Advertisement

ಅಸಿಟೈಲಿನ್‌ನಿಂದ ಬೈಕ್‌ ಚಾಲನೆ : ಸಾಗರದ ಗ್ರಾಮೀಣ ಯುವಕನ ಸಾಧನೆ

01:26 AM Feb 14, 2021 | Team Udayavani |

ಸಾಗರ: ಪರ್ಯಾಯ ಇಂಧನಗಳ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿರುವ ಕಾಲಘಟ್ಟದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಸಹಪಾಠಿಗಳ ಜತೆ ಸೇರಿ ಅಸಿ ಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಲಾಯಿ ಸುವ ಆವಿಷ್ಕಾರ ಮಾಡಿ ಗಮನ ಸೆಳೆದಿದ್ದಾನೆ.

Advertisement

ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಜಿನಿಯರಿಂಗ್‌ ವಿದ್ಯಾರ್ಥಿ, ಮೂಲತಃ ಸಾಗರ ತಾಲೂಕಿನ ಹಂದಿಗೋಡಿನ ಎಚ್‌.ಎಸ್‌. ಗೌತಮ್‌ ಅವರು ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ನೀರಿನ ವೇಪರೈಸರ್‌ ಮೂಲಕ ರಾಸಾಯನಿಕ ಕ್ರಿಯೆ ಘಟಿಸಿದಾಗ ಉತ್ಪತ್ತಿಯಾಗುವ ಅಸಿಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಲಾಯಿಸುವ ಆವಿಷ್ಕಾರ ಮಾಡಿದ್ದು, ಅದನ್ನು ರಾಷ್ಟ್ರೀಯ ಸ್ಪರ್ಧೆಗೆ ಸಲ್ಲಿಸಿದ್ದಾರೆ. ಮೊದಲ ಮತ್ತು 2ನೇ ಸುತ್ತಿನಲ್ಲಿ ಆಯ್ಕೆಯಾದ ಪ್ರಾಜೆಕ್ಟ್ ಈಗ ಫಿನಾಲೆ ಹಂತದಲ್ಲಿದೆ.

ಈ ತಂತ್ರಜ್ಞಾನದಿಂದ ಪೆಟ್ರೋಲ್‌ಗಿಂತ ಹೆಚ್ಚಿನ ಕಿ.ಮೀ. ಕ್ಷಮತೆಯನ್ನು ಪಡೆಯಬಹುದು. ಒಂದು ಲೀ. ಪೆಟ್ರೋಲ್‌ನಲ್ಲಿ ಹಳ್ಳಿಗಾಡಿನ ರಸ್ತೆಯಲ್ಲಿ ಗರಿಷ್ಠ 59 ಕಿ.ಮೀ. ಮೈಲೇಜ್‌ ಸಿಕ್ಕಿದರೆ ಅಸಿಟೈಲಿನ್‌ ಅನಿಲದಿಂದ 66 ಕಿ.ಮೀ.ವರೆಗೆ ಮೈಲೇಜ್‌ ಪಡೆಯಬಹುದು ಎಂದು ಪ್ರತಿಪಾದಿಸಲಾಗುತ್ತಿದೆ. ಗೌತಮ್‌ ತನ್ನ ತಂದೆಯ ದ್ವಿಚಕ್ರ ವಾಹನಕ್ಕೆ ಪ್ರತ್ಯೇಕ ಟ್ಯಾಂಕ್‌ ಅಳವಡಿಸಿ, ಅಸಿಟೈಲಿನ್‌ ಅನಿಲವನ್ನು ಇಂಧನವಾಗಿ ಬಳಸಿ ಪರೀಕ್ಷಿಸಿದ್ದು, ಫಲಿತಾಂಶ ಆಶಾದಾಯಕವಾಗಿದೆ.

ಇವರು ಎಚ್‌.ಪಿ. ಶ್ರೀಧರ ಹಾಗೂ ರೋಹಿಣಿ ದಂಪತಿಯ ಪುತ್ರ. ಇವರ ತಂಡದಲ್ಲಿ ಎಚ್‌.ಎಸ್‌. ಗೌತಮ್‌, ವಿಶಾಲ ಸರ್‌ವಂದ್‌, ಎಚ್‌.ಎಸ್‌. ವಸಿಷ್ಠ ಮತ್ತು ರಾಮದಾಸ್‌ ಅವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next