Advertisement

25  ಲಕ್ಷ ಮೌಲ್ಯದ 32 ಬೈಕ್‌ ಕದ್ದವನ ಸೆರೆ

11:27 AM Nov 11, 2021 | Team Udayavani |

ಆನೇಕಲ್‌: ಇಪ್ಪತೈದು ಲಕ್ಷ ಮೌಲ್ಯದ 32 ಬೈಕ್‌ಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆನೇಕಲ್‌ ಉಪ ವಿಭಾಗದ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಗುಡಿಯಾತಂ ತಾಲೂಕಿನ ಕಾರಂಪಟ್ಟಿ ಗ್ರಾಮದ ಶರತ್‌ಬಾಬು (38) ಬಂಧಿತ. ಆರೋಪಿ ಚಾಲಕನಾಗಿದ್ದಾನೆ.

Advertisement

ಆನೇಕಲ್‌ ತಾಲೂಕಾದ್ಯಂತ ಪದೇ ಪದೆ ಬೈಕ್‌ ಕಳ್ಳತನ ಹೆಚ್ಚಾದ ಬೆನ್ನಲ್ಲಿ ಎಸ್ಪಿ ಡಾ.ಕೆ. ವಂಶಿಕೃಷ್ಣ, ಎಎಸ್ಪಿ ಕೆ.ಲಕ್ಷಿ$¾ಗಣೇಶ್‌, ಡಿವೈಎಸ್ಪಿ ಎಂ. ಮಲ್ಲೇಶ್‌, ಪಿಐ ಸುದರ್ಶನ್‌ ಎಚ್‌.ವಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಜಿಗಣಿ ಎಸ್‌ಐ ಶಿವಲಿಂಗನಾಯ್ಕ, ಎಚ್‌.ಸಿ. ರಾಜಣ್ಣ, ಎಲ್‌.ರಾಜು, ಮಹೇಶ್‌.ಕೆ.ಕೆ, ರಾಜೇಶ್‌ ಎಂ, ಪಿಸಿಗಳಾದ ಕೋಟೇಶ್‌, ಶಿವಪ್ರಸಾದ್‌ ಮತ್ತು ಮೆಹಬೂಬ್‌ ಶೇಖ್‌ ತಂಡ ಆರೋಪಿಯ ಚಲನವಲನವನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಜಿಗಣಿ, ಬನ್ನೇರುಘಟ್ಟ, ಆನೇಕಲ್‌ ಮತ್ತಿತರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಬೈಕ್‌ ಗಳನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಬೈಕ್‌ ಸಮೇತ ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.

ಸತತ ನಾಲ್ಕು ತಿಂಗಳುಗಳಲ್ಲಿ ಮನೆಗಳ ಬಳಿ, ಬೈಕ್‌ ನಿಲ್ದಾಣಗಳಲ್ಲಿ ಮತ್ತು ರಸ್ತೆ ಬದಿನಿಲ್ಲಿಸಿದ್ದ ಬೈಕ್‌ಳನ್ನು ಕಳವು ಮಾಡುತ್ತಿದ್ದಾಗಿ ವಿಚಾರಣೆಯಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ. ಆರೋಪಿಯಿಂದ ಬೈಕ್‌ಗಳನ್ನು ವಶಪಡಿಸಿ ಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಪೊಲೀಸರು ಸಿದ್ಧತೆಯಲ್ಲಿದ್ದು ಬೈಕ್‌ ಕಳೆದು ಕೊಂಡವರಿಗೆ ಮರಳಿ ಒಪ್ಪಿಸುವಲ್ಲಿ ಕ್ರಮ ಕೈಗೊಳ್ಳಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next