Advertisement

Udupi: ಬೈಕ್‌ ಕಳವು ಪ್ರಕರಣ; ಆರೋಪಿ ಬಂಧನ

11:49 PM Aug 07, 2024 | Team Udayavani |

ಉಡುಪಿ: ಆರು ತಿಂಗಳ ಹಿಂದೆ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಬ್ರಹ್ಮಾವರದ ನಿವಾಸಿಯಾದ  ಪ್ರಕಾಶ್‌ ನಾಯಕ್‌ ಎಂಬವನನ್ನು ಪೊಲೀಸರು ಬಂಧಿಸಿ, ಬೈಕ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಮಣ್ಣಪಳ್ಳ ಎಂಜೆಸಿ ಕಾಲೇಜು ಬಳಿ ಬರುತ್ತಿದ್ದ ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದುದ ಕಂಡು ಅನುಮಾನವುಂಟಾಗಿ ಪೋಲೀಸರು ಆತನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆತನ ಪೂರ್ವಪರ ಪರೀಕ್ಷಿಸಿದ ಪೊಲೀಸರಿಗೆ ಆತನ ಬಳಿ ಈ ಹಿಂದೆ  ಕಳವು ಮಾಡಿ ತಂದ ಬೈಕ್‌ ಇರುವುದು ಕಂಡುಬಂದಿದೆ. ಆ ಕೂಡಲೇ ಆತನನ್ನು ಹಾಗೂ ಬೈಕ್‌ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆಯ ನಿರೀಕ್ಷಕ ದೇವರಾಜ್‌ ಟಿ.ವಿ., ಪೊಲೀಸ್‌ ಉಪನಿರೀಕ್ಷಕ ರಾಘವೇಂದ್ರ, ಸಿಬಂದಿಗಳಾದ ಇಮ್ರಾನ್‌, ಪ್ರಸನ್ನ ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next