ವೀಕೆಂಡ್ ಅಂದ್ರೆ ಮಾಲ್ ಸುತ್ತಾಟ, ಸಿನಿಮಾ ನೋಡೋದು, ಗಡದ್ದಾಗಿ ನಿದ್ದೆ ಹೊಡೆಯೋದು… ಬೆಂಗಳೂರಿನ ಕ್ರೇಜಿ ಮನಸ್ಸುಗಳನ್ನು ಖುಷ್ ಖುಷಿಯಿಂದ ಹಿಡಿದಿಟ್ಟಿಕೊಂಡಿರುವ ಅಂಶಗಳು ಇವಿಷ್ಟೇ ಅಲ್ಲ. ಕೆಲವರು ವಿಭಿನ್ನತೆಯ ಬೆನ್ನೇರಿ, ವೀಕೆಂಡ್‌ನ ಮಜಾ ಅನುಭವಿಸುತ್ತಾರೆ. ಇಲ್ಲೊಂದಿಷ್ಟು ಮಂದಿ ಕೇವಲ ಬ್ರೇಕ್‌ಫಾಸ್ಟ್‌ಗಾಗಿಯೇ ಒಂದಿಷ್ಟು ದೂರ ಬೈಕ್ ರೈಡ್ ಮಾಡಿಕೊಂಡು, ಹೋಗ್ತಾರೆ. ಅಲ್ಲೆಲ್ಲೋ ಒಂದು ಕಡೆಯಲ್ಲಿ ಒಟ್ಟಿಗೆ ಕುಳಿತು, ಆ ಪರಿಸರದ ಸೌಂದರ್ಯವನ್ನು ಆಸ್ವಾದಿಸುತ್ತಾ, ಬ್ರೇಕ್‌ಫಾಸ್ಟ್ ಮುಗಿಸುತ್ತಾರೆ. ನಿಮ್ಮ ಬಳಿ ಬೈಕ್ ಇದ್ದರೆ, ಈ ಗೆಳೆಯರ ಜೊತೆ ನೀವೂ ಟಾಪ್‌ಗೆàರ್‌ನಲ್ಲಿ ಹೊರಡಬಹುದು.
ಹೌದು, ವೀಕೆಂಡ್ ಬ್ರೇಕ್‌ಫಾಸ್ಟ್ ಕಂಪನಿ ಈ ಸಲ ಹೊರಟಿರುವುದು ಮಂದಾರಗಿರಿ ಬೆಟ್ಟದ ಕಡೆಗೆ. ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಈ ಬೆಟ್ಟದ ಮೇಲೆ ಪ್ರಸಿದ್ಧ ಜೈನಮಂದಿರವಿದೆ. ಅಲ್ಲದೇ, ಚಂದ್ರನಾಥ ತೀರ್ಥಂಕರರ ಏಕಶಿಲಾ ಮೂರ್ತಿಯನ್ನೂ ಇಲ್ಲಿ ಕಾಣಬಹುದು. ಮನಸ್ಸಿಗೆ ಪ್ರಶಾಂತತೆ ತುಂಬಲು, ಇಲ್ಲೊಂದು ಕೊಳವೂ ಇದೆ. ಅಲ್ಲಿನ ತಂಪು ವಾತಾವರಣಕ್ಕೆ ಒತ್ತಡವನ್ನು ಕರಗಿಸುವ ಶಕ್ತಿಯಿದೆ.
435 ಮೆಟ್ಟಿಲುಗಳನ್ನು ಹತ್ತಿ ಈ ಬೆಟ್ಟವನ್ನೇರುವುದೇ ಒಂದು ಮಜಾ. ಈ ಚಾರಣವು ಶ್ರವಣಬೆಳಗೊಳವನ್ನು ನೆನಪಿಸದಿದ್ದರೆ ಕೇಳಿ. ಆದರೆ, ಬಾಹುಬಲಿಯ ಬೆಟ್ಟದಷ್ಟು ಏರುಗತಿಯಲ್ಲಿ ಇದು ಇಲ್ಲದೇ ಇದ್ದರೂ, 10-15 ನಿಮಿಷದ ಚಾರಣ ಚಾಲೆಂಜಿಂಗ್ ಅಂತೂ ಹೌದು. ಈ ಬೆಟ್ಟದ ಬುಡದಲ್ಲಿಯೇ ಬ್ರೇಕ್‌ಫಾಸ್ಟ್ ಅನ್ನೂ ಸವಿಯಬಹುದು. ಕೆಲ ಹೊತ್ತು ಈ ಬೆಟ್ಟದ ಮೇಲೆ ಕಳೆದು, ಮನಸ್ಸನ್ನು ಹಗುರ ಮಾಡಿಕೊಂಡು, ಪುನಃ ಬೈಕನ್ನೇರಿ ಬೆಂಗಳೂರನ್ನು ಸೇರಬಹುದು. ಸಮಾನಮನಸ್ಕರ ಈ ಬ್ರೇಕ್‌ಫಾಸ್ಟ್ ಬೈಕ್‌ಟ್ರಿಪ್‌ನಲ್ಲಿ ನೀವೂ ಪಾಲ್ಗೊಂಡು, ಥ್ರಿಲ್ ಅನುಭವಿಸಬಹುದು.
ಯಾವಾಗ?: ಸೆ.2, ಭಾನುವಾರ, ಬೆ.6
ಎಲ್ಲಿಗೆ?: ಮಂದಾರಗಿರಿ ಬೆಟ್ಟ
ದೂರ: 70 ಕಿ.ಮೀ.
ಆರಂಭ ತಾಣ: ಎನ್‌ಜಿವಿ ಕಾಂಪ್ಲೆಕ್ಸ್, ಕೋರಮಂಗಲ
ಪ್ರವೇಶ: 300 ರೂ. (ಒಬ್ಬರಿಗೆ)
ಹೆಚ್ಚಿನ ಮಾಹಿತಿಗೆ: https://goo.gl/c9TRcv