Advertisement

ನೂರಾರು ಯುವಕರ ಜಾಲಿರೈಡ್‌:ಏರ್‌ಪೋರ್ಟ್‌ ರಸ್ತೆಯಲ್ಲಿ ಅವಘಡ;ಓರ್ವ ಬಲಿ

11:34 AM Jul 29, 2018 | Team Udayavani |

ಬೆಂಗಳೂರು : ಭಾನುವಾರ ಬೆಳಗ್ಗೆ ನಂದಿ ಬೆಟ್ಟಕ್ಕೆ ಜಾಲಿ ರೈಡ್‌ ಹೊರಟಿದ್ದ ನೂರಾರು ವಿದ್ಯಾರ್ಥಿಗಳ ತಂಡದ ಪೈಕಿ ಒಂದು ಬೈಕ್‌ ಏರ್‌ಪೋರ್ಟ್‌ ರಸ್ತೆಯ ಕೊಡಿಗೆ ಹಳ್ಳಿ ಬಳಿ ಫ್ಲೈ ಓವರ್‌ನಲ್ಲಿ ಅವಘಡಕ್ಕೀಡಾಗಿ ಓರ್ವ ಯುವಕ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು , ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

Advertisement

ಮೃತ ಯುವಕ ಕೇರಳ ಮೂಲದ ನಿಷಾದ್‌ ಎಂದು ತಿಳಿದು ಬಂದಿದ್ದು, ಬೈಕ್‌ನಲ್ಲಿ ಸಹ ಸವಾರನಾಗಿದ್ದ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ. ಮೃತ ಯುವಕ ಮೆಡಿಕಲ್‌ ಕೋರ್ಸ್‌ ಮುಗಿಸಿದ್ದಾನೆ ಎಂದು ಹೇಳಲಾಗಿದೆ. 

ಘಟನೆಯ ಬಳಿಕ ಏರ್‌ಪೋರ್ಟ್‌ ರಸ್ತೆಯ ಫ್ಲೈ ಓವರ್‌ ಮೇಲೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ವಾಹನ ಸವಾರರು ಪರದಾಡಬೇಕಾಯಿತು. ಅತೀ ವೇಗದಲ್ಲಿ ಸಾಗುತ್ತಿದ್ದ  ಬೈಕ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿಯಾಗಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿ ವಾಹನ ಸವಾರರು ಹೇಳಿದ್ದಾರೆ. 

ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next