Advertisement

ಶೋಕಿಗಾಗಿ ಬೈಕ್‌ ಕಳ್ಳತನ, ದ್ವಿಚಕ್ರ ವಾಹನ ಜಪ್ತಿ

11:59 AM Jun 12, 2022 | Team Udayavani |

ಬೆಂಗಳೂರು: ಶೋಕಿ ಜೀವನಕ್ಕಾಗಿ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೆ.ಪಿ.ಅಗ್ರಹಾರದ ಮಸ್ತಾನ್‌(26) ಬಂಧಿತ. ಇದೇ ವೇಳೆ ಕಾನೂನು ಸಂಘರ್ಷಕ್ಕೊಳಗಾದವನನ್ನು ವಶಕ್ಕೆ ಪಡೆ ಯಲಾಗಿದೆ. ಇಬ್ಬರಿಂದ 5 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮೇ 22ರಂದು ರಾತ್ರಿ ವ್ಯಕ್ತಿಯೊಬ್ಬರು ತಮ್ಮ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳವುವಾಗಿತ್ತು. ಈ ಸಂಬಂಧ ಬಂಧಿಸಲಾಗಿದೆ.

ಆರೋಪಿ ಮಸ್ತಾನ್‌, ಅಪ್ರಾಪ್ತ ಬಾಲಕನ ಜತೆ ಸೇರಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಅವರ ಬಂಧನದಿಂದ ವಿಜಯನಗರ, ಜೆ.ಜೆ. ನಗರ, ಕೆ.ಜಿ.ಹಳ್ಳಿ, ಹೆಣ್ಣೂರು, ರಾಮಮೂರ್ತಿ ನಗರ, ವೈಟ್‌ಫೀಲ್ಡ್‌, ಚನ್ನಮ್ಮನಕೆರೆ ಅಚ್ಚುಕಟ್ಟು ಸೇರಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 11 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಒಎಲ್‌ಎಕ್ಸ್‌ನಲ್ಲಿ ಲ್ಯಾಪ್‌ಟಾಪ್‌ ತೋರಿಸಿ ವಂಚನೆ : 

ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಲ್ಯಾಪ್‌ಟಾಪ್‌ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿ, ಅದನ್ನು ಗಮನಿಸಿ ಸಂಪರ್ಕಿಸುತ್ತಿದ್ದ ಗ್ರಾಹಕರಿಗೆ ಪಾರ್ಸೆಲ್‌ ಶುಲ್ಕ ಎಂದು ಹಣ ಸುಲಿಗೆ ಮಾಡುತ್ತಿದ್ದ ದೆಹಲಿ ಮೂಲದ ವಂಚಕನನ್ನು ಈಶಾನ್ಯ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿ ಮೂಲದ ಅಮನ್‌ ಕುಮಾರ್‌ (20) ಬಂಧಿತ. ಈತನಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಒಎಲ್‌ಎಕ್ಸ್‌ ನಲ್ಲಿ ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸಲು ಹುಡುಕುವಾಗ 1.50 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್‌ ಗಮನಿಸಿದ್ದಾರೆ. ಬಳಿಕ ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಆರೋಪಿ, ಪಾರ್ಸೆಲ್‌ ಶುಲ್ಕ, ಪ್ಯಾಕಿಂಗ್‌ ಶುಲ್ಕ ಎಂದೆಲ್ಲ ಸುಮಾರು 72 ಸಾವಿರ ರೂ. ಪಡೆದುಕೊಂಡಿದ್ದಾನೆ. ಬಳಿಕ ದೂರುದಾರರ ವಿಳಾಸಕ್ಕೆ ಪಾರ್ಸೆಲ್‌ ಬಂದಿದ್ದು, ಅದನ್ನು ತೆರೆದು ನೋಡಿದಾಗ ಲ್ಯಾಪ್‌ಟಾಪ್‌ ಇರುವುದಿಲ್ಲ.

ಈ ಸಂಬಂಧ ದೂರು ನೀಡಿದ್ದರು. ಈ ಸಂಬಂಧ ದೂರು ನೀಡಿದ್ದು, ಆರೋಪಿಯ ಮೊಬೈಲ್‌ ಸಿಡಿಆರ್‌ ಹಾಗೂ ಇತರೆ ತಾಂತ್ರಿಕ ತನಿಖೆ ನಡೆಸಿ ಆತನನ್ನು ಬಂಧಿಸಲಾಗಿದೆ. ಈತನ ಇತರರಿಗೂ ಇದೇ ರೀತಿ ಯಲ್ಲಿ ವಂಚನೆ ಮಾಡಿರುವ ಮಾಹಿತಿಯಿದ್ದು, ವಿಚಾರಣೆ ಮುಂದುವರಿದಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next