Advertisement

ಹಾಯಾಗಿ ಬೈಕ್ ಓಡಿಸುತ್ತೆ ಈ ನಾಯಿ : ವೀಡಿಯೋ ವೈರಲ್

09:41 AM Oct 29, 2019 | Team Udayavani |

ಹದಿನೆಂಟು ವರ್ಷ ತುಂಬಿತ್ತಾ? ಹಾಗಾದರೆ ಒಂದು ಲೈಸನ್ಸ್ ಮಾಡಬೇಕು, ಒಂದು ಹೊಸ ಬೈಕ್ ಖರೀದಿಸಬೇಕು ಅನ್ನುವ ಯಾವ ಚಿಂತೆಯೋ ಇಲ್ಲದೆ ಇಲ್ಲೊಂದು ನಾಯಿ ಬಿಂದಾಸ್ ಆಗಿ ತನ್ನ ಹಿಂದೆ ಇಬ್ಬರನ್ನು ಕೂರಿಸಿಕೊಂಡು ಬೈಕ್ ಓಡಿಸಿದೆ.!

Advertisement

ಹೌದು. ಈ ಸುದ್ದಿ ಕೇಳಿ ಒಂದು ಕ್ಷಣಕ್ಕೆ ಆಶ್ಚರ್ಯವಾಗಿದ್ರೂ, ಆಗಿರುವುದು ನಿಜ. ಬ್ರೆಜಿಲ್ ನಗರದ ಬೀದಿಯಲ್ಲಿ ಬೈಕ್ ಓಡಿಸುವ ನಾಯಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಯಿ ಬೈಕ್ ನ  ಆಕ್ಸಿಲೇಟರ್ ಅನ್ನು ತನ್ನ ಎರಡು ಕೈ ಗಳಿಂದ ಹಿಡಿದು ತನ್ನ ಹಿಂದೆ ಇಬ್ಬರನ್ನೂ ಕೂರಿಸಿಕೊಂಡು ಹಾಯಾಗಿ ಬೈಕ್ ಓಡಿಸುವ ವೀಡಿಯೋ ಸಾಮಾಜಿಕ ಜಾಲತಾನ ಟ್ವಿಟರ್ ಸೇರಿದಂತೆ ಎಲ್ಲೆಡೆ ವೈರಲ್ ಆಗಿ ಹರಿದಾಡುತ್ತಿದೆ.

ಟ್ವಿಟರ್ ನಲ್ಲಿ ಜನ ಈ ವೀಡಿಯೋದ ಬಗ್ಗೆ ಹಲವು ಹಾಸ್ಯಾಸ್ಪದ ಆಯಾಮದಲ್ಲಿ ಚರ್ಚಿಸುತ್ತಿದ್ದು, ಕೆಲವರಂತೂ ನಾಯಿಗೂ ಹೆಲ್ಮೆಟ್ ಇರಬೇಕಿತ್ತು ಎಂದು ಬಣ್ಣಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next