚಾಳಿ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ಜಮೀನಿನ ರೈತರಿಗಂತೂ ತಲೆನೋವಾಗಿ ಪರಿಣಮಿಸಿದೆ. ಯಾವಾಗ ಎಂತಹ ಅವಘಡ ಸಂಭವಿಸುತ್ತದೋ ಎಂಬ ಆತಂಕದಲ್ಲಿ ದಿನಗಳನ್ನು ಕಳೆಯುತ್ತಿರುವುದಾಗಿದೆ. ಸ್ಥಳೀಯ ಯುವಕರಷ್ಟೇ ಅಲ್ಲದೆ ಬೆಂಗಳೂರು, ಹೊಸಕೋಟೆ ಕಡೆಯಿಂದಲೂ ಯುವಕರು ಬೈಕ್ ವ್ಹೀಲಿಂಗ್ ಮಾಡಲು ಕೋಲಾ ರದ ಹೆದ್ದಾರಿಗಳಿಗೆ ಬರುತ್ತಾರೆ. ಈಗಾಗಲೇ ಫ್ಲ್ತ್ರೈ ಓವರ್ ಕೆಲವೆಡೆ ಇಲ್ಲದೆ ಅಪಘಾತಗಳ ಸರಣಿ ಹೆಚ್ಚಾಗಿದೆ, ಇದೀಗ ಆ ಪಟ್ಟಿಗೆ ಬೈಕ್ ವ್ಹೀಲಿಂಗ್ ಚಾಳಿ ಸೇರಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬಂಗಾರಪೇಟೆಯಲ್ಲಿ ಓರ್ವ ಯುವಕ ಹಾಗೂ ಇತ್ತೀಚೆಗೆ ಶಿಕ್ಷಕರೊಬ್ಬರು ಬೈಕ್ ವ್ಹೀಲಿಂಗ್ ಚಾಳಿಗೆ ತಮ್ಮ ಪ್ರಾಣ ಬಲಿ ನೀಡಿರುವ ಪ್ರಕರಣಗಳು ಮಾಸುವ ಮುನ್ನವೇ ಹೆದ್ದಾರಿಯಲ್ಲಿ ಯುವಕರ ದಂಡು ಬೈಕ್ ವ್ಹೀಲಿಂಗ್ ಮಾಡಲು ಗುಂಪು ಗುಂಪಾಗಿ ಹೈವೆಗಳಿಗೆ ಲಗ್ಗೆಯಿಡುತ್ತಿರುವುದು ಸಾರ್ವಜನಿಕರಿಗೆ ಆತಂಕ ತಂದಿದೆ. ಬೈಕ್ ವ್ಹೀಲಿಂಗ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚು ಕಾಲೇಜು ಯುವಕರೇ ಬೈಕ್ ವ್ಹೀಲಿಂಗ್ ನಲ್ಲಿ ಭಾಗಿಯಾಗುತ್ತಿದ್ದು, ಇಂತಹವರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಪೋಷಕರು ಸಹ ತಮ್ಮ ಮಕ್ಕಳಿಗೆ ಈ ನಿಟ್ಟಿನಲ್ಲಿ ಬುದ್ಧಿವಾದ ಹೇಳ ಬೇಕಾಗಿದೆ. ಹೈವೆಯಲ್ಲಿ ಯುವಕರ ವ್ಹೀಲಿಂಗ್ ಹುಚ್ಚಾಟಕ್ಕೆ ಪೊಲೀಸರು ಬ್ರೇಕ್ ಹಾಕದಿದ್ದರೆ ಅತಿ ಹೆಚ್ಚು ಜೀವಗಳಿಗೆ ಕುತ್ತು ಬರುವುದರಲ್ಲಿ ಸಂದೇ ಹವೇ ಇಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.