Advertisement

Madikeri ಬಾಲಕ ಚಲಾಯಿಸಿದ ಟ್ರ್ಯಾಕ್ಟರ್‌ ಢಿಕ್ಕಿಯಾಗಿ ಬೈಕ್‌ ಸವಾರ ಸಾವು

12:44 AM Jun 02, 2024 | Team Udayavani |

ಮಡಿಕೇರಿ: ಅಪ್ರಾಪ್ತ ವಯಸ್ಕ ಚಲಾಯಿಸಿದ ಟ್ರ್ಯಾಕ್ಟರ್‌ ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಸುಂದರನಗರದಲ್ಲಿ ಮೇ 31ರಂದು ಬೈಕ್‌ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಟ್ರ್ಯಾಕ್ಟರ್‌ ಮಾಲಕರಾದ ಬಾಲಕನ ತಾಯಿ ಸುಂದರನಗರ ವಿನಾ ಯಕ ಬಡವಾಣೆ ತುಳಸಿ ಹಾಗೂ ತಂದೆ ಪರ ಮೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಕುಶಾಲನಗರ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಚಿಕ್ಕತ್ತೂರು ಗ್ರಾಮದ ನಿವಾಸಿ ಶಿವಶಂಕರ್‌ (22) ಮೃತಪಟ್ಟಿದ್ದರು.

ಅಪ್ರಾಪ್ತ ವಯಸ್ಸಿನ ಆರೋಪಿ 2023 ಮೇ 31ರಂದು ಸುಂದರನಗರ ಹಾರಂಗಿ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಚಲಾಯಿಸುತ್ತಿದ್ದ ಸಂದರ್ಭ ಪಾದಚಾರಿಗೆ ಢಿಕ್ಕಿಯಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ನ್ಯಾಯಾಲಯದಿಂದ ಶಿಕ್ಷೆಯೂ ಆಗಿತ್ತು.

ಎಸ್‌ಪಿ ಎಚ್ಚರಿಕೆ
ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಮಾಲಕರು ಅಪ್ರಾಪ್ತ ವಯಸ್ಕರಿಗೆ ಹಾಗೂ ವಾಹನ ಚಾಲನೆ ಪರವಾನಿಗೆ ಇಲ್ಲದವರಿಗೆ ವಾಹನ ನೀಡಬಾರದು. ಮಕ್ಕಳು ವಾಹನ ಚಲಾಯಿಸುವುದು ಕಂಡುಬಂದಲ್ಲಿ ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಎಚ್ಚರಿಕೆ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರ ಬಗ್ಗೆ ಮಾಹಿತಿ ನೀಡಿ ಸಹಕರಿಸುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.

ಬಾಯ್ಲರ್‌ ದುರಸ್ತಿ ಮಾಡುತ್ತಿದ್ದಾಗ
340 ಡಿಗ್ರಿ ಶಾಖಕ್ಕೆ ಯುವಕ ಸಾವು
ಮಡಿಕೇರಿ: ಬಾಯ್ಲರ್‌ ದುರಸ್ತಿ ಮಾಡುತ್ತಿದ್ದ ವೇಳೆ ಅದರಿಂದ ಭಾರೀ ಪ್ರಮಾಣದ ಶಾಖ ಹೊರ ಬಂದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ.

Advertisement

ಚಿಕ್ಕಮಗಳೂರಿನ ಹೊರವಲಯ ವಿದ್ಯಾ ಕಾಫಿ ಕ್ಯೂರಿಂಗ್‌ನಲ್ಲಿ ಬಾಯ್ಲರ್‌ ದುರಸ್ತಿ ಮಾಡುತ್ತಿದ್ದ ಮಡಿಕೇರಿ ಕುಶಾಲನಗರದ ಉದಯ್‌ (27) ಮೃತಪಟ್ಟವರು. ಅವರು ಶಾಖದ ತೀವ್ರತೆಗೆ ಸುಟ್ಟು ಕರಕಲಾಗಿದ್ದಾರೆ. ದುರಸ್ತಿ ಮಾಡುತ್ತಿದ್ದಾಗ ಏಕಾಏಕಿ 340 ಡಿಗ್ರಿ ಶಾಖ ಹೊರಬಂದ ಪರಿಣಾಮ ದುರಂತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next