Advertisement
ಜೇಬಿನಲ್ಲಿ ಕೈ ಹಾಕಿಕೊಂಡು ಮಾತನಾಡಿದಕ್ಕೆ ಆಕ್ರೋಶಗೊಂಡ ಬಾಣಸವಾಡಿ ಪಿಎಸ್‌ಐ ಮುರಳಿ, ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ಮಾಲೀಕ ಸತೀಶ್ ಆದಲ್ ಮತ್ತು ಇವರ ಪುತ್ರ ಸಾಮ್ಸನ್ ಮೇಲೆ ಶನಿವಾರ ಸಂಜೆ ಲಾಠಿ ಪ್ರಹಾರ ಮಾಡಿದ್ದು, ತಡೆವಾಗಿ ಬೆಳಕಿಗೆ ಬಂದಿದೆ.
Related Articles
Advertisement
ಇದರಿಂದ ಆಕ್ರೋಶಗೊಂಡ ಪಿಎಸ್‌ಐ “ನನ್ನ ಎದುರೇ ಜೇಬಿಗೆ ಕೈ ಹಾಕಿಕೊಂಡು ಮಾತನಾಡುತ್ತಿಯಾ’ ನಿಂದಿಸಿದ್ದಾರೆ. ಇದಕ್ಕೆ ಸತೀಶ್, ನಾನು ಡಯಾಲಿಸಿಸ್ ರೋಗಿ ಕೈ ನಡುಗುತ್ತವೆ, ಹೀಗಾಗಿ ಜೇಬಿನಲ್ಲಿ ಕೈ ಹಾಕಿಕೊಂಡಿದ್ದೇನೆ ಎಂದು ಮನವಿ ಮಾಡಿದರೂ, ಪಿಎಸ್‌ಐ ಸುಳ್ಳು ಹೇಳುತ್ತಿಯಾ ಎಂದು ಹಲ್ಲೆ ನಡೆಸಿದ್ದಾರೆ.
ಪುತ್ರನ ಮೇಲೂ ಹಲ್ಲೆ: ಇದನ್ನು ಕಂಡ ಪುತ್ರ ಸಾಮ್ಸನ್ ಅಂಗಡಿಯಿಂದ ಹೊರಬಂದು ತಂದೆ ಸ್ಥಿತಿ ವಿವರಿಸಿ, ಹಲ್ಲೆ ನಡೆಸದಿರಲು ಮನವಿ ಮಾಡಿದ್ದಾನೆ. ಇನ್ನಷ್ಟು ಕೋಪಗೊಂಡ ಮುರಳಿ ಈತನ ಮೇಲೂ ಹಲ್ಲೆ ನಡೆಸಿದ್ದಾರೆ. ಠಾಣೆಗೆ ಕರೆದೊಯ್ದು ತಂದೆ-ಮಗನ ಮೇಲೆ ಲಾಠಿ ಪ್ರಹಾರ ಮಾಡಿದ್ದು, ಪರಿಣಾಮ ಬಾಸುಂಡೆಗಳು ಬಿಂದಿವೆ. ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದಾರೆ.
ವಿಚಾರ ತಿಳಿದು ಠಾಣೆಗೆ ಹೋದ ಸತೀಶ್ ಪತ್ನಿ, ಸಂಬಂಧಿಕರ ಜತೆ ಕೂಡ ಪಿಎಸ್‌ಐ ಮುರಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆಕೆಯನ್ನೂ ಮುರಳಿ ಬೆದರಿಸಿ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಂದೆ-ಮಗ ಗುರುವಾರ ದಸಂಸ ಸಂಘಟನೆ ಜೊತೆಗೂಡಿ ಅಧಿಕಾರಿ ಅಮಾನತಿಗೆ ಪ್ರತಿಭಟನೆ ನಡೆಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಜಪ್ತಿ ಮಾಡಿದ ಬೈಕ್‌ಗಳನ್ನು ಬಿಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಹಲ್ಲೆ ಆಗಿಲ್ಲ. ಆದರೂ ಘಟನೆ ಕುರಿತು ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.-ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಿಭಾಗ ಪಿಎಸ್‌ಐ ಮುರಳಿ ದೌರ್ಜನ್ಯದ ವಿರುದ್ಧ ಸಂಘಟನೆಯಿಂದ ಆರೋಪಿತ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಲಾಗಿದೆ.
-ವೇದಮಾಣಿಕ್ಯಂ, ದಲಿತ ಸಂಘಟನೆ ಮುಖಂಡ