Advertisement
ಘಟನೆ ವಿವರ:ಕೂಲಿ ಕಾರ್ಮಿಕರಾದ ವಾಸು ಮತ್ತು ಕೃಷ್ಣ ಸ್ನೇಹಿತರು. ಕೃಷ್ಣ ಆಗಾಗ ವಾಸು ಮನೆಗೆ ಬಂದು ಹೋಗುತ್ತಿದ್ದರು. ಕೃಷ್ಣ ರವಿವಾರ ವಾಸುವಿನ ಮನೆಗೆ ಬಂದಾಗ, ಆತನ ಪತ್ನಿ ಅನಾರೋಗ್ಯದಿಂದಿರುವುದು ತಿಳಿಯಿತು. ಆಕೆ ಕೃಷ್ಣ ಅವರಲ್ಲಿ ಶಂಕರನಾರಾಯಣಕ್ಕೆ ಹೋಗಿ ಔಷಧ ತಂದುಕೊಡುವಂತೆ ಕೇಳಿಕೊಂಡಿದ್ದರು. ಆಗ ವಾಸು ಮಗಳು ಸಿಂಚನಾ ತಾನೂ ಬರುತ್ತೇನೆಂದು ಹಟ ಹಿಡಿದ ಕಾರಣ ಆಕೆಯನ್ನು ಜತೆಯಲ್ಲಿ ಕರೆದುಕೊಂಡು ಹೋದರು. ಶಂಕರನಾರಾಯಣದಿಂದ ವಾಪಸ್ ಮನೆಗೆ ಹೊರಡುವಾಗ ಮಳೆ ಆರಂಭವಾಯಿತು. ಆದರೂ ಮಳೆಯಲ್ಲೇ ಬೈಕ್ ಚಲಾಯಿಸಿಕೊಂಡು ಹೋಗುವಾಗ, ಕಲ್ಲನಕೆರೆ ಅಮ್ಮ ಸಭಾಭವನದ ಹತ್ತಿರ ಅಪಘಾತ ಸಂಭವಿಸಿತು.
ವಾಸು ದಂಪತಿಗೆ ಸಿಂಚನಾ ಏಕೈಕ ಪುತ್ರಿಯಾಗಿದ್ದು ಮನೆ ಹಾಗೂ ಅಂಗನವಾಡಿಯಲ್ಲಿ ಅತಿ ಚುರುಕಿನ ಹುಡುಗಿಯಾಗಿದ್ದಳು. ಪುತ್ರಿಯನ್ನು ಕಳೆದುಕೊಂಡ ದಂಪತಿ ಬೈಲೂರು ಮನೆ ಬಿಟ್ಟು ಕುಂದಾಪುರದ ಮೂಲ ಮನೆಯಲ್ಲಿ ವಾಸವಾಗಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.