Advertisement

ದೆಹಲಿಯಲ್ಲಿ ಬೈಕ್‌ ಟ್ಯಾಕ್ಸಿಗೆ ಬಿತ್ತು ಬ್ರೇಕ್‌: ರ್‍ಯಾಪಿಡೋ, ಓಲಾ, ಊಬರ್‌ಗೆ ಪೆಟ್ಟು

06:37 PM Feb 21, 2023 | Team Udayavani |

ನವದೆಹಲಿ: ದೆಹಲಿ ಸರ್ಕಾರ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ರ್ಯಾಫಿಡೋ, ಓಲಾ, ಊಬರ್‌ಗೆ ಮರ್ಮಾಘಾತವಾದಂತಿದೆ.

Advertisement

ದೆಹಲಿಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಬಿಳಿ ಬಣ್ಣದ ನಂಬರ್‌ ಪ್ಲೇಟ್‌ ಹೊಂದಿರುವ (ಖಾಸಗಿ) ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಖಾಸಗಿ ವಾಹನವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುವುದು 1988ರ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ. ಈ ಕಾರಣದಿಂದಲೇ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿರುವುದು ಕೇವಲ ಟ್ಯಾಕ್ಸಿ ಕಂಪನಿಗಳಿಗಷ್ಟೇ ಅಲ್ಲದೇ ಪ್ರಯಾಣಿಕರಿಗೂ ಬಿಸಿತುಪ್ಪವಾಗಿ ಪರಿಣಮಿಸಲಿದೆ.

ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರದಲ್ಲಿ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡಿದ ಬೆನ್ನಲ್ಲೇ ಇದೀಗ ದೆಹಲಿ ಸರ್ಕಾರವೂ ಈ ಮಹತ್ವದ ಆದೇಶ ಹೊರಹಾಕಿದೆ. ಈ ಬೈಕ್‌ ಟ್ಯಾಕ್ಸಿಗಳು ನಿಯಮ ಉಲ್ಲಂಘಿಸುವುದಲ್ಲದೆ, ಇದರಲ್ಲಿ ತುರ್ತು ಕ್ರಮದ ಬಟನ್‌ ಇಲ್ಲದಿರುವುದರಿಂದ ಮಹಿಳೆಯರ ಸುರಕ್ಷತೆಗೆ ಇದು ಸೂಕ್ತವಲ್ಲ ಎಂಬುದಾಗಿಯೂ ಅಭಿಪ್ರಾಯ ಪಟ್ಟಿದೆ..

ಅಲ್ಲದೇ ಸರ್ಕಾರದ ಆದೇಶ ಮೀರಿ ಬೈಕ್‌ ಟ್ಯಾಕ್ಸಿ ಚಲಾಯಿಸಿದ್ರೆ 5,000 ರೂ ದಂಡವನ್ನೂ ವಿಧಿಸಲಾಗುತ್ತದೆ. ಎರಡನೇ ಬಾರಿಯೂ ಸಿಕ್ಕಿಬಿದ್ರೆ 10,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ದೆಹಲಿ ಸಾರಿಗೆ ಇಲಾಖೆ ಖಡಕ್‌ ಸೂಚನೆ ನೀಡಿದೆ.

ಒಲಾ, ಊಬರ್‌, ರ್‍ಯಾಪಿಡೋ ಇತ್ಯಾದಿ ಬೈಕ್‌ ಟ್ಯಾಕ್ಸಿಗಳೊಂದಿಗೆ ನೊಂದಾಯಿಸಲ್ಪಟ್ಟಿರುವ ಬೈಕ್‌ಗಳ ಮಾಹಿತಿಯನ್ನು ಸಾರಿಗೆ ಇಲಾಖೆ ಈಗಾಗಲೇ ತರಿಸಿಕೊಂಡಿದೆ. ತಪ್ಪು ಪುನರಾವರ್ತನೆಯಾದರೆ ಕನಿಷ್ಟ 3 ವರ್ಷಗಳವರೆಗೆ ಲೈಸೆನ್ಸ್‌ ನಿಷೇಧಗೊಳಿಸಲಾಗುವುದು ಎಂದು ಹೇಳಿದೆ.

Advertisement

ಬಾಡಿಗೆ ವಾಹನಗಳನ್ನು ಓಡಿಸಬೇಕಿದ್ರೆ ರಿಜಿಸ್ಟ್ರೇಷನ್‌ ಮಾರ್ಕ್‌ ಜೊತೆಗೆ ಹಳದಿ ಬಣ್ಣದ ನಂಬರ್‌ ಪ್ಲೇಟ್‌ ಹೊಂದಿರಬೇಕು. ಪೋಲಿಸ್‌ ತಪಾಸಣೆ ಬಳಿಕ PSV ಬ್ಯಾಜ್‌ ನೀಡಲಾಗುತ್ತದೆ. ಅಲ್ಲದೇ ಡ್ರೈವರ್‌ಗಳು ವಿಶೇಷ ವ್ಯಕ್ತಿತ್ವ ತಪಾಸಣೆಗೂ ಒಳಗಾಗಬೇಕಾಗುತ್ತದೆ.

ಈ ಬಗ್ಗೆ ಹೊರಡಿಸಿರುವ ಆದೇಶದ ಪ್ರತಿಯನ್ನುದೆಹಲಿಯ ಸಾರಿಗೆ ಸಚಿವ ಕೈಲಾಷ್‌ ಗೆಹ್ಲೋಟ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next